ಎನ್.ಎಂ.ಡಿ.ಸಿ ಉಳಿಸಲು ಕಾಮರ್ಿಕರಿಂದ ಜ.14ರಂದು ಬಳ್ಳಾರಿ ಚಲೋ

ಎನ್.ಎಂ.ಡಿ.ಸಿ ಉಳಿಸಲು ಕಾಮರ್ಿಕರಿಂದ ಜ.14ರಂದು ಬಳ್ಳಾರಿ ಚಲೋ

ಬಳ್ಳಾರಿ 04:ಕಳೆದ ಎರಡು ತಿಂಗಳುಗಳಿಂದ ಸ್ಥಗಿತಗೊಂಡಿರುವ ಡೋಣಿಮಲೈನ ರಾಷ್ಟ್ರೀಯ ಖನಿಜ ಅಭಿವೃದ್ದಿ ನಿಗಮ(ಎನ್.ಎಂ.ಡಿ.ಸಿ) ಗಣಿಗಾರಿಕೆ ಆರಂಭಕ್ಕೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಜ14ರಂದು ಕಾಮರ್ಿಕರು ಬಳ್ಳಾರಿ ಚಲೋ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಈ ಕುರಿತು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಎಐಟಿಯುಸಿ ಮತ್ತು ಎನ್ಟಿಯುಸಿನ ಕಾನೂನು ಸಲಹೆಗಾರ ಎಂ.ಆರ್ ಇಸ್ಮಾಯಿಲ್ ಅವರು ಗಣಿಗಾರಿಕೆ ನಡೆಸಲು ರಾಜ್ಯ ಸರಕಾರಕ್ಕೆ ಒಟ್ಟು ವ್ಯೆವಹಾರದ ಶೇ.80 ರಷ್ಟನ್ನು ಪ್ರೀಮಿಯಂ ರೂಪದಲ್ಲಿ ಸಲ್ಲಿಸಬೇಕಂಬ ಆದೇಶದ ಹಿನ್ನಲೆಯಲ್ಲಿ ಅದು ಸಾದ್ಯವಾಗದೆಂದು ಕಳೆದ ನ.04ರಿಂದ ಗಣಿಗಾರಿಕೆ ಸ್ಥಗಿತಗೊಳಿಸಿದೆ. ಇದರಿಂದ ಇಲ್ಲಿ ಕೆಲಸ ಮಾಡುವ ಕಾಮರ್ಿಕರು ಅಧಿಕಾರಿಗಳು, ಖಾಯಂ ನೌಕರರು ಕೆಲಸವಿಲ್ಲದಂತೆ ಖಾಲಿ ಕುಳಿತುಕೊಳ್ಳುವಂತಾಗಿದೆ. ಮತ್ತೊಂದೆಡೆ ತಾತ್ಕಾಲಿಕ ನೌಕರರನ್ನು ಕೆಲಸಕ್ಕೆ ಬೇಡವೆಂದು ಹೇಳಿರುವುದು ಅವರಿಗೆ ಮತ್ತೇ ಆರಂಭವಾದರೆ ನಿಮ್ಮನ್ನು ತೆಗೆದುಕೊಳ್ಳುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರಂತೆ ಇದರಿಂದ ನೌಕರರು ಆತಂಕಕ್ಕೊಳಗಾಗಿದ್ದು ಕೂಡಲೇ ಗಣಿಗಾರಿಕೆ ಆರಂಭಿಸುವಂತೆ ತಿಳಿಸಿದ್ದಾರೆ. ಇಲ್ಲದಿದ್ದರೇ ಇದರ ವಿರುದ್ದ ನಿಯಮಾವಳಿಯನ್ನು ತೆಗೆದು ಹಾಕಬೇಕೆಂದು ಆಗ್ರಹ ಪಡಿಸಿದ್ದಾರೆ. ಅದಕ್ಕಾಗಿ ಜ.14ರಂದು ಎನ್.ಎಂ.ಡಿ.ಸಿ ಕಾಮರ್ಿಕರು ಎಲ್ಲಡೆಯಿಂದ ಬಳ್ಳಾರಿಗೆ ಬಂದು ಬುಡಾ ಆವರಣದಿಂದ ನಗರದಲ್ಲಿ ಪ್ರತಿಬಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸಲ್ಲಿಸಲಿದ್ದು ಅದಕ್ಕೆ ಸರಕಾರ ಸ್ಪಂಧಿಸದಿದ್ದರೇ ಬೆಂಗಳೂರು ಚಲೋ ನಡೆಸುವುದಾಗಿ ಹೇಳಿದರು. ಈ ಸುದ್ದಿಗೋಷ್ಟಿಯಲ್ಲಿ ಕಾಮರ್ಿಕ ಸಂಘಟನೆ ಮುಖಂಡ ಟಿ.ಜಿ.ವಿಠ್ಠಲ್, ಆದಿಮೂತರ್ಿ, ಸೋಮಶೇಖರ್, ಟಿ.ವೀರಭದ್ರಪ್ಪ, ಕರಿಬಸಪ್ಪ, ಎ.ಭಾಸ್ಕರ್, ಎಸ್.ಗೋಪಿ, ತಿಪ್ಪೆಸ್ವಾಮಿ, ಕಟ್ಟೆಬಸಪ್ಪ, ಗಂಗಾದರ್, ಗುರುಮೂತರ್ಿ ಇನ್ನೂ ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ