ಜಮಖಂಡಿ

ಕಾರಹುಣ್ಣಿಮೆ ಪ್ರಯುಕ್ತ ಎತ್ತುಗಳ ಓಟದ ಸ್ಪರ್ಧೆ

ಕಾರಹುಣ್ಣಿಮೆ ಪ್ರಯುಕ್ತ ಎತ್ತುಗಳ ಓಟದ ಸ್ಪರ್ಧೆ

ಲೋಕದರ್ಶನ ವರದಿ,

ಜಮಖಂಡಿ 04: ನಗರದಲ್ಲಿ ಕಾರಹುಣ್ಣಿಮೆ ದಿನದಂದು ಎತ್ತುಗಳ ಓಟದ ಸ್ಪರ್ಧೆಯಲ್ಲಿ ಬಿಳಿ ಬಣ್ಣದ ಎತ್ತು ಮೊದಲ ಸ್ಥಾನದಲ್ಲಿ ಪಡೆದಿದ್ದು. ಈ ಬಾರಿ ನಾಡಿನಲ್ಲಿ ಬಿಳಿ ಜೋಳದ ಫಸಲು ಚೆನ್ನಾಗಿ ಬರುತ್ತೆ ಅನ್ನೋ ನಂಬಿಕೆಗೆ ರೈತರಲ್ಲಿ ಮಂದಹಾಸ ಮೂಡಿದೆ.

ಇಲ್ಲಿನ ಹನುಮಾನ ದೇವಸ್ಥಾನದಿಂದ ಮುಧೋಳ ರಸ್ತೆಯ ಹಳೆಯ ಫಾರೆಸ್ಟ ಆಫೀಸಿನವರಗೆ ಎತ್ತುಗಳ ಓಟ ಸ್ಪರ್ಧೆಯನ್ನು ನಡೆಸಲಾಯಿತು. ಓಟದ ಸ್ಪರ್ಧೆಯಲ್ಲಿ ಬಿಳಿ ಬಣ್ಣದ ಎತ್ತು ಮೊದಲ ಸ್ಥಾನ ಪಡೆದುಕೊಂಡಿತು. ಎತ್ತುಗಳ ಓಟದ ಸ್ಪರ್ಧೆಯಲ್ಲಿ ವಿವಿಧ ಬಣ್ಣಗಳ ಎತ್ತುಗಳು ಸಾಲುಸಾಲಾಗಿ ಓಡಿ ಬರುತ್ತಿದ್ದು. ರಸ್ತೆಯ ಅಕ್ಕ-ಪಕ್ಕದಲ್ಲಿ ನಿಂತಿರುವ ಜನ ಕೇಕೆ ಹಾಕುವ ಮೂಲಕ ಕಾರಹುಣ್ಣಿಮೆಯನ್ನು  ಸಂಭ್ರಮಿಸುತ್ತಿದರು. ಕಾರಹುಣ್ಣಿಮೆ ರೈತರ ಪಾಲಿಗೆ ಸಂಭ್ರಮದ ಹಬ್ಬವಾಗಿದ್ದು. ರೈತರು ಈ ಹಬ್ಬ ವರ್ಷದ ಮೊದಲ ಹಬ್ಬವಾಗಿದೆ. ಎತ್ತುಗಳು ಮತ್ತು  ಹೋರಿಗಳ ಮೈತೊಳೆದು ರೈತರು ವಿವಿಧ ಬಗೆ ಬಣ್ಣಗಳಿಂದ ಶೃಂಗರಿಸಿ. ಕೊಂಬುಗಳಿಗೆ  ಬಣ್ಣ ಬಳೆಯುತ್ತಾರೆ. ಜೊತೆಗೆ ಮೈಮೇಲೆ ವಿಶೇಷವಾದ ಚಿತ್ತಾರ ಬಿಡಿಸಿ. ಊರ ಪ್ರಮುಖ ರಸ್ತೆಯ ಮೂಲಕ ಮೆರವಣಿಗೆ ಮಾಡುತ್ತಾರೆ. ಅಂದು ಕೃಷಿ ಚಟುವಟಿಕೆಯಿಂದ ವಿರಾಮ ನೀಡುತ್ತಾರೆ. ಹಬ್ಬದ ದಿನದಂದು ಹೋಳಿಗೆ, ಕಡುಬುಗಳಿಂದ ಉಣಬಡಿಸುವ  ಮೂಲಕ ಅನ್ನದಾತರು ತಮ್ಮ ಎತ್ತುಗಳ ಮೇಲಿನ ಅಭಿಮಾನ ಮೆರೆಯುತ್ತಾರೆ.

ಎತ್ತುಗಳ ಓಟದ ಸ್ಪರ್ಧೆಯ ಸಂದರ್ಭದಲ್ಲಿ ಕೆ.ಕೆ.ತುಪ್ಪದ, ಮಹಾದೇವ ತೆಲಬಕ್ಕನವರ, ಸಂಗಪ್ಪ ದಡ್ಡಿಮನಿ, ಮಲ್ಲೇಶ ಹೇಸಮನಿ, ಬಸವರಾಜ ಹಂಗರಗಿ, ಮಲ್ಲಿಕಾಜರ್ುನ ಲಿಂಗನೂರ, ನಂದೆಪ್ಪಾ ಹಿಪ್ಪರಗಿ, ಶ್ರೀಶೈಲ ಮಳಗುಂಡಿ,  ರೇವಣೆಪ್ಪಾ ತೆಲಬಕ್ಕನವರ, ಅಲ್ತಾಫ ಭಾಗವಾನ, ರಾಮಣ್ಣಾ ಕಾಖಂಡಕಿ, ಪ್ರಭು ಕಲ್ಯಾಣಶೆಟ್ಟಿ , ಪ್ರಭು ಅರಕೇರಿ, ಸಿದ್ರಾಮ ಜಂಬಗಿ, ಸಂಗಪ್ಪ ಓಣಿ, ಮಾಳು ಕಡಪಟ್ಟಿ, ಸಿದ್ದಪ್ಪಾ ಮಾಳಿ, ವಿರುಪಾಕ್ಷಿ ಹಲ್ಯಾಳ, ಸಿದ್ದಯ್ಯಾ ಕಲಕಟ್ಟಿಮಠ,  ಹಾಗೂ ಇನ್ನಿತರರು ಇದ್ದರು.


ಸುದ್ದಿ ಓದಿ