ಅಸಂಘಟಿತ ಕಾಮರ್ಿಕರು ಸಕರ್ಾರದ ಸೌಲಭ್ಯ ಪಡೆದುಕೊಳ್ಳಲು ಕರೆ: ಹಂದ್ರಾಳ್
ಬಳ್ಳಾರಿ15:: ಕಾಮರ್ಿಕ ಇಲಾಖೆಯ ವತಿಯಿಂದ ಅನೇಕ ಯೋಜನೆಗಳನ್ನು ರೂಪಿಸಿದ್ದು, ಸದರಿ ಯೋಜನೆಗಳನ್ನು ಪಡೆದುಕೊಳ್ಳಲು ಅಸಂಘಟಿಕ ಕಾಮರ್ಿಕರು ಮುಂದಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿಎಸ್.ಬಿ.ಹಂದ್ರಾಳ್ ಅವರು ಕರೆ ನೀಡಿದರು.
ನಗರದ ತಾಪಂ ಸಭಾಂಗಣದಲ್ಲಿ ಗುರುವಾರ ಕಾಮರ್ಿಕ ಇಲಾಖೆ, ಕನರ್ಾಟಕ ರಾಜ್ಯ ಅಸಂಘಟಿತ ಕಾಮರ್ಿಕರ ಸಾಮಾಜಿಕ ಭದ್ರತಾ ಮಂಡಳಿಯ ಅಂಬೇಡ್ಕರ ಕಾಮರ್ಿಕರ ಸಹಾಯಹಸ್ತ ಅಡಿ ಖಾಸಗಿ ವಾಣಿಜ್ಯ ಚಾಲಕರಿಗೆ ಅಪಘಾತ ಜೀವ ರಕ್ಷಕ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಾಹನ ಚಾಲಕರು ತಾವು ಚಾಲನೆ ಮಾಡವಾಗ ಸಂಚಾರಿ ನಿಯಮ ಪಾಲಿಸಿ ಹಾಗೂ ಅತ್ಯಂತ ಜಾಗೃತೆಯಿಂದ ಚಾಲನೆ ಮಾಡಿ. ಕಾಮರ್ಿಕ ಇಲಾಖೆಯ ವತಿಯಿಂದ ಅಸಂಘಟಿತ ಕಾಮರ್ಿಕರಿಗೆ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಪಡೆದುಕೊಂಡು ಕೌಶ್ಯಲವಾಗಿ ಹಾಗೂ ಆಥರ್ಿಕವಾಗಿ ಮುಂದಾಗಬೇಕು ಎಂದರು.
ಸಹಾಯಕ ಆಯುಕ್ತ ರಮೇಶ ಪಿ.ಕೊನರೆಡ್ಡಿ ಅವರು ಮಾತನಾಡಿದರು. ಜಿಲ್ಲಾ ಕಾಮರ್ಿಕ ಅಧಿಕಾರಿಗಳಾದ ಚಂದ್ರಶೇಖರ.ಎನ್.ಐಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಮರ್ಿಕ ಇಲಾಖೆ ಕಾರ್ಯನಿವರ್ಾಹಕ ಆರ್.ಎನ್.ಶಿವರಾಜ್ ಅವರು ಸ್ವಾಗತಿಸಿ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಖಾಸಗಿ ವಾಣಿಜ್ಯ ಚಾಲಕರಿಗೆ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಾಪಂ ಮುಖ್ಯ ಕಾರ್ಯನಿವರ್ಾಣಾಧಿಕಾರಿ ಡಿ.ಜಾನಾಕಿರಾಮ್ ರೆಡ್ಕ್ರಾಸ್ ಸಂಸ್ಥೆಯ ಕಾರ್ಯದಶರ್ಿ ಎಂ.ಶಕೀಬ್, ಕಾಮರ್ಿಕ ನಿರೀಕ್ಷಕ ಎಂ.ರವಿದಾಸ್. ಬಾಲಕಾಮರ್ಿಕ ಯೋಜನೆ ನಿದರ್ೇಶಕರು ಎ.ಮೌನೇಶ್ ಹಾಗೂ ಸಿಬ್ಬಂದಿ ವರ್ಗದವರಾದ ನಡ್ಲಿಕೇರಿ ನಾಗರಾಜ್, ರಮೇಶ್, ಹೊನ್ನೂರಪ್ಪ ಇದ್ದರು.