ರಕ್ತದಾನದ ಅರಿವು ಕಾರ್ಯಕ್ರಮ
ಯರಗಟ್ಟಿ 22: ಸಮೀಪದ ಮುನವಳ್ಳಿ ಪಟ್ಟಣದ ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದಲ್ಲಿ ರಕ್ತದಾನದ ಅರಿವು ಕಾರ್ಯಕ್ರಮ ಜರುಗಿತು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಐ.ಆರ್.ಗಂಜಿ ಮಾತನಾಡುತ್ತ ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾಗಿದ್ದು ಇದು ಜೀವವನ್ನು ಉಳಿಸುವುದು. ನಮ್ಮ ರಾಜ್ಯದಲ್ಲಿ 800 ರಿಂದ 1100 ಯುನಿಟ್ ರಕ್ತದ ಅವಶ್ಯಕತೆ ಇದ್ದು ಶೇಕಡಾ 80 ರಷ್ಟು ಪೂರೈಕೆಯಾಗುತ್ತಿದ್ದು ಶೇಕಡಾ 20 ರಷ್ಟು ಕೊರತೆ ಇದೆ. ರಕ್ತದಾನ ಮಾಡಿದ 24 ಗಂಟೆಯೊಳಗೆ ಮತ್ತೆ ಹೊಸ ರಕ್ತ ತಯಾರಾಗುವುದು ಎಂದರು.
ಡಾ. ಎಸ್.ಎಲ್.ದಂಡಗಿ, ಡಾ.ಎಸ್.ವಿ.ಬಾಳಿ, ವಿ.ಎಸ್.ಹಿರೇಮಠ, ಜಿ.ಎ.ಭಂಡಾರಿ, ಎಸ್.ಆರ್.ಕಾಡಯ್ಯನವರ, ಪ್ರಾಚಾರ್ಯ ಎಂ.ಎಚ್.ಪಾಟೀಲ, ಪ್ರಾಚಾರ್ಯ ಕೆ.ಬಿ.ನಲವಡೆ, ಆನಂದ ಯಲಿಗಾರ ಸೇರಿದಂತೆ ಇತರರು ಇದ್ದರು