ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
ಲೋಕದರ್ಶನ ವರದಿ
ರಾಣೆಬೆನ್ನೂರು 13: ಆಧುನೀಕರಣ, ಸ್ಪರ್ಧಾ ಹಾಗೂ ತಾಂತ್ರಿಕತೆಯ ಈ ಯುಗದಲ್ಲಿ ಇಂದು ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತಲೂ ಶೈಕ್ಷಣಿಕ ವಿಷಯದಲ್ಲಿ ವಿಭಿನ್ನವಾಗಿದ್ದು, ಸರ್ವ ಸೌಲಭ್ಯಗಳ ಜೊತೆಗೆ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣವನ್ನು ಸರಕಾರಿ ಶಾಲೆಗಳು ನೀಡುವುದರ ಮೂಲಕ ಹಾಜರಾತಿಯಲ್ಲೂ ಹೆಚ್ಚಳವಾಗುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ನಗರದ ಹೊರ ವಲಯದ ಅಡವಿ ಆಂಜನೇಯ ಬಡಾವಣೆಯ ಸ.ಹಿ.ಪ್ರಾ.ಶಾಲೆ ನಂ 3 ರಲ್ಲಿ ಶನಿವಾರದಂದು ನಡೆದ ನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಸರ್ಕಾರವು ಶೈಕ್ಷಣಿಕ ವ್ಯವಸ್ಥೆ ಬಲಪಡಿಸಲು ಹಾಗೂ ಉತ್ತೇಜನಕ್ಕಾಗಿ 6000 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಿದ್ದು, ಮುಂಬರುವ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ಸವಲತ್ತುಗಳನ್ನು ಕಲ್ಪಿಸಲಿದ್ದು, ಶಿಕ್ಷಕರು ಸಹ ಶಿಕ್ಷಣದ ಪ್ರಗತಿಗೆ ಮುಂದಾಗಬೇಕು ಎಂದರು.
ಅಡವಿ ಆಂಜನೇಯ ಬಡಾವಣೆಯ ಕನ್ನಡ ಶಾಲೆಗೆ 2 ಹೊಸ ಕೊಠಡಿ, ಶಾಲಾ ಕಂಪೌಂಡ ನಿರ್ಮಾಣ, ಸ್ಮಾಟ್9 ಶಾಲೆ ತೆರೆಯಲಾಗುವುದು. ಅಧಿಕಾರವಧಿಯೊಳಗೆ ಈ ಭಾಗದ ಜನರಿಗೆ ಅನುಕೂಲವಾಗುವಂತೆ ವಸತಿಯುತ ಮನೆ, ದೊಡ್ಡಕೆರೆ ಕೋಡಿ ಬಳಿ ಮೇಲ್ಸೇತುವೆ ನಿರ್ಮಿಸಲಾಗುವುದು ಎಂದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ನರಸಗೊಂಡರ, ನಗರಸಭಾ ಸದಸ್ಯೆ ಕಸ್ತೂರಿ ಚಿಕ್ಕಬಿದರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂಎಚ್ ಪಾಟೀಲ, ಸಮನ್ವಯಾಧಿಕಾರಿ,ಮಂಜು ನಾಯ್ಕ ಸಿಆರ್ ಪಿ ಎಸ್ ಪಿ ತುಳಜಾಭವಾನಿ, ಸಿದ್ದಣ್ಣ ಚಿಕ್ಕಬಿದರಿ, ಎಸ್ ಡಿಎಂಸಿ ಅಧ್ಯಕ್ಷೆ ಮಾಲಾ ಕುಸಗೂರ, ಉಪಾಧ್ಯಕ್ಷೆ ಗೀತಾ ಕಳಸೂರ, ಎಂ.ಚಿರಂಜೀವಿ, ರಮೇಶ ಜಾಧವ್, ಡಿಳ್ಳೆಪ್ಪ ಕಾಟಿ, ಹನುಮಂತಪ್ಪ ಎಡಚಿ, ಗಣೇಶ ಗಾಣಿಗೇರ, ಬಸಣ್ಣ ರೊಡ್ಡನವರ, ಶಾಲಾ ಶಿಕ್ಷಕರಾದ ಎಸ್ ಸಿ ಷಡಕ್ಷರಿಮಠ, ಮಾಲತೇಶ ಸಾವಂತಲವರ, ಪಿಡಿ ಹಾಡೋರಿ, ಎನ್ ಎಂ ಶಿರೋಳ, ಎನ್ ಎಚ್ ಭಜಂತ್ರಿ, ಎಡಿ ಹೊನ್ನಾಳಿ, ಬಸಮ್ಮ ಕೊಟ್ಟೂರ, ಸೋಮಣ್ಣ ಮುಗ್ಗಾನವರ ಸೇರಿದಂತೆ ನಗರದ ವಿವಿಧ 17 ಪ್ರಾಥಮಿಕ ಶಾಲೆಗಳ ಶಿಕ್ಷಕರು, 350 ಕ್ಕೂ ಹೆಚ್ಚಿನ ಸ್ಪರ್ಧಾ ವಿದ್ಯಾಥರ್ಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು