ಸಂವಿಧಾನ ದಿನಾಚರಣೆ: ಕಾನೂನು ಅರಿವು ಕಾರ್ಯಕ್ರಮ
ಘಟಪ್ರಭಾ: ಸ್ಥಳೀಯ ಶಿವಾನಂದ ಮಹಾಸ್ವಾಮೀಜಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತದ ಸಂವಿಧಾನ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಹಾಗೂ ಉಪನ್ಯಾಸಕ ಪ್ರವೀಣ್ ತಳವಾರ್ ಹಾಗೂ ನ್ಯಾಯವಾದಿಗಳಾದ ಕೆಂಪಣ್ಣಾ ಚೌಕಾಶಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಭಾರತದ ಸಂವಿಧಾನದ ಬಗ್ಗೆ ಹಾಗೂ ಕಾನೂನು ವಿಧಿ ವಿಧಾನಗಳ ಬಗ್ಗೆ ವಿದ್ಯಾಥರ್ಿಗಳಿಗೆ ಅರಿವು ಮೂಡಿಸಿದರು.
ಶ್ರೀಕಾಂತ್ ಕುಲಕರ್ಣಿ , ಶ್ರೀಕಾಂತ್ ಮಾಜನ್, ದಡ್ಡಿಕರ್ ಸರ್, ಜಿ.ಪಂ ಮಾಜಿ ಸದಸ್ಯ ಸುಧೀರ್ ಜೋಡಟ್ಟಿ, ಸಮಾಜ ಸೇವಕರಾದ ಸುರೇಶ್ ಪಾಟೀಲ್, ನಿವೃತ್ತ ಉಪ ತಹಶೀಲ್ದಾರ ಪುಂಡಲಿಕರಾವ್ ಗಂಡವ್ವಗೋಳ, ಕನ್ನಡ ರಕ್ಷಣಾ ವೇದಿಕೆ ಸದಸ್ಯರಾದ ಶಶಿಧರ್ ಚೌಕಾಶಿ, ದಲಿತರ ಮುಖಂಡ ಕೃಷ್ಣ ಗಂಡವ್ವಗೊಳ, ಅಸ್ಲಿಪ್ಲಸ್ ವೆಲ್ನೆಸ್ ತಂಡದವರಾದ ಆರ್.ಪಿ.ಪಟೇಲ್, ಮಧ್ಯಪ್ರದೇಶದ ಭೂಪಾಲ್, ಹಾಗೂ ಪರಶುರಾಮ್ ಪೂಜಾರಿ, ಕೆಂಪಣ್ಣಾ ಕೊಳದೂರ್, ಶಿವಾನಂದ ಮಹಾಸ್ವಾಮೀಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸಂಸ್ಥಾಪಕ ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿ , ಮುಖ್ಯೋಪಾಧ್ಯಾಯರಾದ ಡಾ.ಅಶೋಕ್ ಸವರ್ಿ, ಹಾಗೂ ಶಿಕ್ಷಕ ಸಿಬ್ಬಂದಿ ವರ್ಗದವರು ಸೇರಿದಂತೆ ಅನೇಕರು ಇದ್ದರು.