ಮಕ್ಕಳ ಆರೋಗ್ಯ, ಸ್ವಚ್ಚತೆ ಪಾಲಕರ ಪಾತ್ರ ಪ್ರಮುಖ
ಬಳ್ಳಾರಿ.ಜ.24: ಪಾಲಕರು ಮಕ್ಕಳ ಆರೋಗ್ಯದ ಬಗ್ಗೆ ಸದಾ ನಿಗಾ ಇಡಬೇಕು, ಸಣ್ಣ ಪುಟ್ಟ ಆರೋಗ್ಯ ತೊಂದರೆಗಳನ್ನು ಸಹ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಅದೇ ರೀತಿ ಮಕ್ಕಳಿಗೆ ಸ್ವಚ್ಚತೆಯ ಬಗ್ಗೆ ತಿಳುವಳಿಕೆಯನ್ನು ಮೂಡಿಸದಲ್ಲಿ ಅನಾರೋಗ್ಯದಿಂದ ದೂರ ಇಡಬಹುದು ಎಂದು ತಾರನಾಥ ಆಯುವರ್ೇದ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕರಾದ ರಾಜಶೇಖರ್ ಗಾಣಿಗಾರ್ ರವರು ಪಾಲಕರಿಗೆ ಕಿವಿಮಾತು ಹೇಳಿದರು
ಅವರು ಇಂದು ನಗರದ ಮಿಲ್ಲರ್ಪೇಟೆ ಪ್ರದೇಶದಲ್ಲಿನ ಪ್ರಥಮ್ ಪಬ್ಲಿಕ್ ಸ್ಕೂಲ್ನಲ್ಲಿ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ನಿಮಾ) ಮತ್ತು ತಾರನಾಥ ಆಯುವರ್ೇದ ವಿದ್ಯಾಲಯ ಮತ್ತು ಪ್ರಥಮ್ ಪಬ್ಲಿಕ್ ಸ್ಕೂಲ್ವತಿಯಿಂದ ಆಯುವರ್ೇದ ಆರೋಗ್ಯ ಚಿಕಿತ್ಸಾ ಶಿಬಿರ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಆಯುವರ್ೇದದಲ್ಲಿ ಎಲ್ಲಾ ರೋಗಗಳಿಗೂ ಆಯುವರ್ೇದ ಔಷಧ ಸೇವನೆಯಿಂದ ಶಾಶ್ವತವಾದ ಚಿಕಿತ್ಸೆಯ ಪರಿಹಾರವಿದೆ ಹವಮಾನ ಬದಲಾವಣೆಯ ಸಂದರ್ಭದಲ್ಲಿ ರೋಗಗಳು ಮಕ್ಕಳನ್ನು ಕಾಡುವುದು ಜಾಸ್ತಿ ಈ ಸಂದರ್ಭದಲ್ಲಿ ಅವರನ್ನು ಜಾಗರೂಕತೆಯಿಂದ ನೋಡಿಕೊಳ್ಳ ಬೇಕೆಂದರು.
ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ|| ವಿ.ಕೆ. ಚೇತನ್ಕುಮಾರ್ ರವರು ಮಾತನಾಡಿ, ಮಕ್ಕಳು ಕುರುಕುರೆ, ಚಿಪ್ಸ್, ಕರಿದ ಪದಾರ್ಥಗಳು, ಚಾಕೋಲೇಟ್ ಮತ್ತು ಜಂಕ್ಫುಡ್ ಸೇವಿಸುವುದರಿಂದ ಜ್ಞಾಪಕಶಕ್ತಿಯನ್ನು ಕಳೆದುಕೊಳ್ಳುವುದಲ್ಲದೆ ಆರೋಗ್ಯದ ಮೇಲೆ ಸಹ ತೀವ್ರ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಹಾಗೆ ಮಕ್ಕಳನ್ನು ಟಿ.ವಿ ಮತ್ತು ಮೋಬೈಲ್ಗಳಿಂದ ದೂರವಿಡಬೇಕು ಇವುಗಳಿಂದ ಮಕ್ಕಳ ಕಣ್ಣುಗಳ ಮೇಲೆ ದುಷ್ಪರಿಣಾಮವುಂಟಾಗಿ ಚಿಕ್ಕ ವಯಸ್ಸಿನಲ್ಲೆ ಕನ್ನಡ ಹಾಕಿಕೊಳ್ಳುವ ಸಂಕಷ್ಟ ಎದುರಿಸಬೇಕಾಗುತ್ತದೆ, ತಾಜಾ ಹಸಿ ತರಕಾರಿಗಳ ಸೇವನೆಯಿಂದ ಆರೋಗ್ಯವನ್ನು ಮುಖ್ಯವಾಗಿ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು. ಆರೋಗ್ಯ ಶಿಬಿರವನ್ನು ತಾರನಥ ಆಯುವರ್ೇ ಕಾಲೇಜ್ನ ಪ್ರಾಂಶು ಪಾಲ ರಾದ ಡಾ|| ಸಯ್ಯದ್ ಅಕ್ತರ್ ಪಾತೀಮಾ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ|| ಮಾಧವ ದಿಗ್ಗಾವಿ, ಡಾ.ಶಶಿಕುಮಾರ್, ನೀಮ ಕಾರ್ಯದಶರ್ಿ ವಿರುಪಾಕ್ಷಿ ವಸ್ತ್ರದ್, ಡಾ|| ನಾಗನಗೌಡ, ಡಾ|| ಚವ್ಹಾಣ್, ಪ್ರಥಮ್ ಪಬ್ಲಿಕ್ ಸ್ಕೂಲ್ನ ಪ್ರನಿಪಾಲ್ ಸ್ವಾತಿ, ಶಾಲೆಯ ಮುಖ್ಯಸ್ಥರಾದ ವಿಜಯಲಕ್ಷ್ಮಿ, ಶಾಲಾ ಸಿಬ್ಬಂದಿ ಶ್ರೀರಾಮುಲು ಸೇರಿದಂತೆ ಶಾಲೆಯ ಮಕ್ಕಳು ಮತ್ತು ಪಾಲಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು.