ಭುವನೇಶ್ವರಿ ಪುತ್ಥಳಿ ರಕ್ಷಣೆ ಆಗ್ರಹಿಸಿ ಮನವಿ

ಭುವನೇಶ್ವರಿ ಪುತ್ಥಳಿ ರಕ್ಷಣೆ ಆಗ್ರಹಿಸಿ ಮನವಿ

ಲೋಕದರ್ಶನ ವರದಿ

ಬಳ್ಳಾರಿ 06:ಬಳ್ಳಾರಿ ನಗರೂರ್ ನಾರಾಯಣರಾವ್ ಉದ್ಯಾನವನದಲ್ಲಿ  ಅನಾಥವಾಗಿರುವ ಶ್ರೀ ಭುವನೇಶ್ವರಿ ಪುತ್ಥಳಿ ರಕ್ಷಣೆ ಮತ್ತು ಸುತ್ತಮುತ್ತಲು ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವಂತೆ ಒತ್ತಾಯಿಸಿ ನವಕನರ್ಾಟಕ ಯುವಶಕ್ತಿ ಸಂಘಟನೆಯ ಜಿಲ್ಲಾ ಘಟಕವು ಬುಧವಾರದಂದು ಬೆಳಿಗ್ಗೆ ಬಳ್ಳಾರಿ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳಿಗೆ ಮನವಿ ಪತ್ರವನ್ನು ನೀಡುವ ಮೂಲಕ ಒತ್ತಾಯಿಸಿದರು. 

ಬಳ್ಳಾರಿ ನಗರದ ಪ್ರಮುಖ ಉದ್ಯಾನವಾಗಿರುವ ನಗರೂರ್ ನಾರಾಯಣರಾವ್ ಉದ್ಯಾನವನವನ್ನು ಬಳ್ಳಾರಿ ನಗರಸಭೆಯು ಈ ಹಿಂದೆ ಸ್ಥಾಪಿಸಿತ್ತು. ಕಳೆದ 15 ವರ್ಷಗಳ ಹಿಂದೆ ಅದನ್ನು ಮತ್ತೊಮ್ಮೆ ಅಭಿವೃದ್ಧಿ ಪಡಿಸಲಾಗಿತ್ತು. ಆದರೆ ಆ ಉದ್ಯಾನವನವು ಈಗ ಸಂಪೂರ್ಣ ಹಾಳಾಗಿದ್ದು, ಅದರಲ್ಲಿ ಕನರ್ಾಟಕ ಮಾತೆ ತಾಯಿ ಶ್ರೀ ಭುವನೇಶ್ವರಿಯ ಪುತ್ಥಳಿಯನ್ನು ಸ್ಥಾಪನೆ ಮಾಡಲಾಗಿದೆ. ದೇವಿಗೆ ಪ್ರತಿನಿತ್ಯ ಪೂಜೆ, ಹಿಂಭಾಗದಲ್ಲಿ ಜಲಧಾರೆ, ಕೊಳ ಎಲ್ಲವೂ ಇದ್ದವು. ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಸಂಪೂರ್ಣ ಹಾಳುಗೆಡವಲಾಗಿದೆ. ಪ್ರಸ್ತುತ ಇದು ಈಗ ಪುಂಡಪೋಕರಿಗಳ ತಾಣವಾಗಿ, ರಾತ್ರಿಯ ಹೊತ್ತು ಮುಕ್ತ ಬಾರ್ (ಮದ್ಯಪಾನದ ಅಡ್ಡೆಯಾಗಿ) ಆಗಿ ಮಾರ್ಪಟ್ಟಿದೆ. ಪಾಕರ್್ ಒಳಗೆ ಪ್ರವೇಶಿಸುವ ವಾಮಮಾರ್ಗಗಳನ್ನು ಮೊದಲು ಮುಚ್ಚಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಭುವನೇಶ್ವರಿಯ ಪುತ್ಥಳಿಯಿರುವ ಸ್ಥಳದಲ್ಲಿ ಮದ್ಯಪಾನದ ಬಾಟಲಿಗಳು ಬಿದ್ದಿವೆ. ಅಲ್ಲಿಯೇ ಗುಟ್ಕಾ, ಪಾನ್ ಪರಾಗ್ಗಳನ್ನು ತಿಂದು ಉಗುಳಲಾಗಿದೆ. ಕನರ್ಾಟಕ ಪ್ರಮುಖ ಜಿಲ್ಲಾ ಕೇಂದ್ರವಾಗಿರುವ ಬಳ್ಳಾರಿ ನಗರದಲ್ಲಿ ಭುವನೇಶ್ವರಿ ಪುತ್ಥಳಿಗೆ ಇಷ್ಟೊಂದು ಅಪಮಾನ ಮತ್ತು ನಿರ್ಲಕ್ಷ್ಯ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದು ಕನ್ನಡಿಗರಿಗೆ ಮತ್ತು ಕನ್ನಡ ನಾಡಿಗೆ ಮಾಡುತ್ತಿರುವ ಅಪಮಾನವಾಗಿದೆ. ಆದ್ದರಿಂದ ಕೂಡಲೇ ಈ ಪುತ್ಥಳಿಗೆ ರಕ್ಷಣೆ ಒದಗಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. 

ಮನವಿಗೆ ಸ್ಪಂದಿಸಿದ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಹನುಮಂತಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ, ಪಾಲಿಕೆಯ ಸ್ವಚ್ಛತಾ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಿಸಿ ಸ್ವಚ್ಛತೆ ಮಾಡಿದರು. ಉದ್ಯಾನವನದಲ್ಲಿ ಓವರ್ಹೆಡ್ ಟ್ಯಾಂಕ್ವೊಂದು ಇದ್ದು, ಅದರಿಂದ ನೀರು ಹೆಚ್ಚುವರಿಯಾಗಿ ಹರಿಯುತ್ತಿದ್ದು, ಅದನ್ನು ಒಬ್ಬ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ನೀರು ಹೆಚ್ಚುವರಿಯಾಗಿ ಹರಿಯದಂತೆ, ವ್ಯರ್ಥವಾಗದಂತೆ ನಿಗಾವಹಿಸುವುದಾಗಿ ಭರವಸೆ ನೀಡಿದರು. 

ಮನವಿ ಪತ್ರ ಸಲ್ಲಿಕೆ ಹಾಗೂ ಸ್ವಚ್ಛತೆಯ ಸಂದರ್ಭದಲ್ಲಿ ನವಕನರ್ಾಟಕ ಯುವಶಕ್ತಿ  ಸಂಘಟನೆಯ ರಾಜ್ಯ ಉಪಾಧ್ಯಕ್ಷ ಸಿದ್ಮಲ್ಮಂಜುನಾಥ, ಜಿಲ್ಲಾಧ್ಯಕ್ಷ ಕೆ.ರಮೇಶ್, ನಗರ ಘಟಕದ ಅಧ್ಯಕ್ಷ ಹಲಕುಂದಿ ರವಿಕುಮಾರ್, ಮಾದಗೊಂಡೆ ಮಂಜುನಾಥ, ಮುಂಡಾಸದ ಮಲ್ಲಿಕಾಜರ್ುನ, ಎಂ.ದೇವೇಶ್, ಯಮುನಪ್ಪ, ಡಿ.ಮಹೇಶ್ಕುಮಾರ್, ಎಂ.ನಾಗರಾಜ ಮುಂತಾದವರು ಹಾಜರಿದ್ದರು. 


ಸುದ್ದಿ ಓದಿ