ಒಳಚರಂಡಿ, ಕುಡಿಯುವ ನೀರಿನ ಕಾಮಗಾರಿನ್ನು ತ್ವರಿತಗತಿಯಲ್ಲಿ ಕೈಗೊಳ್ಳಿ
ಲೋಕದರ್ಶನ ವರದಿ
ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಅಧಿಕಾರಿಗಳಿಗೆ ತಾಕೀತು
ಬೈಲಹೊಂಗಲ 01: ಪಟ್ಟಣದಲ್ಲಿ ನಡೆಯುತ್ತಿರುವ ಒಳಚರಂಡಿ, 24*7 ಕುಡಿಯುವ ನೀರಿನ ಕಾಮಗಾರಿಗಳ ತ್ವರಿತ ಗತಿಯಲ್ಲಿ ಕೈಗೊಂಡು ಸಾರ್ವಜನಿಕರಿಗೆ ಒದಗಿಸಿಕೊಡಬೇಕು ಎಂದು ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅವರು ಗುರುವಾರ ಪಟ್ಟಣದ ಅಂಬೇಡ್ಕರ ನಗರದಲ್ಲಿ 24*7 ಕುಡಿಯುವ ನೀರಿನ ಕಾಮಗಾರಿ ವೀಕ್ಷಿಸಿ ಮಾತನಾಡಿ, ಪಟ್ಟಣದಲ್ಲೆಡೆ ನಡೆಯುತ್ತಿರುವ ಕುಡಿಯುವ ನೀರಿನ ಪೈಪಲೈನ ಆಳವಡಿಸಿದ್ದು ರಸ್ತೆಯ ಪ್ಯಾಚ ವರ್ಕ ಮಾಡಬೇಕು.ಈ ಕುರಿತು ಹಲವಾರು ದೂರುಗಳು ಬಂದಿವೆ. ಅಂಬೇಡ್ಕರ ನಗರದಲ್ಲಿ ಒಳಚರಂಡಿ ಹಳೆ ಲೈನ ಇದ್ದು ಕೂಡಲೇ ನೂತನ ಒಳಚರಂಡಿ ಕಾಮಗಾರಿ ಆರಂಭಿಸಬೇಕು. ಚರಂಡಿಗಳಲ್ಲಿ ಕಸ, ತ್ಯಾಜ್ಯ ಸಂಗ್ರಹಗೊಂಡು ಸೊಳ್ಳೆಗಳ ಕಾಟ ವೀಪರಿತಗೊಂಡು ಸಾಂಕ್ರಾಮಿಕ ರೋಗಗಳಿಗೆ ಎಡೆಮಾಡಿಕೊಡದೆ ತಕ್ಷಣ ಸ್ವಚ್ಚತೆಗೆ ಆದ್ಯತೆ ನಿಡಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪುರಸಭೆ ಮಾಜಿ ಸದಸ್ಯ ರಮೇಶ ಹುಲ್ಲೇನ್ನವರ ಮಾತನಾಡಿ, ಅಂಬೇಡ್ಕರ ನಗರದಲ್ಲಿ 1983ರಲ್ಲಿ ಸಮುದಾಯ ಭವನ ನಿಮರ್ಿಸಿದ್ದು ಇದು ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದೆ. ಅಲ್ಲದೇ ಯಾವುದೇ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿಲ್ಲ. 6 ದಶಕಗಳ ಹಿಂದೆ ಅಂದಿನ ಪುರಸಭೆ ಅಧ್ಯಕ್ಷ ಎಸ್.ಎಚ್. ಮೆಟಗುಡ್ಡ ಅವರು ಸಿಮೆಂಟ ಗಚ್ಚಿನ ರಸ್ತೆ ನಿಮರ್ಿಸಿದ ನಂತರ ಇವತ್ತಿಗೂ ಕೂಡ ಯಾವುದೇ ರಸ್ತೆ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಇನ್ನಾದರೂ ಅಧಿಕಾರಿಗಳು ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಕುರಿತು ಕಳೆದ ಎಸ್.ಸಿ, ಎಸ್.ಟಿ.ಸಭೆಯಲ್ಲಿ ಅಧಿಕಾರಗಳ ಗಮನಕ್ಕೆ ತರಲಾಗಿದ್ದು ಹೀಗಾಗಿ ಇಂದು ಎಸಿ ಅವರು ಅಂಭೇಡ್ಕರ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ ಎಂದರು.
ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ, ಪುರಸಭೆ ಮಾಜಿ ಸದಸ್ಯರಾದ ಶಿವಯೋಗಿ ಹುಲ್ಲೆನ್ನವರ, ಕಿರಿಯ ಆರೋಗ್ಯ ನೀರಿಕ್ಷಕ ಸುರೇಶ ಪಾಟೀಲ, ಎಇಇ ಪ್ರವೀಣ ಸೈನೆಕರ, ಪುಂಡಲೀಕ ಪಟ್ಟಿಹಾಳ, ಪ್ರಕಾಶ ಭರಮನ್ನವರ, ಫಕೀರಪ್ಪ ಹಲಗಿ, ಸಂಜಯ ಭರಮಮನ್ನವರ ನಗರದ ನಿವಾಸಿಗಳು ಇದ್ದರು