ಭವಾನಿ ಕಲಾಮಂದಿರದ ರಜತ ಮಹೋತ್ಸವ

ಭವಾನಿ ಕಲಾಮಂದಿರದ ರಜತ ಮಹೋತ್ಸವ

ಲೋಕದರ್ಶನ ವರದಿ

ಬಳ್ಳಾರಿ 01:ಬೆಳ್ಳಿ ಹಬ್ಬದ ಬೆಳಕಿನಲ್ಲಿ ಮಿನುಗುತ್ತಿರುವ ಶ್ರೀ ಭವಾನಿ ಕಲಾಮಂದಿರ (ಚಿತ್ರಕಲಾ ಶಾಲೆ)ವು ಖ್ಯಾತ ಚಿತ್ರಕಲಾವಿದ, ಕಲಾಶಿಕ್ಷಕ ಶ್ರೀ ಆರ್.ಎಲ್.ಜಾದವ್ರವರ ಚಿಂತನೆಯ ಫಲ. ಬಳ್ಳಾರಿಯ ಶಿಕ್ಷಕ ತರಬೇತಿ ಕೇಂದ್ರದಲ್ಲಿ 1974ರಿಂದ ಚಿತ್ರಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ಆರ್.ಎಲ್.ಜಾಧವ್ರವರು 38 ವರ್ಷಗಳ ಸೇವೆಯನ್ನು ಸಲ್ಲಿಸಿ 2012ರಲ್ಲಿ ನಿವೃತ್ತಿ ಹೊಂದಿದರು.

ಚಿತ್ರಕಲಾ ಶಿಕ್ಷಕರಾಗಿ ತಮ್ಮ ಸೇವಾವಧಿಯಲ್ಲಿ ಸಾವಿರಾರು ಪ್ರಶಿಕ್ಷಣಾಥರ್ಿಗಳಿಗೆ ಚಿತ್ರಕಲೆಯಲ್ಲಿ ಆಸಕ್ತಿ ಮೂಡಿಸಿ ಅವರ ಶಿಕ್ಷಕ ವೃತ್ತಿಯಲ್ಲಿ ಯಶಸ್ವಿ ಬೋಧಕರೆನಿಸಿಕೊಳ್ಳಲು ಕಾರಣೀಭೂತರಾಗಿದ್ದಾರೆ. ತಮ್ಮ ಬಾಲ್ಯದ ಕಷ್ಟದ ದಿನಗಳು ಬದುಕಿಗಾಗಿ ಪಟ್ಟ ಶ್ರಮ ಚಿತ್ರರಚನೆಯಿಂದ ರೂಪಗೊಂಡ ತಮ್ಮ ಸ್ವಾವಲಂಬನೆಯ ಬದುಕನ್ನು ಅರಿತು ಚಿತ್ರಕಲಾ ಶಿಕ್ಷಣದ ಉಳಿವು ಮತ್ತು ಬೆಳವಣಿಗೆಗಾಗಿ ಶ್ರಮಿಸುತ್ತಿದ್ದಾರೆ. 

ಚಿತ್ರಕಲಾ ಶಿಕ್ಷಣವನ್ನು ಉಳಿಸಿ, ಬೆಳೆಸುವ ಮಹತ್ವಾಕಾಂಕ್ಷೆಯಿಂದ ಪ್ರತ್ಯೇಕವಾದ ಚಿತ್ರಕಲಾ ಶಾಲೆಯೊಂದನ್ನು ಸ್ಥಾಪಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ ಜಾಧವ್ರವರ ಸಂಕಲ್ಪಕ್ಕೆ ಪ್ರೇರಣೆ, ಪೋಷಣೆಯನ್ನು ನೀಡಿ ಸುಂದರ ಸ್ವರೂಪವನ್ನು ಕೊಟ್ಟವರು ಸಂಸ್ಥಾಪಕ ಕಾರ್ಯದಶರ್ಿ ಗಳಾದ ಶ್ರೀಮತಿ ಶೋಭಾ ಜಾಧವ್ರವರು. ಮೊದಲಿಗೆ 'ಡಿ.ಎಂ.ಸಿ.ಕೋಸರ್್'ನ್ನು ಜೂನ್-1993 ರಲ್ಲಿ ಆರಂಭಿಸಿದ ವರ್ಷದಲ್ಲಿ 34 ವಿದ್ಯಾಥರ್ಿಗಳು (19 ಬಾಲ ಕರು ಮತ್ತು 15 ಬಾಲಕೀಯರು) ಪ್ರವೇಶವನ್ನು ಪಡೆಯು ತ್ತಾರೆ. ಎರಡು ವರ್ಷಗಳ ಕಾಲ ಬಾಡಿಗೆ ಕಟ್ಟಡದಲ್ಲಿ ನಡೆದು ಕೊಂಡು ಬಂದ ಚಿತ್ರಕಲಾ ಶಾಲೆ 1995 ರಲ್ಲಿ ತಿಲಕ್ ನಗರದ ಸ್ವಂತ ನಿವೇಶನದಲ್ಲಿ ಚಿತ್ರ ಕುಠೀರವನ್ನು ನಿಮರ್ಿಸಿಕೊಂಡು ಡಿ.ಎಂ.ಸಿ., ಆಟರ್್ ಮಾಸ್ಟರ್ ಡಿಪ್ಲೋಮಾ ಇನ್ ಡ್ರಾಯಿಂಗ್ ಮತ್ತು ಪೇಂಟಿಂಗ್ ತರಗತಿಗಳನ್ನು ಮುಂದುವರೆಸುತ್ತಾ ಕಾರ್ಯ ಮುಂದುವರೆಸಿತು. ಕಾಲಕಾಲಕ್ಕೆ ಆಗುವ ಶೈಕ್ಷಣಿಕ, ಆಡಳಿತಾತ್ಮಕ ಬದಲಾವಣೆಗಳೆಲ್ಲವನ್ನೂ ಭವಾನಿ ಚಿತ್ರಕಲಾ ಶಾಲೆ ಮೈಗೂಡಿಸಿಕೊಂಡು ಬಂದಿತು. ಪ್ರೌಢ ಶಿಕ್ಷಣ ಮಂಡಳಿ ಇಲಾಖೆಯಿಂದ ತಾಂತ್ರಿಕ ಶಿಕ್ಷಣ ಇಲಾಖೆಗೆ ನಂತರ ಕಾಲೇಜು ಶಿಕ್ಷಣ ಇಲಾಖೆಗೆ ಆಡಳಿತಾತ್ಮಕ ಬದಲಾವಣೆ ಯಾಯಿತು ಜೊತೆಗೆ ಪಠ್ಯ ವಿಧಾನದಲ್ಲಿಯೂ ಮಾಪರ್ಾಡುಗಳಾದವು. ಆರಂಭಿಕ ಡಿ.ಎಂ.ಸಿ.ಯು 2001-02 ರಲ್ಲಿ ಕಲಾಮೂಲದ ಜೊತೆಗೆ 3 ವರ್ಷದ ವಿಶೇಷ ಪರಿಣಿತಿ ಡಿಪ್ಲೋಮಾ ಆಯಿತು. 2005-06ರಲ್ಲಿ ವಿಶೇಷ ಪರಿಣಿತಿ ಡಿಪ್ಲೋಮಾ ಮುಂದುವರೆದು ಸಾಗಿ ಬಂದಿದೆ.

ಈ ಕಲಾಶಾಲೆಯಲ್ಲಿ ಶಿಕ್ಷಣ ಪಡೆದ ಹಲವಾರು ವಿದ್ಯಾಥರ್ಿಗಳು ಚಿತ್ರಕಲಾ ಶಿಕ್ಷಕರಾಗಿ, ವೃತ್ತಿನಿರತ ಹವ್ಯಾಸಿ ಕಲಾವಿದರಾಗಿ ನಾಡಿನಾದ್ಯಂತ ಹೆಸರು ಮಾಡಿರುತ್ತಾರೆ. ಬೆಳ್ಳಿಹಬ್ಬದ ಸಂದರ್ಭದಲ್ಲಿರುವ 2017-18ರ ಈ ವರ್ಷದಲ್ಲಿ ವಿಶೇಷವಾಗಿ "ಕಿನ್ನಾಳು ಕಲೆ"ಯ ಪ್ರಾತ್ಯಕ್ಷಿಕೆ ಮತ್ತು ಕಾಯರ್ಾಗಾರ, "ವರ್ಣ ಚಿತ್ರ ರಚನಾ ಕಾಯರ್ಾಗಾರ ಚುಕ್ಕಿ ಚಿತ್ರಕಲೆ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ಪ್ರೌಢಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪಧರ್ೆ ಮುಂತಾದ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಗಿದ್ದು, ಚಟುವ ಟಿಕೆಗಳಲ್ಲಿ ಪಾಲ್ಗೊಂಡ ವಿದ್ಯಾಥರ್ಿಗಳಿಗೆ ಬಹುಮಾನ, ಪ್ರಶಸ್ತಿ ಪತ್ರದ ಜೊತೆಗೆ ಭಾಗವಹಿಸಿದ ಎಲ್ಲಾ ಮಕ್ಕ ಳಿಗೆ ಪ್ರಶಂಸಾ ಪತ್ರಗಳನ್ನು ನೀಡಲಾಗುತ್ತಿದೆ. ಈ ಎಲ್ಲಾ ಚಟುವಟಿಕೆಗಳ ಹಿನ್ನೆಲೆಯಲ್ಲಿ  ರಜತ ವರ್ಷದ ಸವಿ ಸ್ಮರಣೆಗೆಂದು ಈ "ರಜತ ರೇಖೆ" ಎಂಬ ಸ್ಮರಣ ಸಂಚಿಕೆಯನ್ನು ಹೊರತರಲಾಗುತ್ತಿದೆ.


ಸುದ್ದಿ ಓದಿ