ಸಿನಿಮಾ, ಧಾರವಾಹಿಗಳು ಐತಿಹ್ಯಗಳನ್ನೇ ವೈಭವೀಕರಿಸಿ ಜನರ ದಾರಿ ತಪ್ಪಿಸುತ್ತಿವೆ: ಕೃಷ್ಣಮೂತರ್ಿ
ಲೋಕದರ್ಶನ ವರದಿ
ಬಳ್ಳಾರಿ (ಹಂಪಿ) 02: ಜನಪದರ ನಾಲಿಗೆಯಲ್ಲಿ ಹರಿದಾಡುವ ಐತಿಹ್ಯಗಳನ್ನೇ ವೈಭವೀಕರಿಸುವ ಮೂಲಕ ಇತಿಹಾಸವನ್ನು ತಿರುಚಿ, ಸಿನಿಮಾ ಮತ್ತು ಧಾರವಾಹಿಗಳು ಜನರ ದಾರಿ ತಪ್ಪಿಸುತ್ತಿವೆ ಎಂದು ಬೆಂಗಳೂರಿನ ಹಿರಯ ಶಾಸನವಿದರರಾದ ಡಾ. ಪಿ.ವಿ. ಕೃಷ್ಣಮೂತರ್ಿ ವಿಷಾದ ವ್ಯಕ್ತಪಡಿಸಿದರು.
ಹಂಪಿ ಉತ್ಸವದ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಕಮಲಾಪುರದ ಕಮಲ ಮಹಲ್ ಹತ್ತಿರದ ಕಚೇರಿ ಆವಣದಲ್ಲಿ ಏರ್ಪಡಿಸಿರುವ 'ವಿಜಯನಗರ ಅಧ್ಯಯನ' ಕುರಿತ ಎರಡು ದಿನಗಳ ವಿಚಾರಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.
ಹಂಪಿ ವಿಜಯನಗರದ ಅಧ್ಯಯನ ಎಷ್ಟೇ ವರ್ಷಗಳು ಕಳೆದರೂ, ಮುಗಿಯದ ಅಧ್ಯಯನವಾಗಿದ್ದು, ಉತ್ಖನನಗಳು, ಸಂಶೋಧನೆಗಳು ನಡೆದಂತೆ, ಹೊಸ ಹೊಸ ವಿಚಾರಗಳು, ಆಯಾಮಗಳು ತೆರೆಯುತ್ತಾ ಹೋಗುತ್ತಿವೆ. ಕೇವಲ ಇತಿಹಾಸ ಸಂಶೋಧನೆಗೆ ಒತ್ತು ನೀಡಲಾಗುತ್ತಿದೆಯೇ ಹೊರತು, ಚಾರಿತ್ರಿಕ ಭೂಗೋಳ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಲಾಗಿಲ್ಲ. ಹೀಗಾಗಿ ಅಂತರಶಿಸ್ತೀಯ ವಿಚಾರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ದೊರೆತಿಲ್ಲ. ಶಾಸನಗಳಿಗಿಂತ ಸ್ಥಳ ನಾಮಗಳು ಹೆಚ್ಚಿನ ಮಹತ್ವವನ್ನು ಹೊಂದಿವೆ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಸ್ಥಳೀಯರ ಹೆಚ್ಚಿನ ಪ್ರೋತ್ಸಾಹ ಇತ್ತು ಎನ್ನುವುದು ಇತಿಹಾಸಕಾರರಿಂದ ತಿಳಿದುಬರುತ್ತದೆ. ಡಾ. ಪಿ.ವಿ. ಕೃಷ್ಣಮೂತರ್ಿ ಹೇಳಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಹಂಪಿ ಕನ್ನಡ ವಿ.ವಿ. ಕುಲಪತಿ ಸ.ಚಿ. ರಮೇಶ್ ಮಾತನಾಡಿ, ವಿಜಯನಗರ ಅಧ್ಯಯನ ಕುರಿತ ವಿಚಾರಸಂಕಿರಣಗಳಲ್ಲಿ ಇತಿಹಾಸ ತಜ್ಞರು, ಶಾಸನ ತಜ್ಞರು ಮಂಡಿಸುವ ವಿಚಾರಗಳು ಕೇವಲ ಕಿವಿ ಮಾತುಗಳಾಗಿ ಗಾಳಿಯಲ್ಲಿ ತೇಲಿ ಹೋಗುವಂತಾಗದೆ, ಲಿಪಿಯಲ್ಲಿ ದಾಖಲೀಕರಣವಾದಾಗ ಮಾತ್ರ ಶಾಶ್ವತವಾಗಿ ಉಳಿಯಲು ಸಾಧ್ಯ. ಇಂತಹ ಕೆಲಸವನ್ನು ಪುರಾತತ್ವ ಸಂಗ್ರಹಾಲು ಮತ್ತು ಪರಂಪರೆ ಇಲಾಖೆ ಮಾಡುತ್ತಿದೆ. ಎಂದರು.
ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ನಿದರ್ೇಶಕ ಆರ್. ಗೋಪಾಲ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ವಿಚಾರಸಂಕಿರಣದಲ್ಲಿ ಮಂಡಿಸಲಾಗುವ ವಿಷಯಗಳನ್ನು ಗ್ರಂಥಗಳನ್ನಾಗಿ ಪ್ರಕಟಿಸುವ ಕೆಲಸ ಇಲಾಖೆ ಮಾಡುತ್ತಿದೆ ಎಂದರು. ಪುರಾತತ್ವ ಇಲಾಖೆ ಇಲಾಖೆ ನಿವೃತ್ತ ಅಧಿಕಾರಿ ಡಿ.ಎಂ. ನಾಗರಾಜ್, ಎಸ್.ಕೆ. ಜೋಷಿ ಅವರು ವಿಚಾರಸಂಕಿರಣದಲ್ಲಿ ಮಾತನಾಡಿದರು. ಇಲಾಖೆಯ ಉಪನಿದರ್ೇಶಕ ಡಾ. ಎಸ್.ಕೆ. ವಾಸುದೇವ ಉಪಸ್ಥಿತರಿದ್ದರು. ನೀಲಾಲೋಚನ ಶೀಲವಂತ ಪ್ರಾಥರ್ಿಸಿದರು.