ಬಳ್ಳಾರಿ: ವಿದ್ಯಾರ್ಥಿಗಳು ಮೂಢನಂಬಿಕೆ ಕಿತ್ತೆಸೆಯಬೇಕು: ವೈಚಾರಿಕ ಚಿಂತಕ ವೆಂಕಟಯ್ಯ

ಬಳ್ಳಾರಿ: ವಿದ್ಯಾರ್ಥಿಗಳು  ಮೂಢನಂಬಿಕೆ ಕಿತ್ತೆಸೆಯಬೇಕು: ವೈಚಾರಿಕ ಚಿಂತಕ ವೆಂಕಟಯ್ಯ

ಲೋಕದರ್ಶನ ವರದಿ

ಬಳ್ಳಾರಿ 01: ವಿದ್ಯಾರ್ಥಿಗಳು  ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಮೂಢ ನಂಬಿಕೆ, ಮೂಢ ಸಂಪ್ರದಾಯಗಳು ಹಾಗೂ ಮೂಢ ಪದ್ಧತಿಗಳನ್ನು ವಿದ್ಯಾಥರ್ಿ ದೆಸೆಯಿಂದಲೇ ಕಿತ್ತೆಸೆಯಬೇಕು ಎಂದು ಹಿರಿಯ ವೈಚಾರಿಕ ಚಿಂತಕ ಡಾ.ವೆಂಕಟಯ್ಯ ಅಪ್ಪಗೆರೆ ಕರೆ ನೀಡಿದರು. 

ತಾಲ್ಲೂಕಿನ ಮೋಕಾ ಗ್ರಾಮದ ಹೊರವಲಯದಲ್ಲಿರುವ ಅಲೆಮಾರಿ ಬಿಡಾರದಲ್ಲಿ ಮೋಕಾದ ಸರ್ಕಾರಿ  ಪ್ರಥಮ ದರ್ಜೆ  ಕಾಲೇಜಿನ ಎನ್.ಎಸ್.ಎಸ್. ಘಟಕವು ಹಮ್ಮಿಕೊಂಡಿದ್ದ 2018-19ನೇ ಸಾಲಿನ ವಾರ್ಷಿಕ  ಶಿಬಿರದ 4ನೇ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ `` ಪವಾಡ ರಹಸ್ಯ ಬಯಲು'' ಎಂಬ ವಿಷಯವಾಗಿ ಮಾತನಾಡಿದರು.  

ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳು ನಿಜ ಜೀವನದಲ್ಲಿ ವೈಚಾರಿಕತೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಯಾವುದೇ ವಿಷಯಗಳನ್ನು ಪರಿಶೀಲನೆ ಮಾಡದೆ ಅವುಗಳನ್ನು ಒಪ್ಪಬಾರದು ಎಂದು ಹೇಳಿದರು. ವಿದ್ಯಾರ್ಥಿಗಳಿಗೆ  ಮೂರು ಪವಾಡಗಳನ್ನು ತೋರಿಸಿ ಕೊಟ್ಟರು ದಿವ್ಯ ಶಕ್ತಿ, ದಿವ್ಯಜ್ಞಾನ ದಿವ್ಯದೃಷ್ಟಿ, ಈ ಮೂರು ಪವಾಡಗಳನ್ನು ಮಾಡಿದಾಗ ವಿದ್ಯಾರ್ಥಿಗಳು  ಮತ್ತು ಶಿಕ್ಷಕರು ತುಂಬಾ ಕುತೂಹಲದಿಂದ ವೀಕ್ಷಿಸಿದರು. 

ದಿವ್ಯಶಕ್ತಿ: ಒಂದು ಚಂಬಿನಲ್ಲಿ ಅಕ್ಕಿಯನ್ನು ತೆಗೆದುಕೊಂಡು ಅದರಲ್ಲಿ ಚಾಕುನಿಂದ ಚುಚ್ಚಿದಾಗ ಚಾಕು ಅಕ್ಕಿಯಲ್ಲಿ ಚುಚ್ಚಿಕೊಳ್ಳುತ್ತದೆ. ನಾವು ಕೈಯನ್ನು ಬಿಟ್ಟರೂ ಕೂಡ ಚಂಬು ಕೆಳಗೆ ಬೀಳುವುದಿಲ್ಲ.

ದಿವ್ಯಜ್ಞಾನ: ಈ ಪವಾಡದಿಂದ ಅವರು ನಮಗೆ ಪ್ರಶ್ನೆ ಕೇಳುತ್ತಾರೆ. ಆ ಪ್ರಶ್ನೆಗೆ ನಾವು ಒಂದು ಹಾಳೆಯಲ್ಲಿ ಉತ್ತರ ಬರೆಯುತ್ತವೆ.  ಆ ಉತ್ತರವನ್ನು ಅವರು ನೋಡದೆ ಆ ಹಾಳೆಯಲ್ಲಿ ಬರೆದ ವಿಷಯವನ್ನು ಹೇಳುತ್ತಾರೆ. 

ದಿವ್ಯದೃಷ್ಟಿ: ದೃಷ್ಟಿಯಿಂದ ಬೆಂಕಿ  ಅತ್ತುವಂತೆ ಮಾಡಿದರು. ಪವಾಡಗಳ ಬಗ್ಗೆ ಹೇಳಿಕೊಟ್ಟರು. ವಿದ್ಯಾಥರ್ಿಗಳಾದ ನಾವು ಈ ರೀತಿಯ ಮೂಢನಂಬಿಕೆಗಳನ್ನು ನಂಬಬಾರದು. ವಿಜ್ಞಾನವನ್ನು ವೈಚಾರಿಕತೆಯನ್ನು ಯಾವ ರೀತಿ ಬೆಳೆಸಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಟ್ಟರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಹೊನ್ನೂರಾಲಿ ವಹಿಸಿದ್ದರು. ಲಲಿತಮ್ಮ ನಿರೂಪಿಸಿದರು. ವಿದ್ಯಾಥರ್ಿಗಳು ಪ್ರಾಥರ್ಿಸಿ, ಸ್ವಾಗತಿಸಿದರು. ಕೊನೆಯಲ್ಲಿ  ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು ಎಂದು ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ.ಹೆಚ್.ಮಲ್ಲಿಕಾರ್ಜುನ ತಿಳಿಸಿದ್ದಾರೆ. 


ಸುದ್ದಿ ಓದಿ