ಹೂವಿನ ಹಡಗಲಿ

ಚಂದ್ರಶೇಖರ ಶಾಸ್ತ್ರೀಗಳ ಹೆಸರು ನಾಮಕರಣಕ್ಕೆ ಕಸಾಪ ಮನವಿ

ಚಂದ್ರಶೇಖರ ಶಾಸ್ತ್ರೀಗಳ ಹೆಸರು ನಾಮಕರಣಕ್ಕೆ ಕಸಾಪ ಮನವಿ

ಲೋಕದರ್ಶನ ವರದಿ 

ಹೂವಿನಹಡಗಲಿ 05: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ, ಅಬ್ದುಲ್ ಕಲಾಂ ವೃತ್ತದ(ಎಪಿಎಂಸಿ)ವರೆಗಿನ ಮುಖ್ಯರಸ್ತೆಗೆ ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರೀಗಳ ಹೆಸರನ್ನು ನಾಮಕರಣ ಮಾಡಬೇಕೆಂದು ಪುರಸಭೆ ಅಧ್ಯಕ್ಷ ಜ್ಯೋತಿ ಮಲ್ಲಣ್ಣ ಅವರಿಗೆ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ಮನವಿಯನ್ನು ಸಲ್ಲಿಸಿದ್ದಾರೆ.

ತಾಲೂಕಿನ ಮಾಗಳ ಗ್ರಾಮದ ವಿದ್ವಾಂಸರು,ಕರ್ನಾಟಕ  ಏಕೀಕರಣ ಹೋರಾಟದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರಾಗಿದ್ದಾರೆ. 1940ರಲ್ಲಿ ಧಾರವಾಡದಲ್ಲಿ ನಡೆದ 25ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು ತಾಲೂಕಿನ ಹೆಮ್ಮೆ,ಅಭಿಮಾನ ಸಂಗತಿಯಾಗಿದೆ.

ಅವರ ಸ್ಮರಣೆಗಾಗಿ ಹೂವಿನಹಡಗಲಿ ಪಟ್ಟಣದ ಮುಖ್ಯರಸ್ತೆಗೆ ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರೀಗಳ ಹೆಸರನ್ನು ನಾಮಕರಣ ಕನರ್ಾಟಕ ರಾಜ್ಯೋತ್ಸವದೊಳಗೆ ಈ ಬಗ್ಗೆ ನಿರ್ಣಯ ಕೈಗೊಂಡು ಏಕೀಕರಣ ಹೋರಾಟಗಾರರಿಗೆ ಗೌರವ ಸಲ್ಲಿಸಲು ವಿನಂತಿಯನ್ನು ಕಸಾಪ ಅಧ್ಯಕ್ಷ ಟಿ.ಪಿ.ವೀರೇಂದ್ರ,ಮಾಜಿ ಅಧ್ಯಕ್ಷ ಹೆಚ್.ಜಿ.ಪಾಟೀಲ,ಎ.ಎಂ.ಚನ್ನವೀರಸ್ವಾಮಿ, ಬಿ.ಶಿವಾನಂದಪ್ಪ, ವಿ.ಭೀಮಾನಾಯ್ಕ, ಬಸವರಾಜ ಸುಂಕದ ಮನವಿ ಮಾಡಿದ್ದಾರೆ 

ಸುದ್ದಿ ಓದಿ