ಸಹಕಾರ, ಆದರ್ಶ ಅಭಿನಂದನಾರ್ಹ ವಿಷಯಗಳಾಗಿವೆ: ಡಾ. ಡಿ.ಎಲ್.ರಮೇಶ್ಗೋಪಾಲ್
ಲೋಕದರ್ಶನ ವರದಿ
ಬಳ್ಳಾರಿ 30:ಕಾಲನಿ ನಿವಾಸಿಗಳೆಲ್ಲಾ ಒಂದೇ ಕಡೆ ಸೇರಿ ಪ್ರತಿ ವರ್ಷ ಈ ರೀತಿ ಸಂಭ್ರಮೆಗಳನ್ನು ಆಚರಿಸಿಕೊಳ್ಳುವುದು ಸಂತೋಷಕರ ವಿಷಯ. ಒಗ್ಗಟ್ಟಿನಿಂದ ಕಾಲನಿ ಪ್ರಜೆಗಳೆಲ್ಲಾ ಒಬ್ಬರಿಗೊಬ್ಬರು ಪ್ರತಿ ವಿಷಯದಲ್ಲೂ ಸಹಕಾರ ನೀಡುತ್ತಾ ಎಲ್ಲಾ ವಿಷಯಗಳಲ್ಲೂ ಇತರರಿಗೆ ಆದರ್ಶವಾಗಿರುವುದು ಅಭಿನಂದನಾರ್ಹ ಎಂದು ಆರ್ಯ ವೈಶ್ಯ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ಡಿ.ಎಲ್.ರಮೇಶ್ಗೋಪಾಲ್ ಹೇಳಿದರು. ನಗರದ ಅತ್ಯಂತ ಪ್ರಮುಖವಾದ ಕಾಲನಿ ಎಂದು ಹೆಸರು ಗಳಿಸಿದ ಅಗಡಿ ಮಾರೆಪ್ಪ ಕಾಂಪೌಂಡ್ನಲ್ಲಿ ಸಂಕ್ರಾಂತಿ ಸಂಭ್ರಮೆಗಳನ್ನು ಅತ್ಯಂತ, ಉತ್ಸಾಹವಾಗಿ, ಉಲ್ಲಾಸವಾಗಿ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಬ್ರೂಸ್ಪೇಟೆ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಈ.ಕಾಳಿಕೃಷ್ಣ, ಸಬ್ ಇನ್ಸ್ಪೆಕ್ಟರ್ ನಿರಂಜನ್, ಶ್ರೀ ಶಬರಿ ಅಯ್ಯಪ್ಪ ಸೇವಾ ಟ್ರಸ್ಟ್ನ ಅಧ್ಯಕ್ಷರಾದ ಜಯಪ್ರಕಾಶ್ ಗುಪ್ತ, ಪೋಲಾ ರಾಧಾಕೃಷ್ಣ ಭಾಗವಹಿಸಿ ಎಲ್ಲರೂ ಕೂಡಿಕೊಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸರ್ಕಲ್ ಇನ್ಸ್ಪೆಕ್ಟರ್ ಕಾಳಿಕೃಷ್ಣ ಕಾಲನಿಗಳಲ್ಲಿ ವಸ್ತುಗಳನ್ನು ಮಾರಾಟ ಮಾಡಲು ಬರುವ ಹೊಸ ಯುವಕರ ಮೇಲೆ ಹದ್ದಿನ ಕಣ್ಣು ಇಡಬೇಕೆಂದು ತಿಳಿಸಿದರು. ಸಾರ್ವಜನಿಕರು ಬೇರೊಂದು ಊರಿಗೆ ಹೋದಾಗ ಕಡ್ಡಾಯವಾಗಿ ಅಕ್ಕಪಕ್ಕದವರಿಗೆ ಹಾಗೂ ಆ ಕಾಲನಿಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ತೆರಳಬೇಕೆಂದರು. ಮನೆಯಲ್ಲಿ ವಯಸ್ಸಾದ ವೃದ್ಧರಿದ್ದಲ್ಲಿ ಅವರ ರಕ್ಷಣೆಗೆ ಪೊಲೀಸರನ್ನು ನೇಮಿಸಲಾಗುತ್ತದೆ ಎಂದು ತಿಳಿಸಿದರು. ಕಾಲನಿಯ ಎಲ್ಲಾ ಕಡೆ ಸಿಸಿ ಕ್ಯಾಮೆರಾಗಳನ್ನಿರಿಸಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು, ಯಾವುದೇ ರೀತಿಯ ಅನುಮಾನ ಕಂಡುಬಂದಲ್ಲಿ ಕೂಡಲೆ ತಮಗೆ ಮಾಹಿತಿ ನೀಡಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸೊಂತ ಗಿರಿಧರ್, ಗಾದೆಂ ಗೋಪಾಲಕೃಷ್ಣ, ನಾಗಭೂಷಣ, ಕಾಲನಿ ಪ್ರಮುಖರಾದ ಜಯಂತಿ ಕಿಶೋರ್, ಅಧ್ಯಕ್ಷರಾದ ರಮೇಶ್, ಕಾರ್ಯದಶರ್ಿ ಜಿ.ಕೆ.ಶಿವಪ್ರಸಾದ್, ಮದನ್ಗೋಪಾಲ್, ಹಂಪಾರೆಡ್ಡಿ, ಸುಬ್ಬಾರಾವ್, ಸುಬ್ಬರಾಜು, ವೀಣಾರಾಜ್, ವಕೀಲರಾದ ಎನ್.ಪ್ರಕಾಶ್, ಸೊಂತ ಬಾಬು, ಬಾಲಾಜಿ, ಹನುಮೇಶ್, ವುಂಕಾ ರಮೇಶ್ ಮುಂತಾದವರು ಭಾಗವಹಿಸಿದ್ದರು. ನಂತರ ಚಿಕ್ಕ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಕಣ್ಮನ ಸೆಳೆಯಿತು.