ಸಿರುಗುಪ್ಪ

ಸಿರುಗುಪ್ಪ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಯುವಕರಿಂದ ಉಪಹಾರ ಸೇವೆ

ಸಿರುಗುಪ್ಪ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಯುವಕರಿಂದ ಉಪಹಾರ ಸೇವೆ

ಸಿರುಗುಪ್ಪ17: ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮುಸ್ಲಿಂ ಸಮುದಾಯದ ಯುವಕರಾದ ಈದ್ಗಾ ಮತ್ತು ಖಬರ್ ಸ್ಥಾನ ಕಮಿಟಿ ಅಧ್ಯಕ್ಷ ಹಂಡಿ ಹಾಶಿಮ್ ಇವರ ಸುಪುತ್ರ ಹಂಡಿ ಇಫ್ತು ಅವರ ನೇತೃತ್ವದಲ್ಲಿ ಶುಕ್ರವಾರ ರಾತ್ರಿ ಉಪಹಾರ ಸೇವೆ ಮಾಡಿದರು ಮಾಲಧಾರಿಗಳು ಉಪಹಾರ ಸ್ವೀಕರಿಸಿ ನಾವೆಲ್ಲರೂ ಸಮಾಜದಲ್ಲಿ ಪ್ರೀತಿ ವಿಶ್ವಾಸ ಭಾರತದ ಸಂಸ್ಕೃತಿಯನ್ನು ಶಾಂತಿ ಮತ್ತು ಸಹೋದರತೆಯ ಸಂದೇಶವನ್ನು ಸಾರಿದರು ತಾಲೂಕು ಭೀಮ ಆರ್ಮಿ  ಅಧ್ಯಕ್ಷ ಕೊಡ್ಲೇ ಧರ್ಮರಾಜ್ ಮುನೀರ್ ಮಕ್ಸುದ ಮುಸ್ತಫ ಅಲಿ ಇರ್ಫ್ನ್ ಅಯಾಜ್ ಹಂಡಿ ಹುಸೇನ್ ಸಾಬ್ ಸಾಮಾಜಿಕ ಕಾರ್ಯಕರ್ತ ಎ ಮೊಹಮ್ಮದ್ ನೌಶಾದ್ ಅಲಿ ಇದ್ದರು.

ಸಿರುಗುಪ್ಪ ಬೀಬಿ ಹಾಜಿರಾ ಮಸೀದಿಯಲ್ಲಿ 108 ನೇ ಶೇಖ್ ಉಲ್ ಇಸ್ಲಾಂ ಉರುಸು ಶರೀಫ್ ಆಚರಣೆ ಸಿರುಗುಪ್ಪ ಹಜರತ್ ಸೈಯದ್ ಖಾದರ್ ಷಾ ಮೌಲಾ ದರ್ಗಾ ಶರೀಫ್ ಹತ್ತಿರದ ಬೀಬಿ ಹಾಜಿರಾ ಮಸೀದಿಯಲ್ಲಿ ಶೇಖ್ ಉಲ್ ಇಸ್ಲಾಂ ಅವರ108 ನೇ ಉರುಸ್ ಶರೀಫ್  ಆಚರಿಸಲಾಯಿತು ನಗರದ ಎಲ್ಲಾ ಮೊಹಲ್ಲಾ ಮಸೀದಿಗಳ ಉಲೇಮ ಇಕ್ರಾಂ ಮುಖ್ಯಸ್ಥರ ಸಮ್ಮುಖದಲ್ಲಿ ಅಲ್ಲಾಹನ ರಸೂಲರ ಜಗದ್ಗುರುಗಳ ಗುರು ಹಿರಿಯರ ಆದರ್ಶ ಗುಣ ಸಿದ್ದಾಂತ ತತ್ವವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಿ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಗಡ್ಡೆ ಖಾದರ್ ಭಾಷಾ ದರ್ಗಾ ಮುಕುಂದ ಬಗ್ದಾದಿ ಸಜ್ಜಾದೆ ನಶಿನ್ ಹಜರತ್ ಸೈಯದ್ ಶಾಹ್ ಹಸನ್ ಬಸರಿ ಖಾದ್ರಿ ಬಗ್ದಾದಿ ಅವರು ಹೇಳಿದರು. ಸರ್ವರಿಗೂ ಒಳ್ಳೆಯದಾಗಲಿ ಎಂದು ದುವಾ ಆಶೀರ್ವಚನ ಮಾಡಿದರು ಸಮುದಾಯದ ಮುಖಂಡರು ಜಾಮಿಯಾ ಮಸೀದಿಯ ಇಮಾಮರು ಹಾಜಿ ಜಿ ಮಹಮ್ಮದ್ ಲುಕ್ಮಾನ್ ಸೌದಗರ್ ಮಸೀದಿ ಮೌಲಾನ ಹಾಜಿ ಎಸ್ ಅಬ್ದುಲ್ ಸಮದ್ ನಿಜಾಮಿ ಬೀಬಿ ಹಾಜಿರಾ ಮಸೀದಿಯ ದಾದಾ ಖಲಂದರ್ ವಲ್ಲೂರು ಮಸೀದಿಯ ಹಾಫೀಜ್ ಮೊಹಮ್ಮದ್ ನೂರು ಹಾಜಿ  ಡಬಲ್ ಬಾಂಡ್ ಟಿಜಿ ಅಬ್ದುಲ್ ಗನಿ ಬೀಬಿ ಹಾಜಿರಾ ಮಸೀದಿ ಕಮಿಟಿ ಅಧ್ಯಕ್ಷ ಎಲೆಕ್ಟ್ರಿಕ್ ನೂರ್ ಹಾಗೂ ಎಲ್ಲಾ ಸದಸ್ಯರು ಸಮಾಜಿಕ ಕಾರ್ಯಕರ್ತ ಎ ಮೊಹಮ್ಮದ್ ನೌಶಾದ್ ಅಲಿ ಹಂಡಿಹುಸೇನ್ ಇದ್ದರು ಕುರಾನ್ ಫಾತೆಹ ಓದಿಕೆ ಸಲಾತೋ ಸಲಾಂ ನೊಂದಿಗೆ ಪ್ರಸಾದ ವಿತರಿಸಲಾಯಿತು.


ಸುದ್ದಿ ಓದಿ