ಬಿನ್ನವೂರು ಅಭಿವೃದ್ಧಿ ಪ್ರಗತಿಯ ಚಿಂತನೆ ನಡೆಯಲಿ: ಕೋಳಿವಾಡ
ರಾಣೆಬೆನ್ನೂರು 25: ಇಂದಿನ ವಾಣಿಜ್ಯ ನಗರ, ಅಂದಿನ ಬಿನ್ನ ವೂ ರು, ಬಹುದೊಡ್ಡ ಇತಿಹಾಸ ಹೊಂದಿದೆ ಎಂದು ವಿಧಾನಪರಿಷತ್ ಮಾಜಿ ಸಭಾಪತಿ ಕೆ ಬಿ ಕೋಳಿವಾಡ ಹೇಳಿದರು. ಅವರು ಇಲ್ಲಿನ ನಗರಸಭಾ ಆವರಣದಲ್ಲಿ ಆಯೋಜಿಸಲಾಗಿದ್ದ, ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ನಡೆದ ರಾಣೆಬೆನ್ನೂರು ಒಂದು ಸಾಂಸ್ಕೃತಿಕ ಅವಲೋಕನ ಹಿನ್ನೆಲೆಯಲ್ಲಿ ಹೊರತರಲಾದ, ಬಿನ್ನ ವೂರು ಗ್ರಂಥ ಮತ್ತು ಬ್ಲಾಗರ್ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಾಡಿನಲ್ಲಿಯೇ ಅಭಿವೃದ್ಧಿಗೆ ರಾಣೆಬೆನ್ನೂರು ಭಿನ್ನವಾಗಿದೆ, ಅದಕ್ಕೆ ಕಾರಣ ಇಲ್ಲಿರುವ ಸಕಲ ಸಂಪನ್ಮೂಲಗಳು. ಎಂದು ವಿವರಿಸಿದ ಕೋಳಿವಾಡರೂ, ಕುದರಿಹಾಳ ಮುದೇನೂರು ಕುಡಿಯುವ ನೀರಿನ ಯೋಜನೆ ಬಂದನಂತರ ಬಿನ್ನ ವೂರು ಪರಿಪೂರ್ಣ ಬದಲಾವಣೆ ಕಂಡಿದೆ ಎಂದರು.
ರೈತರ ಅನುಕೂಲತೆಗಾಗಿ ಅನೇಕ ವರ್ಷಗಳ ಹೋರಾಟದ ಫಲ, ಅಪ್ಪರ ತುಂಗಾ ಯೋಜನೆ ಜಾರಿಗೆ ಬಂತು, ತಾಲೂಕು ಹಸಿರು ಕಂಡಿತು. ಅಭಿವೃದ್ಧಿ ಪ್ರಕ್ರಿಯೆ ನಿರಂತರವಾಗಿರಬೇಕು, ಅದು ಜೀವಂತಿಕೆಯ ಲಕ್ಷಣ ಎಂದರು ನಗರಸಭೆ ಆಡಳಿತ ಅಭಿವೃದ್ಧಿಪಥದತ್ತ ಸಾಗಿರುವುದು ಸಂತೋಷದ ಸಂಗತಿ, ಆದರೆ, ಒಂದು ಉತಾರ ಪಡೆಯಲು ಮೂರು ತಿಂಗಳು ಕಾಯ ಬೇಕೆನ್ನುವುದು ವಿಷಾದಕರ ಸಂಗತಿ, ಜನಸಾಮಾನ್ಯರ ಕೆಲಸ ಕಾರ್ಯಗಳು ಶೀಘ್ರ ವಾಗಬೇಕು, ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಬಾರದು, ಅಧಿಕಾರಿಗಳು ನೌಕರರು ಸಿಬ್ಬಂದಿಗಳು, ಮತ್ತು ಆಡಳಿತ ಸದಸ್ಯರು ಗಮನಹರಿಸಬೇಕು ಇಲ್ಲವಾದರೆ ಬಡ.ಜನರ ಶಾಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಕೋಳಿವಾಡರೂ ಸೂಕ್ಷ್ಮವಾಗಿ ಚಾಟಿ ಬೀಸಿದರು. ದಿವ್ಯ ಸಾನಿಧ್ಯ ವಹಿಸಿದ್ದ ಸ್ಥಳೀಯ ರಾಮಕೃಷ್ಣ ಆಶ್ರಮದ, ಸ್ವಾಮಿ ಪ್ರಕಾಶಾನಂದ ಜಿ ಮಹಾರಾಜ್ ಅವರು ಯಾವುದೇ ಕ್ಷೇತ್ರಗಳ ಅಭಿವೃದ್ಧಿ ಕಾಣಬೇಕಾದರೆ, ಸ್ಥಳಿಯ ನಾಗರಿಕರ ಸಹಕಾರ ಅಗತ್ಯ, ಊರು ಅಭಿವೃದ್ಧಿಪಥದತ್ತ ಸಾಗುತ್ತಿರುವುದು, ಜಿಲ್ಲೆಗೆ ನಾಡಿಗೆ ಹೆಮ್ಮೆಯ ಸಂಗತಿ. ರಾಣೆಬೆನ್ನೂರು ನಾಡಿನಲ್ಲಿ ಗುರುತಿಸಿಕೊಂಡಿದೆ. ಅಲ್ಲದೆ ಈ ತಾಲೂಕು ಭಾವೈಕ್ಯತೆಯಿಂದ ಕೂಡಿದೆ, ಯಾವುದೇ ಜಾತಿ ಮತ ಭೇದ ಭಾವ ಪಂಥ ಇಲ್ಲಿಲ್ಲ, ಈ ಕಾರಣದಿಂದಲೇ ವೇಗವಾಗಿ ಬೆಳವಣಿಗೆ ಕಂಡಿದೆ ಎಂದರು ನಗರಸಭಾ ಅಧ್ಯಕ್ಷ ರೂಪಾ ರಾ. ಚಿನ್ನಿಕಟ್ಟಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ಬಿನ್ನ ವೂರು ಗ್ರಂಥ ಲೋಕಾರ್ಪಣೆಗೊಳಿಸಿದರು ಕಿಯೋನಿಕ್ಸ್ ಸಂಸ್ಥಾಪಕ ಡಾ : ಸುರೇಶ್ ಸಿ.ಟಿ. ಅವರು ಬ್ಲಾಗರ್ ಬಿಡುಗಡೆಗೊಳಿಸಿದರು ಉಪಾಧ್ಯಕ್ಷ ಪ್ರಭಾವತಿ ತಿಳುವಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದಪ್ಪ ಬಾಗಲದವರ, ಸಂಶೋಧಕ, ಗ್ರಂಥ ಸಂಪಾದಕ ಪ್ರಮೋದ್ ನಲವಾಗಲ, ಡಾ : ಕಾಂತೇಶ್ ಕೋಡಿಹಾಳ ಗ್ರಂಥ ಪರಿಚಯಿಸಿದರು.
ಸದಸ್ಯ ಪ್ರಕಾಶ ಬುರಡಿಕಟ್ಟಿ ನಾಗರಾಜ ಅಡ್ಮನಿ, ಮಣಿ ಪವಾರ್, ಪ್ರಕಾಶ್ ಪೂಜಾರ, ಪಿ.ಜೆ.ಮರಿಯಮ್ಮನವರ, ಸೇರಿದಂತೆ ಮತ್ತಿತರ ಗಣ್ಯರು, ನಗರಸಭಾ ಸದಸ್ಯರು ಸಿಬ್ಬಂದಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ನೂರಾರು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಪೌರಾಯುಕ್ತ ಉದಯಕುಮಾರ್ ಬಿ. ಟಿ..ಅವರು, ಇತಿಹಾಸದ ಅರಿವು ಜನಾಂಗದಿಂದ ಜನಾಂಗಕ್ಕೆ ಸಿಗಬೇಕು, ನಗರಸಭೆ ಆಡಳಿತ ಈ ನಿಟ್ಟಿನಲ್ಲಿ ಹೊರತಂದಿರುವ ಬಿನ್ನವೂರು, ರಾಜ್ಯದಲ್ಲಿಯೇ ಮಾದರಿಯಾಗಿದೆ. ಇದೊಂದು ಅತ್ಯುತ್ತಮ ಕಾರ್ಯ ನಡೆದಿದೆ ಇದಕ್ಕೆ ಸರ್ವರ ಸಹಕಾರ ಪ್ರಮುಖ ಕಾರಣವಾಗಿದೆ ಎಂದರು. ಪ್ರಕಾಶ್ ಗಚ್ಚಿನಮಠ ಪ್ರಾಥರ್ಿಸಿದರು ಪರಿಸರ ಅಭಿಯಂತೆ ಮಂಜುಳಾದೇವಿ ಮುಂಡಾಸದ, ಸ್ವಾಗತಿಸಿದರು, ಕಾಂತೇಶ್ ಅಂಬಿಗೇರ್ ನಿರೂಪಿಸಿ, ವಂದಿಸಿದರು