ಕುಷ್ಠರೋಗ ಮುಕ್ತ ಜಿಲ್ಲೆಯಾಗಿಸಲು ನಿರಂತರ ಅರಿವು ಅಗತ್ಯ: ಡಾ. ಮುನಿರಾಜು
ಬಳ್ಳಾರಿ 24:ಬಳ್ಳಾರಿಯನ್ನು ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಲು ನಿರಂತರವಾಗಿ ಜಾಗೃತಿಯ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಕುಷ್ಠರೋಗ ನಿಮರ್ೂಲನಾ ಕಾರ್ಯಕ್ರಮದ ಜಂಟಿ ನಿದರ್ೇಶಕ ಡಾ.ಕೆ.ಎಂ.ಮುನಿರಾಜು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾಯರ್ಾಲಯದ ಸಭಾಂಗಣದಲ್ಲಿ ಇತ್ತಿಚೆಗೆ ಕುಷ್ಠರೋಗ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವೈದ್ಯಾಧಿಕಾರಿಗಳು ಮತ್ತು ಮೇಲ್ವಿಚಾರಣ ಸಿಬ್ಬಂದಿಯವರಿಂದ ರೋಗ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳ ಮಾಹಿತಿ ಪಡೆದು, ಎಲ್ಲರ ಪರಿಶ್ರಮದಿಂದ ಕಳೆದ ವರ್ಷ ಡಿಸೆಂಬರ್ ಅಂತ್ಯದವರೆಗೆ ಒಟ್ಟು 97 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರಕರಣಗಳು ಕಡಿಮೆಯಾಗುವಂತೆ ನಿರಂತರವಾಗಿ ಜಾಗೃತಿ ನೀಡುವುದರ ಜೊತೆಗೆ ಹೊಸದಾಗಿ ಪತ್ತೆ ಮಾಡಲ್ಪಟ್ಟ ರೋಗಿಗಳಿಗೆ ಚಿಕಿತ್ಸೆಯನ್ನು ತಪ್ಪದೇ ನೀಡುವಲ್ಲಿ ಕಾಳಜಿ ವಹಿಸಬೇಕು ಎಂದರು. ಜನವರಿ 30 ರಿಂದ ಫೆಬ್ರವರಿ 13 ರವರೆಗೆ ಜಿಲ್ಲೆಯಲ್ಲಿ ನಡೆಯುವ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನದಲ್ಲಿ ಅಗತ್ಯವಾಗಿ ಮನೆಗಳ ಭೇಟಿಯ ವೇಳೆ ರೋಗದ ಕುರಿತು ಸಂಪೂರ್ಣ ಮಾಹಿತಿ ನೀಡಿ, ರೋಗ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಬೇಕು. ಕುಷ್ಠರೋಗವು ಮುಖ್ಯವಾಗಿ ನರ ಮತ್ತು ಚರ್ಮದ ಖಾಯಿಲೆಯಾಗಿದ್ದು ರೋಗದ ಲಕ್ಷಣಗಳನ್ನಾಧರಿಸಿ ಚಿಕಿತ್ಸೆ ಪಡೆಯಬಹುದಾಗಿದೆ.
ಈ ರೋಗವು ವಂಶಪಾರಂಪರ್ಯವಲ್ಲ ಹಾಗೂ ಪಾಪ, ಶಾಪಗಳಿಂದ ಬರುವುದಿಲ್ಲ. ಮುಖ್ಯವಾಗಿ ಕುಷ್ಠರೋಗಿಯನ್ನು ನಾವು ಗೌರವಯುತವಾಗಿ ಕಾಣುವುದು ಅಗತ್ಯವಾಗಿದೆ ಎಂದರು. ದೇಹದ ಯಾವುದೇ ಭಾಗದ ಮೇಲೆ ಸ್ಪರ್ಶ ಜ್ಞಾನವಿಲ್ಲದ ಬಿಳಿ ತಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳು ಕೈ-ಕಾಲುಗಳಲ್ಲಿ ಜೋಮು ಉಂಟಾಗುವುದು. ಮುಖ ಮತ್ತು ಕಿವಿಯ ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳುವುದು ಮತ್ತು ಎಣ್ಣೆ ಸವರಿರುವಂತೆ ಚರ್ಮ ಕಾಣಿಸುವುದು. ಮಚ್ಚೆಗಳನ್ನು ಗುಪ್ತವಾಗಿರಸದೆ ವೈದ್ಯರಿಗೆ ತೋರಿಸಬೇಕು.
ಈ ರೋಗವನ್ನು ಬಹುವಿಧ ಔಷಧಿ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಬಹುದು. ಬಹುವಿಧ ಔಷಧಿ ಎಲ್ಲಾ ಸಕರ್ಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತದೆ ಎಂದರು. ಸಭೆಯಲ್ಲಿ ಜಿಲ್ಲಾ ಕುಷ್ಠರೋಗ ನಿಯಂತ್ರಣಾ ಕಾರ್ಯಕ್ರಮ ಅಧಿಕಾರಿ ಡಾ.ರಾಜಶೇಖರ ರೆಡ್ಡಿ.ಟಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ನಿದರ್ೇಶನಾಲಯದ ಸಿಬ್ಬಂದಿ ಅರುಣಕುಮಾರ, ಜಿಲ್ಲಾ ನ್ಯೂಕ್ಲಿಯಸ್ ತಂಡದ ತಂಗಮ್ಮ, ಸುಮನ್, ಮಲ್ಲಿಕಾಜರ್ುನ, ಹೆಚ್ ಹುಲಗಪ್ಪ, ನರಸಿಂಹ ಮೂತರ್ಿ, ಪೂಣರ್ೀಮ ಸೇರಿದಂತೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.