ತಾಳಿಕೋಟಿ

ಕಾಂಗ್ರೇಸ್ ಶಾಸಕಿ ಖರ್ಗೆ ಮಹಿಳೆಯರ ಕ್ಷಮೆ ಕೇಳಲಿ: ಕೂಚಬಾಳ

ಕಾಂಗ್ರೇಸ್ ಶಾಸಕಿ ಖರ್ಗೆ  ಮಹಿಳೆಯರ ಕ್ಷಮೆ ಕೇಳಲಿ: ಕೂಚಬಾಳ

 ರಾಷ್ಟ ಭಕ್ತರನ್ನು ಅಪಮಾನಿಸುವ ಕೆಲಸ ಕಾಂಗ್ರೆಸ್ನಿಂದ ನಡೆದಿದೆ

ತಾಳಿಕೋಟೆ16: ಕಾಂಗ್ರಸ್ ಶಾಸಕಿ ಪ್ರಿಯಾಂಕ ಖರ್ಗೆ  ನೀಡಿರುವ ಹೇಳಿಕೆ ದೇಶದ ಮಹಿಳೆಯರನ್ನು ಅಪಮಾನಿಸಿದ್ದು ಕೂಡಲೇ ಖರ್ಗೆ  ಅವರು ಮಹಿಳೆಯರ ಕ್ಷಮೆ ಕೋರಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಹೇಳಿದರು.

 ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರದಲ್ಲಿ ಎಲ್ಲ ರಂಘದಲ್ಲಿಯೂ ಸಹ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಅವರು ಪ್ರತಿಭೆಯಿಂದಲೇ ಗುರುತಿಸಿಕೊಂಡವರಾಗಿದ್ದಾರೆ. ಖರ್ಗೆ  ಹೇಳಿಕೆಯಿಂದ ಮಹಿಳೆಯರ ಪ್ರತಿಭೆಗೆ ಅಪಮಾನಿಸಿಂದಾಗಿದೆ. ಕೂಡಲೇ ಪ್ರಿಯಾಂಕ ಖರ್ಗೆ  ಮಹಿಳೆಯರ ಕ್ಷಮೆ ಕೇಳಬೇಕು. ಪ್ರಧಾನಿ ನರೇಂದ್ರ ಮೋದಿಯವರ ಹರ ಘರ ತಿರಂಗಾ ಕೆರೆಗೆ ಇಡಿ ದೇಶದಲ್ಲಿ ಜ್ಯಾತಾತೀತವಾಗಿ ಒಂದೂಗೂಡಿ ಖರ್ಗೆ   ಮಹೋತ್ಸವವನ್ನು ಆಚರಿಸುತ್ತಿದ್ದಾರೆ. ಒಂದು ಕಾಲದಲ್ಲಿ ಲಾಲ್ ಚೌಕದಲ್ಲಿಯೇ ತ್ರಿವರ್ಣ ಧ್ವಜವನ್ನು ಹಾರಿಸಲು ಅಡ್ಡಿಪಡಿಸುತ್ತಿದ್ದ ಕಾಶ್ಮಿರದ ಪ್ರತಿ ಮನೆ ಮನೆಯಲ್ಲಿಯೂ ಸಹ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತಿದೆ. 370 ಕಲಂ ರದ್ದತಿಯಿಂದಾಗಿ ಕಾಶ್ಮೀರ ಅಭಿವೃದ್ದಿಯತ್ತ ಸಾಗಿದೆ. ಬಿಜೆಪಿ ಪಕ್ಷ ದೇಶಾಭಿಮಾನವನ್ನು ಮೈಗೂಡಿಸಿಕೊಂಡ ಪಕ್ಷವಾಗಿದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸ್ವಾತಂತ್ರ ಹೋರಾಟದಲ್ಲಿ ಬಿಜೆಪಿ ಕೊಡುಗೆ ಏನು ಎಂದು ಕೇಳುತ್ತಾರೆ. ಇವತ್ತಿನ ಯಾವ ಕಾಂಗ್ರೇಸ್ ನಾಯಕರುಸ್ವಾತಂತ್ರ್ಯಹೋರಾಟದಲ್ಲಿ ಹುಟ್ಟಿದ್ದಿಲ್ಲ. ವೀರಸಾವರ್ಕರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಸಾವರಕ ಇಡಿ ಕುಟುಂಬ ಸ್ವಾತಂತ್ರ ಸಂಗ್ರಾಮದಲ್ಲಿ ತೊಡಗಿಕೊಂಡಿದ್ದರು. ರಾಷ್ಟ್ರ ಭಕ್ತರ ಬಗ್ಗೆ ಹಗುರ ಮಾತು ಬೇಡ. ಆರ್ಎಸ್ಎಸ್ ಬಗ್ಗೆ ಸಂಘಟನೆ ಹುಟ್ಟಿನ ಬಗ್ಗೆ ತಿಳುದುಕೊಳ್ಳಿ, ಸ್ವಾತಂತ್ರ ಪೂರ್ವದಲ್ಲಿ ಕಾಂಗ್ರಸ್ ಕೇವಲ ಒಂದು ಸಂಘಟನೆಯಾಗಿತ್ತು. ಸ್ವಾತಂತ್ರ ಕೇವಲ ಒಬ್ಬ ವ್ಯಕ್ತಿಯಿಂದ ಮಾತ್ರ ಸಿಕ್ಕಿಲ್ಲ. ಲಕ್ಷಾಂತರ ಹೋರಾಟಗಾರರ ತ್ಯಾಗ ಬಲಿದಾನದಿಂದ ಸ್ವಾತಂತ್ರ ಸಿಕ್ಕಿದೆ ಎನ್ನುವದನ್ನು ಅರಿತುಕೊಳ್ಳಲಿ. ಸೋನಿಯಾ, ರಾಹುಲ ಗಾಂಧಿಗೆ ಮಾತ್ರ ಜೈ ಎನ್ನುವ ನೀವು ಸ್ವಾತಂತ್ರ ಹೋರಾಟಗಾರರನ್ನು ಸ್ಮರಿಸುವ ಕಾರ್ಯ ಮಾಡುತ್ತಿಲ್ಲ. ಉಚಿತ ಲಸಿಕೆ ನೀಡುವಾಗ, ಉಚಿತ ಆಹಾರ ನೀಡುವಾಗ ಟಿಕೆ ಮಾಡಿದ್ದಿರಿ, ಪ್ರತಿಯೊಂದನ್ನು ಟಿಕೆ ಮಾಡುವ ಭರದಲ್ಲಿ ಕಾಂಗ್ರೇಸ್ ನಾಯಕರು ರಾಷ್ಟ್ರ ಭಕ್ತರನ್ನು ಅಪಮಾನಿಸುವದು ಸರಿಯಲ್ಲ ಎಂದರು.

ಈ ಸಂದರ್ಬದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮಂಜುನಾಥ ಶೇಟ್ಟಿ,ನಗರ ಘಟಕದ ಅಧ್ಯಕ್ಷ  ರಾಘವೇಂದ್ರ ಚವ್ಹಾಣ, ಕಾಶಿನಾಥ ಮುರಾಳ, ಸುರೇಶ ಹಜೇರಿ, ಶಶಿಧರ ಡಿಸಲೆ, ಗಂಗಾಧರ ಕಸ್ತೂರಿ, ರವಿ ಕಟ್ಟಿಮನಿ, ಎಮ್.ಎಸ್.ಸರಶೇಟ್ಟಿ, ರಾಮು ಜಗತಾಪ, ಶೇಖರ, ನಾಗರಾಜ ಬಳಿಗಾರ ಸೇರಿದಂತೆ ಇತರರು ಇದ್ದರು.


ಸುದ್ದಿ ಓದಿ