ಗೋಕಾಕ್

ಬೆಟಗೇರಿ ಗುರುಕುಲದಲ್ಲಿ ಪುಸ್ತಕ ಬಿಡಗುಡೆ

ಬೆಟಗೇರಿ ಗುರುಕುಲದಲ್ಲಿ ಪುಸ್ತಕ ಬಿಡಗುಡೆ

ಗೋಕಾಕ: ಸರ್ವೇಶ್ವರ ಪ್ರಸಾದಿತ ಶಿವ-ಕಾಳಿಕಾಂಬಾ ಸಾಂಸ್ಕೃತಿಕ ಸಂಸ್ಥೆ, ಬೆಟಗೇರಿ ಶ್ರೀರಾಮ ವೃತ್ತದ ಬಳಿಯಿರುವ ಈಶ್ವರಚಂದ್ರ ಬೆಟಗೇರಿಯವರ ಹಿಲ್ ಗಾರ್ಡನ್ದಲ್ಲಿ ಸ್ಥಾಪಿತವಾದ ಗ್ರಾಮೀಣ ಕಲೆಗಳ ಕಲಿಕಾ ಕೇಂದ್ರ ಗುರುಕುಲದಲ್ಲಿ ಡಿ.11ರಂದು ಅಡಿಬಟ್ಟಿ ಮೂಲಕವಿ ಮಲ್ಲನಗೌಡ ಪಾಟೀಲರ ಮಾಯಾ ಮಚ್ಚೇಂದ್ರ ಕೃತಿಯು ಮುಂಜಾನೆ ಹತ್ತು ಘಂಟೆಗೆ ಜನಪ್ರಿಯ ಶಾಸಕರಾದ ಬಾಲಚಂದ್ರಣ್ಣ ಲಕ್ಷ್ಮಣರಾವ ಜಾರಕಿಹೊಳಿಯವರ ಅಮೃತ ಹಸ್ತದಿಂದ ಬಿಡುಗಡೆಯಾಗಲಿದೆ.

ಸಮಾರಂಭದ ಸಾನಿಧ್ಯವನ್ನು ವೇದಮೂರ್ತಿ  ಸಂಗಯ್ಯ ರುದ್ರಯ್ಯ ಹಿರೇಮಠ ಹಾಗು ಈರಯ್ಯ ವಿರುಪಾಕ್ಷಯ್ಯ ಹಿರೇಮಠರು ವಹಿಸಲಿದ್ದು, ಅಧ್ಯಕ್ಷತೆಯನ್ನು ಬೆಟಗೇರಿ ಗ್ರಾಮದ ಹಿರಿಯರಾದ ಪತ್ರೆಪ್ಪ ಕಲ್ಲಪ್ಪ ನೀಲಣ್ಣವರ ವಹಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿಯ ಉಪನಿರ್ದೇಶಕ ಬಿ.ವಿದ್ಯಾವತಿ ಮೆಡಂ ಅವರೊಂದಿಗೆ ಯುವ ನಾಯಕರಾದ ಸರ್ವೋತ್ತಮ ಜಾರಕಿಹೊಳಿ, ಪ್ರೊ.ಚಂದ್ರಶೇಖರ ಅಕ್ಕಿ, ಮಹಾಂತೇಶ ಗಂಗಪ್ಪಣ್ಣ ತಾಂವಶಿ, ಭಾರತಿ ಬಸವರಾಜ ಮದಬಾವಿ, ಸಾಂವಕ್ಕಾ ಸಿದ್ದಪ್ಪ ಬಾಣಶಿ, ಡಾ.ಸಿ.ಕೆ. ನಾವಲಗಿ, ಪ್ರೊ. ಆಯ್.ವ್ಹಿ. ದೇಯಣ್ಣವರ, ಬಸವಂತ ಮಾಯಪ್ಪ ಕೋಣಿ, ಹಣುಮಂತ ದುಂಡಪ್ಪ ವಗ್ಗರ, ಸುಭಾಷ ಲಕ್ಷ್ಮಣ ಜಂಬಗಿ, ಡಾ.ಅರುಣ ವಾಸುದೇವ ಸವತಿಕಾಯಿ, ಡಾ.ಲಕ್ಷ್ಮಣ ಎಸ್. ಚೌರಿ, ಭರತ ಕಲಾಚಂದ್ರ, ಹಣಮಂತರಾವ ಬಿ. ಪಾಟೀಲರು, ನ್ಯಾಯವಾದಿ ಎಮ್.ಆಯ್. ನೀಲಣ್ಣವರ, ಈರಣ್ಣ ಸಿದ್ದಪ್ಪ ಬಳಗಾರ, ವಿಜಯ ಹಿರೇಮಠ ಮುಂತಾದವರು ಉಪಸ್ಥಿತಲಿರುವರು.

ಸಂಪಾದನಾ ಕೃತಿಯ ಕುರಿತು ಪ್ರಾ.ಜಯಾನಂದ ಮಾದರ ಅವರು ಮಾತನಾಡಲಿದ್ದಾರೆ. ಸರ್ವರೂ ಆಗಮಿಸಬೇಕೆಂದು ಬೆಟಗೇರಿ ಗ್ರಂಥಾಲಯ ನಿರ್ವಾಹಕ ಬಸವರಾಜ ಪಣದಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ 

ಸುದ್ದಿ ಓದಿ