ಬುದ್ದಿಮಾಂದ್ಯ ಮಕ್ಕಳ ಸಂರಕ್ಷಣೆ ಸಮಾಜ, ಪೋಷಕರ ಹೆಚ್ಚಿನ ಜವಾಬ್ದಾರಿ: ಡಾ|| ಬಸಿರೆಡ್ಡಿ
ಬಳ್ಳಾರಿ 13: ಇತರ ಕಾಯಿಲೆಗಳಂತೆ ಬುದ್ದಿಮಾಂದ್ಯತೆ ನಿವಾರಣೆಗೆ ಇನ್ನೂ ಹೆಚ್ಚಿನ ಚಿಕಿತ್ಸಾ ವಿಧಾನಗಳು ನಮ್ಮಲ್ಲಿ ಲಬ್ಯವಿಲ್ಲ. ಆಗಾಗಿ ಅವರನ್ನು ಸಂರಕ್ಷಿಸುವ ಕಾರ್ಯ ಸಮಾಜ ಮತ್ತು ಪೋಷಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಾ ಅಧಿಕಾರಿ ಡಾ|| ಬಸಿರೆಡ್ಡಿ ಹೇಳಿದರು. ಗಾಲಿ.ಚಂಗಾರೆಡ್ಡಿ ಸ್ಮಾರಕ ಮಾನಸಿಕ ವಿಕಲಚೇತನತರ ವಸತಿಯ ಶಾಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರ ಇಲಾಖೆ, ಮಾನಸಿಕ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ರಾಘವಕಲಾಮಂದಿರದಲ್ಲಿ ಜರುಗಿದ ಜಿಲ್ಲಮಟ್ಟದ ಮಾನಸಿಕ ವಿಕಾಲಚೇತನರ ಸಾಂಸ್ಕೃತಿಕ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು. ಬುದ್ದಿಮಾಂದ್ಯರನ್ನು ಆಗಯೇ ಬಿಟ್ಟರೇ ಅವರು ನಿಷ್ಕ್ರೀಯರಾಗುತ್ತಾರೆ. ಅವರ ಪಂಚೇಂದ್ರಿಗಳನ್ನು ಚಲನಾಶೀಲತೆಯಲ್ಲಿಡುವ ಮೂಲಕ ಅವರನ್ನು ಸಹ ಉತ್ತಮ ಜೀವಿಗಳಾಗಿ ಕಾಣಬಹುದು. ಆ ಕ್ರೀಯೆ ಸಮಾಜ ಮತ್ತು ಪೋಷಕರಿಂದ ಸಂಬಂಧಿಸಿದ ವೈದ್ಯರು ಸಂಘ ಸಂಸ್ಥೆಗಳಿಂದ ಆಗಬೇಕಿದೆ ಎಂದರು. ವಿಕಲಚೇತನರಿಗೆ ಸಕರ್ಾರದ ಅನೇಕ ಸೌಲಭ್ಯಗಳಿವೆ. ಜೊತೆಗೆ ಮಾಸಾಸನ ಪಡೆಯಲು ಅವಶ್ಯಕವಾದ ಪ್ರಮಾಣಪತ್ರವನ್ನು ಜಿಲ್ಲಾಸ್ಪತ್ರೆಯಲ್ಲಿ ಪಡೆದುಕೊಳ್ಳಬೇಕೆಂದರು. ಉದ್ಯಮಿ, ಸರೋಜಕುಮಾರ ಕ್ರೇಜಿವಾಲ್ ಮಾತನಾಡಿ ಜನ್ಮದಿಂದಲೇ ಬರುವ ಬುದ್ದಿಮಾದ್ಯತೆಯ ಮಕ್ಕಳನ್ನು ಸಲುವುದು ಪುಣ್ಯದಕಾರ್ಯ ಎಂದು ಬಾವಿಸಬೇಕು. ವಿಕಲಚೇತನರಿಗೂ ತಮ್ಮದೇ ಆದ ಸಾಮಥ್ರ್ಯ, ಗಟ್ಟಿತನ ಇರುತ್ತದೆ. ಅವರನ್ನು ಹೊರತರುವ ಕಾರ್ಯ ಆಗಬೇಕು. ಈ ವಿಕಲಚೇತನತೆ ಹೆಚ್ಚಾಗಲು ಅಯೋಡಿನ್ ಉಪ್ಪಿನ ಬಳಕೆ ಹೆಚ್ಚಾಗಿರುವುದು ಎನ್ನಲಾಗುತ್ತಿದ್ದು ಈ ಬಗ್ಗೆ ಸೂಕ್ತ ಸಂಶೋದನೆ ನಡೆಸಬೇಕೆಂದರು. ಅಂತಯೇ ಈ ಕಾರ್ಯಕ್ರಮದ ಸಾನಿದ್ಯವಹಿಸಿದ ಕಮಚರ್ೆಡು ಮಠದ ಶ್ರೀ ಕಲ್ಯಾಣಸ್ವಾಮಿ ಮಾತನಾಡಿ ಬುದ್ದಿಮಾಂದ್ಯ ಮತ್ತು ವಿಕಲಚೇತನ ಮಕ್ಕಳಿಗೆ ಸಹಕಾರ ನೀಡುವುದು ನಮ್ಮಲ್ಲೆರ ಕರ್ತವ್ಯ ಎಂದು ಬಾವಿಸಬೇಕಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿಧರ್ೇಶಕ ಎಲ್.ನಾಗೇಶ್ ಬಿಲ್ವಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೌಂಡ್ ಟೇಬಲ್ ಇಂಡಿಯಾ ಬಳ್ಳಾರಿ ಘಟಕದ ಅಧ್ಯಕ್ಷ ಡಾ|| ಪಿ.ಹರೀಶ್, ಡಾ|| ಸಂತೊಷ, ಡಾ|| ಮಹಾಂತೇಶ, ಸೇರಿದಂತೆ ಸಂಸ್ಥೆಯ ಆಡಳಿತಾಧಿಕಾರಿ, ಸಿಬ್ಬಂದಿವರ್ಗದವರು ಈ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಿದ್ದರು.