ಶ್ರಮ್ಯೋಗಿಮಾನ್ದನ್ ಯೋಜನೆಯಿಂದ ಕಾಮರ್ಿಕರು ಹೊರಗಿರಬಾರದು: ಸೋಮಶೇಖರರೆಡ್ಡಿ
ಲೋಕದರ್ಶನ ವರದಿ
ಬಳ್ಳಾರಿ 05: ಪ್ರದಾನಮಂತ್ರಿ ಶ್ರಮಯೋಗಿಮಾನ್ದನ್ ಯೋಜನೆಯಿಂದ (ಪಿ.ಎಂ.ಎಸ್.ವೈ.ಎಂ) ಜಿಲ್ಲೆಯ ಯಾವದೇ ಅಸಂಘಟಿತ ಕಾಮರ್ಿಕರು ಹೊರಗಿರಬಾರದೆಂದು ಬಳ್ಳಾರಿ ನಗರ ಶಾಸಕ ಗಾಲಿಸೋಮಶೇಖರರೆಡ್ಡಿ ತಿಳಿಸಿದರು. ನಗರದ ತಾಲೂಕು ಪಂಚಾಯಿತಿ ಕಛೇರಿ ಸಭಾಂಗಣದಲ್ಲಿ ಪಿ.ಎಂ.ಎಸ್.ವೈ.ಎಂ ಯೋಜೆನೆಗೆ ಚಾಲನೆ ನೀಡಿ ಮಾತನಾಡಿದ ಅವರು ಕೆಲವರ್ಗದಿಂದ ಬಂದಂತವರ ಪ್ರದಾನಿ ಮೋದಿ ಅವರಿಂದ ಮಾತ್ರ ಇಂತಹ ಯೋಜನೆಗಳ್ನು ಜಾರಿಗೆ ತರುವಂತ ಚಿಂತನೆ ಸಾದ್ಯ.
ಈ ಯೋಜನೆಯಿಂದ 170 ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಸಿಕ 15 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುವ ಜನ ಈ ಯೋಜನೆ ಮೂಲಕ 60 ವರ್ಷಗಳ ನಂತರ ಮಾಸಿಕ 3 ಸಾವಿರ ಪಿಂಚಣಿ ಬರಲಿದೆ ಎಂದರು. ಈ ಯೋಜನೆ ಫೆ.15ರಿಂದ ದೇಶದಲ್ಲಿ ಜಾರಿಗೆ ಬಂದಿದ್ದು. ಕಾಮರ್ಿಕ ಇಲಾಖೆ ಪಲಾನುಬಾವಿಗಳನ್ನು ನೊಂದಾಯಿಸಿ ಜಿಲ್ಲೆಯಲ್ಲಿ ಈವರೆಗೆ 450 ಜನರಿಗೆ ಗುರುತಿನ ಚೀಟಿ ನೀಡಿದ್ದು. ಅವುಗಳನ್ನು ವಿತರಿಸಿದ ಶಾಸಕರು ಹಚ್ಚೊಳ್ಳಿಯಂತಹ ಗ್ರಾಮೀಣ ಪ್ರದೇಶದ 35 ಜನರನ್ನು ಯೋಜನೆ ಅಡಿ ನೊಂದಾಯಿಸಿದೆ.
ಬಳ್ಳಾರಿ ನಗರದಲ್ಲಿ ಕೇವಲ 20 ಜನರನ್ನು ನೊಂದಾಯಿಸಿರುವುದಕ್ಕೆ ತೀವ್ರ ಅಸಮದಾನ ವ್ಯೆಕ್ತ ಪಡಿಸಿ ಸಂಬಂದಿಸಿದವರು ಅಸಂಘಟಿತ ಕಾಮರ್ಿಕರಾರು ಯೋಜನೆಯಿಂದ ವಂಚಿತರಾಗದಂತೆ ತ್ವರಿತಗತಿಯಲ್ಲಿ ನೊಂದಾಣಿ ಮಾಡಿಸಿ. ಇಲ್ಲದಿದ್ದರೇ ನಿಮ್ಮ ಮೇಲೆ ಕ್ರಮ ಜರುಗಿಸ ಬೇಕಾಗುತ್ತದೆ ಎಂದರು. ವಾಸ್ತವಿಕವಾಗಿ ಮಾತನಾಡಿದ ಕಾಮರ್ಿಕ ಅಧಿಕಾರಿ ಚಂದ್ರಶೇಖರ ಐಲಿ 18 ರಿಂದ 40 ವರ್ಷದೊಳಗಿನ ಪಿ.ಎಫ್, ಇ.ಎಸ್.ಐ ಯೋಜನೆ ಲಾಭ ಪಡೆದಿರುವ ಕಾಮರ್ಿಕರು ಇದರಲ್ಲಿ ನೊಂದಾಯಿಸಿಕೊಳ್ಳಿ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ವಿಡಿಯೋ ಮೂಲಕ ಪ್ರದಾನಿ ನರೇಂದ್ರಮೋದಿ ಅವರು ನೀಡಿದ ಯೋಜನೆ ಕುರಿತು ತಿಳಿಸಿದರು.
ನಗರದ ಎಲ್.ಐ.ಸಿ ಕಛೇರಿಯ ವ್ಯೆವಸ್ಥಾಪಕ ಸುಂದರ್ ಇ.ಎಸ್.ಐ ಅಧಿಕಾರಿ ಶಿವಕುಮಾರ, ಸೇರಿದಂತೆ ಹಲವಾರು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜೊತೆಗೆ ಸ್ಥಳದಲ್ಲೇ ನೊಂದಾಯಿಸುವ ಕಾರ್ಯವನ್ನು ಕೈಗೊಳ್ಳಲಾಗಿತ್ತು.