ದಿ. 08 ರಂದು ಪಟ್ಟಣಕ್ಕೆ ಸಂವಿಧಾನ ಜಾಗೃತಿ ಜಾಥಾ
ಯರಗಟ್ಟಿ 05: ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಅಂಗೀಕರಿಸಿಕೊಂಡ 75ನೇ ವರ್ಷಾಚರಣೆ ಅಂಗವಾಗಿ ಕರ್ನಾಟಕ ಸರಕಾರವು "ಸಂವಿಧಾನ ಜಾಗೃತಿ ಜಾಥಾ"ವನ್ನು ರಾಜ್ಯಾಂದ್ಯಂತ 26ನೇ ಜನೇವರಿ 2024ರಿಂದ ಹಮ್ಮಿಕೊಂಡಿದೆ.
ಈ ಕುರಿತು ಯರಗಟ್ಟಿ ತಹಶೀಲ್ದಾರ ಕಚೇರಿಯಲ್ಲಿ ಪೂರ್ವಭಾವಿ ಸಭೆಯನ್ನು ಏರಿ್ಡಸಲಾಗಿತ್ತು. ಸದರಿ ಕಾರ್ಯಕ್ರಮದ ಕುರಿತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಾತನಾಡಿದರು.
ಜಾಗೃತಿ ಜಾಥಾವು ಬೆಳಗಾವಿ ಜಿಲ್ಲೆಯಾದ್ಯಂತ ಸಂಚರಿಸುತ್ತ ದಿ. 07ರಂದು ಬೆಳಿಗ್ಗೆ: 10:30ಕ್ಕೆ ಸವದತ್ತಿ ಪಟ್ಟಣದ ಶಿವಾಜಿ ಸರ್ಕಲಕ್ಕೆ ಆಗಮಿಸುತ್ತದೆ. ಸಂವಿಧಾನ ಜಾಗೃತಿ ಜಾಥಾ ವಾಹನವನ್ನು ಶಾಸಕ ವಿಶ್ವಾಸ ವೈದ್ಯ ಅವರು ಮಾಲಾರೆ್ಣ ಮಾಡುವುದರೊಂದಿಗೆ ಬರಮಾಡಿಕೊಳ್ಳುವರು. ತದನಂತರ "ಸಂವಿಧಾನ ಜಾಗೃತಿ ಜಾಥಾ"ವು ಭವ್ಯ ಮೆರವಣಿಗೆಯ ಮೂಲಕ, ಧಾರವಾಡ ರಸ್ತೆಯ ಕರಿಕಟ್ಟಿ ಕ್ರಾಸ್, ಬಸವ ಸರ್ಕಲ್, ಎಸ್.ಎಲ್.ಎ.ಓ. ಸರ್ಕಲ್ ಮೂಲಕ ಪೊಲೀಸ್ ಸ್ಟೇಷನ್ ಮುಂದೆ ಹಾದು ಅಂಬೇಡ್ಕರ್ ಉದ್ಯಾನವನಕ್ಕೆ ಸೇರುವುದು. ಇಲ್ಲಿ ಗಣ್ಯರಿಂದ ಡಾ. ಬಿ.ಆರ್. ಅಂಬೇಡ್ಕರ್ ಮೂರ್ತಿಗೆ ಮಾಲಾರೆ್ಣ, ಸಂವಿಧಾನ ಪಿಠೀಕೆ ವಾಚನ ಮಾಡುವುದು. ಆದ್ದರಿಂದ ಸವದತ್ತಿ ಪಟ್ಟಣದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ. ನಂತರ ದಿ. 08 ರಂದು ಬೆಳಿಗ್ಗೆ ಯರಗಟ್ಟಿ ತಾಲೂಕಿಗೆ ಬೀಳ್ಕೊಡಲಾಗುವುದು. ಯರಗಟ್ಟಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ತಾಲೂಕು ಆಡಳಿತದಿಂದ ಜಾಥಾವನ್ನು ಸ್ವಾಗತಿಸಲಾಗುವುದು. ಸದರಿ ಕಾರ್ಯಕ್ರಮದಲ್ಲಿ ಸವದತ್ತಿ-ಯರಗಟ್ಟಿ ತಾಲೂಕಿನ ಶಾಲಾ-ಕಾಲೇಜು ಮಕ್ಕಳು ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆರ್. ಆರ್. ಕುಲಕರ್ಣಿ ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಎಮ್.ಎನ್. ಮಠದ, ಪ.ಪಂ. ಮುಖ್ಯಾಧಿಕಾರಿ ಡಿ. ಎನ್. ತಹಶೀಲ್ದಾರ, ಕಸಾಪ ಅಧ್ಯಕ್ಷ ತಮ್ಮಣ್ಣ ಕಾಮಣ್ಣವರ, ಸೋಮು ಮಾಳಗಿ, ದಲಿತ ಮುಖಂಡರಾದ ವಿಲ್ಸನ್ ಸೊಪ್ಪಡ್ಲ, ಲಕ್ಕಪ್ಪ ಹುಣಶೀಕಟ್ಟಿ, ಬಾಬು ಚನ್ನಮೇತ್ರಿ, ಚಿದಂಬರ ಕಟ್ಟಿಮನಿ, ಯಲ್ಲಪ್ಪ ಪಟ್ಟಪ್ಪನವರ, ಲಂಕೇಶ ಮೇತ್ರಿ, ಹನುಮಂತ ತಳವಾರ, ಹನುಮಂತ ಕಳಸಪ್ಪನವರ ಸೇರಿದಂತೆ ಅನೇಕ ಇದ್ದರು.