ಸತತ ಅಭ್ಯಾಸ ಕಠಿಣ ಪರಿಶ್ರಮ ಏನ್ನನ್ನಾದರೂ ಸಾಧಿಸಬಹುದು: ಶ್ರೀರಾಮುಲು
ಬಳ್ಳಾರಿ 09: ಜೀವನದಲ್ಲಿ ಸತತ ಅಭ್ಯಾಸ ಮತ್ತು ಕಠಿಣ ಪರಿಶ್ರಮದಿಂದ ಏನ್ನನ್ನಾ ದರೂ ಸಾಧಿಸಬಹುದು ಎಂದು ಭಾರತೀಯ ಆಡಳಿತ ಸೇವೆಗಳ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಂಧ ಯುವಕ ಶ್ರೀರಾಮುಲು ಅಭಿಪ್ರಾಯಪಟ್ಟರು. ಅವರು ನಗರದ ರಾಘವ ಕಲಾಮಂದಿರದಲ್ಲಿ ನಡೆದ ಪ್ರಥಮ್ ಪಬ್ಲಿಕ್ ಸ್ಕೂಲ್ನ ವಾಷರ್ಿಕೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ವಿದ್ಯಾಥರ್ಿಗಳು ಪರೀಕ್ಷೆಯ ಭಯವನ್ನು ಬಿಟ್ಟು ಮೋಬೈಲ್ನಲ್ಲಿ ಹೆಚ್ಚು ಸಮಯ ಕಳೆಯದೆ ಸಮಯ ಪಾಲನೆ ಮತ್ತು ಅಭ್ಯಾಸದಲ್ಲಿ ತೊಡಗಿಕೊಂಡಲ್ಲಿ ಪರೀಕ್ಷೆಯನ್ನು ಎದುರಿಸುವುದು ಅತ್ಯಂತ ಸುಲಭ ಎಂದರು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ ಆದಷ್ಟು ನೀರು ಮತ್ತು ಆಹಾರಕ್ಕೆ ಪ್ಲಾಸ್ಟಿಕ್ ಡಬ್ಬಗಳನ್ನು ಬಳಸಬಾರದು ಎಂದು ವಿದ್ಯಾಥರ್ಿಗಳನ್ನು ಎಚ್ಚರಿಸಿದರು.ಕಾರ್ಯಕ್ರಮದಲ್ಲಿ ಪ್ರಥಮ್ ಪಬ್ಲಿಕ್ ಸ್ಕೂಲ್ನ ಅಧ್ಯಕ್ಷರಾದ ಎಂ.ರಾಜ್ಕುಮಾರ್, ಪ್ರಾಂಶುಪಾಲರಾದ ವಿಜಯ್ಲಕ್ಷ್ಮಿ, ಜಿ.ಶ್ರೀರಾಮುಲು, ಸ್ವಾತಿ, ಶಾಲೆಯ ಶಿಕ್ಷಕ ಶಿಕ್ಷಕಿಯರು, ಸಿಬ್ಬಂದಿ, ವಿದ್ಯಾಥರ್ಿಗಳು ಹಾಗೂ ಅವರ ಪೋಷಕರು ಉಪಸ್ಥಿತರಿದ್ದರು. ಕೊನೆಯಲ್ಲಿ ಶಾಲೆಯ ವಿದ್ಯಾಥರ್ಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.