ಗೋಕಾಕ್

ವಿಜೃಂಭಣೆಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

ವಿಜೃಂಭಣೆಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

ಘಟಪ್ರಭಾ: ಸ್ಥಳೀಯ ದಾನೇಶ್ವರಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ನಿಯಮಿತ ಇವರ ಆಶ್ರಯದಲ್ಲಿ 76 ನೇ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. 

ಸ್ವಾತಂತ್ರ್ಯೋತ್ಸವ ಅಂಗವಾಗಿ ಬೆಲ್ಲದಬಾಗೇವಾಡಿಯ ಸರ್ಕಾರಿ ಹೆಣ್ಣು ಮಕ್ಕಳ ಶಾಲೆ, ಸರ್ಕಾರಿ ಗಂಡು ಮಕ್ಕಳ ಶಾಲೆ, ಸರ್ಕಾರಿ ಶಾಲೆ ನಿಂಗನ ಕೋಡಿ ತೋಟ, ಸರ್ಕಾರಿ ಶಾಲೆ ಪೊಗತನಟ್ಟಿ, ಭರತೇಶ್ ವಿದ್ಯಾಲಯ ಈ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

ಸಹಕಾರಿಯ ಸಂಸ್ಥಾಪಕ ರಮೇಶ್ ಅಲ್ಲಕನೂರ್, ಅಧ್ಯಕ್ಷರಾದ ಕಾಶಪ್ಪ ಕೋರಿ, ಉಪಾಧ್ಯಕ್ಷರಾದ ಶಿವಾನಂದ್ ಪಾಟೀಲ್, ಸದಸ್ಯರಾದ ರಮೇಶ್ ಪಾಟಿಲ್, ಬಸಗೌಡ ಪಾಟೀಲ್, ಮಹಾದೇವ ಮಾಳ್ಗೆ, ಮಲ್ಲಿಕಾರ್ಜುನ್ ಗುಡಸಿ, ಕೆಂಪಣ್ಣ ಚೌಕಾಶಿ, ಶ್ರೀಮಂತ ಹಾರುಗೇರಿ, ಜಗದೀಶ್ ಕಾಂಬಳೆ, ಸೋಮಗೌಡ ಶಿರಹಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ಸುದ್ದಿ ಓದಿ