ಶಿಗ್ಗಾವ್

ಬೊಮ್ಮಾಯಿ ನೀರಾವರಿ ಸಾಧನೆ ಮಾಡಿದ್ದಾರೆ : ಪ್ರಭಾಕರ ಕೋರೆ

ಬೊಮ್ಮಾಯಿ ನೀರಾವರಿ ಸಾಧನೆ ಮಾಡಿದ್ದಾರೆ : ಪ್ರಭಾಕರ ಕೋರೆ

ಬೊಮ್ಮಾಯಿ ನೀರಾವರಿ ಸಾಧನೆ ಮಾಡಿದ್ದಾರೆ : ಪ್ರಭಾಕರ ಕೋರೆ 

ಶಿಗ್ಗಾವಿ 10ಃ ನೀರಾವರಿಯೇ ಕೃಷಿಕರ ಜೀವಾಳ, ಉತ್ತರ ಕರ್ನಾಟಕದ ಸಾಕಷ್ಟು ನೀರಾವರಿ ಯೋಜನೆಗಳನ್ನು ಮಂಜೂರು ಮಾಡಿದವರು ನೀರಾವರಿ ಸಚಿವರಾಗಿ ಮುಖ್ಯಮಂತ್ರಿಗಳಾಗಿ ಬಸವರಾಜ ಬೊಮ್ಮಾಯಿ ನೀರಾವರಿ ಸಾಧನೆ ಮಾಡಿದ್ದಾರೆ ಅಭಿವೃದ್ಧಿಯ ಕಲ್ಪನೆಯ  ಬೊಮ್ಮಾಯಿ ಅವರ ಪುತ್ರ ಭರತರನ್ನು ಗೆಲ್ಲಿಸಬೇಕೆಂದು  ಡಾ. ಪ್ರಭಾಕರ್ ಕೋರೆ ಹೇಳಿದರು. 

      ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿಯವರ ಪುತ್ರ ಭರತ ಬೊಮ್ಮಾಯಿ ಪರ ಪ್ರಚಾರ ಕೈಗೊಂಡು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಅಭಿವೃದ್ಧಿ ದೃಷ್ಠಿಯಿಂದ ಸಾಕಷ್ಟು ನೀರಾವರಿ ಯೋಜನೆಯ ಕಲ್ಪನೆಯಲ್ಲಿ  ಹಾಗೂ ನೀರಾವರಿ ಯೋಜನೆಯ ಮಂಜೂರಾತಿ ನೀಡಿದವರು. ನೀರು ಸಂಗ್ರಹವಾದರೇ ಕಾಂಗ್ರೇಸ್ ಸರ್ಕಾರ ಜನರಿಗೆ ಗ್ಯಾರಂಟಿ ನೀಡಲಿ ಆದರೇ ಇತರೇ ಅಭಿವೃದ್ಧಿ ಕೆಲಸ ನಿಲ್ಲಿಸುವುದು ಬೇಡಾ. ಇದರಿಂದಾಗಿ ಬೊಕ್ಕಸದ ದುಡ್ಡುಕೊಟ್ಟು ರಾಜಕೀಯ ಮಾಡುವಂತಾಗಿದೆ. ಅಭಿವೃದ್ದಿ ಕಾಂಗ್ರೇಸ್ಸಿನಿಂದ ಶೂನ್ಯವೆಂದರು. ರೈತರ ಜಮೀನು ಹಾಗೂ ರಾಜ್ಯದ ಮಠಮಾನ್ಯಗಳ ಆಸ್ತಿಗಳ ಮೇಲೆ ವಕ್ಫ ಬೋರ್ಡ ಹೆಸರು ದಾಖಲೆಯ ಬಗ್ಗೆ ಮಾದ್ಯಮದಗಳ ಪ್ರಶ್ನೆಗೆ ಈಗಾಗಲೇ ಜಂಟಿ ಸದನ ಸಮೀತಿಯ ಅಧ್ಯಕ್ಷರು ರಾಜ್ಯಕ್ಕೆ ಬೇಟಿ ನೀಡಿ ದೂರುಗಳನ್ನು ಪರೀಶೀಲಿಸಿದ್ದಾರೆ. ಅವರಿಗೆ ಅಧಿಕಾರವಿದೆ. ಪರೀಶೀಲನೆ ಮಾಡಲಿ ಕ್ರಮವನ್ನು ಕೈಗೊಳ್ಳಲಿ ಎಂದರು.  

       ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗೀಮಠ ಮಾತನಾಡಿ ರಾಜ್ಯದ ಮುಖ್ಯಮಂತ್ರಿಗಳಾಗಿ 2 ವರ್ಷಗಳ ಕಾಲ ಆಡಳಿತ ನೀಡಿದವರು. ಉತ್ತರ ಕರ್ನಾಟಕದ ನೀರಾವರಿ ಬಗ್ಗೆ ಹೆಚ್ಚು ಅನುಷ್ಠಾನ ಮಾಡಿ ಯಶಸ್ವಿಯಾದವರು. ಬೊಮ್ಮಾಯಿಯವರ ಆಡಳಿತದಲ್ಲಿ ಮನೆಗಳ ನಿರ್ಮಾಣಗಳೇ ಆಗಿಲ್ಲ ಎಂದು ಕಾಂಗ್ರೇಸ್ ನಾಯಕರು ಭಾಷಣದಲ್ಲಿ ಅರಚಾಡುತ್ತಿದ್ದಾರೆ. ಹನ್ನೇರಡು ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣವಾಗಿವೆ ಎಂದು ದಾಖಲೆಗಳಿಂದ ತಿಳಿದು ಬರುತ್ತದೆ.  ಭರತ ಬೊಮ್ಮಾಯಿಯವರನ್ನು ಅಭೂತಪೂರ್ವವಾಗಿ ಗೆಲುವು ತಂದು ಕೊಡಬೇಕು ಎಂದರು. 

   ವಿಧಾನ ಪರಿಷತ ಮಾಜಿ ಸಚೇತಕ ಶಂಕ್ರಣ್ಣ ಮುನವಳ್ಳಿ, ವಿರುಪಾಕ್ಷಪ್ಪ ಮಾಮನಿ ಸಿದ್ಧಾರ್ಥಗೌಡ್ರ ಪಾಟೀಲ. ರಮೇಶ ವನಗಳ್ಳಿ, ಉಮೇಶಗೌಡ ಪಾಟೀಲ. ಭರಮಜ್ಜ ನವಲಗುಂದ. ಜೆಡಿಎಸ್ ಅಧ್ಯಕ್ಷ ಈರಣ್ಣ ನವಲಗುಂದ, ತ್ರಿಲೋಚನಸ್ವಾಮಿ ಸುರಗೀಮಠ, ಸಣ್ಣಪ್ಪ ಬುಳ್ಳಕ್ಕನವರ. ಡಾ. ಪ್ರಭು ಪಾಟೀಲ. ಮಹಾಂತೇಶ ಯಲಿಗಾರ, ಅಲ್ಲದೇ ತಾಲೂಕಿನ ವಿವಿಧ ಸಮಾಜದ ಮುಖಂಡರು. ಬಿಜೆಪಿ ದುರಿಣರು ಉಪಸ್ಥಿತರಿದ್ದರು. 


ಸುದ್ದಿ ಓದಿ