ಕೊರೋನ : ಸಕ್ರೀಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಮುಖ
ನವದೆಹಲಿ, ಜನವರಿ 2: ದೇಶದಲ್ಲಿ ಕಳದೆ 24 ಗಂಟೆಗಳಲ್ಲಿ 19,078 ಹೊಸ ಕೊರೋನ ಸೋಂಕು ಪ್ರಕರಣ ಪತ್ತೆಯಾಗಿವೆ. ಸೋಂಕಿತರಿಗಿಂತ ಚೇತರಿಕೆ ಪ್ರಮಾಣ ಹೆಚ್ಚಾಗಿ, ಸಕ್ರೀಯ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಕಳದೆ 24 ಗಂಟೆಯಲ್ಲಿ 224 ಕೋವಿಡ್ ಸೋಂಕಿತರು ಸಾವಿಗೀಡಾಗಿದ್ದು, 22,926 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದೆ.ದೇಶದಲ್ಲಿ ಪ್ರಸ್ತುತ 1,03,05,788 ಒಟ್ಟು ಕೊರೋನ ಸೋಂಕು ಪ್ರಕರಣಗಳಿವೆ. ಒಟ್ಟು ಸಕ್ರಿಯ ಪ್ರಕರಣಗಳು 2,50,183ಕ್ಕೆ ಇಳಿಕೆಯಾಗಿದ್ದು, ಒಟ್ಟು ಚೇತರಿಕೆ 99,06,387ಕ್ಕೆ ಏರಿಕೆಯಾಗಿ, ದೇಶದಲ್ಲಿ ಇದುವರೆಗೂ 1,49,218 ಕೊರೋನ ಸೋಂಕಿತರು ಬಲಿಯಾಗಿದ್ದಾರೆ.ದೇಶದಾದ್ಯಂತ ಶನಿವಾರದಿಂದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಲಸಿಕೆಯ ಪೂರ್ವಾಭ್ಯಾಸ ಆರಂಭವಾಗಿದೆ. ಕರ್ನಾಟಕ, ದೆಹಲಿ, ಜಾರ್ಖಂಡ್, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಗುಜರಾತ್, ಕೇರಳ, ಪಂಜಾಬ್, ಹರಿಯಾಣ ರಾಜ್ಯಗಳಲ್ಲಿ ಲಸಿಕಾ ಡ್ರೈ ರನ್ ನಡೆಯುತ್ತಿದೆ.