ಬಳ್ಳಾರಿ: ಕಾಲುವೆಗೆ ನೀರು ಹರಿಸಲು ಜಿಲ್ಲಾಧಿಕಾರಿಗಳಿಗೆ ಮನವಿ
ಬಳ್ಳಾರಿ 16: ತುಂಗಭದ್ರ ಜಲಾಶಯದಿಂದ ಎಲ್.ಎಲ್.ಸಿ ಕಾಲುವೆಗೆ ಏ.10ರವರೆಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಶುಕ್ರವಾರ ತುಂಗಭದ್ರ ರೈತಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪ್ರಸ್ತುತ ಜಲಾಶಯದಲ್ಲಿ 10 ಟಿಎಂಸಿ ನೀರು ಇದೆ. ಹಿಂದಿನ ವರ್ಷಕ್ಕಿಂತಲೂ ಈ ವರ್ಷ 4 ಟಿಎಂಸಿ ಅಷ್ಟು ನೀರು ಹೆಚ್ಚಿದೆ.
ಪ್ರತೀ ದಿನ ಎಲ್.ಎಲ್.ಸಿ, ಎಲ್.ಬಿ.ಸಿ ಹಾಗೂ ರಾಯಬಸವ ಮತ್ತು ವಿಜಯನಗರದ ನಾಲೆಗಳಿಗೆ ಕುಡಿಯಲು ಮತ್ತು ಬೆಳೆಗಳಿಗೆ ಪ್ರತಿದಿನ ಎರಡು ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ. ನವೆಂಬರ್ ತಿಂಗಳಲ್ಲಿ ತುಂಗಭದ್ರ ಜಲಾಶಯದಲ್ಲಿ ನಡೆದ ಸಲಹಾ ಸಮಿತಿ ಸಭೆಯಲ್ಲಿ ಎಲ್.ಎಲ್.ಸಿ ಕಾಲುವೆಗೆ ಮಾ.30ರವರೆಗೆ ಕರ್ನಾಟಕ ಮತ್ತು ಆಂಧ್ರ ನೀರು ಜಂಟಿಯಾಗಿ ಪ್ರತಿದಿನಕ್ಕೆ ಹನ್ನೆರಡು ನೂರು ಕ್ಯೂಸೆಕ್ಸ್ ಬಿಡಲು ಒಪ್ಪಿಗೆ ಸೂಚಿಸಿದೆ. ಆದರೆ ಫೆಬ್ರವರಿ ತಿಂಗಳು ಚಳಿ ಹೆಚ್ಚಾದ ಕಾರಣ ಎಲ್.ಎಲ್.ಸಿ ಕಾಲುವೆ ವ್ಯಾಪ್ತಿಯಲ್ಲಿ ನಾಟಿ ಮಾಡಿರುವ ಸುಮಾರು 70ಸಾವಿರ ಎಕರೆ ಜಮೀನಿನಲ್ಲಿ ಬತ್ತದ ಬೆಳೆಗೆ ತೊಂದರೆಯಾಗುತ್ತಿದೆ.
ಈ ಹಿನ್ನಲೆಯಲ್ಲಿ ಮಾ.30 ರ ನಂತರ ನೀರು ಕಡಿತಗೊಳಿಸಿದೆ 70 ಸಾವಿರ ಎಕರೆ ಬತ್ತದ ಬೆಳೆ ನಾಶವಾಗುತ್ತದೆ. ಈ ಹಿನ್ನಲೆಯಲ್ಲಿ ಏ.10ರವರೆಗೆ ಎಲ್.ಎಲ್.ಸಿ ಕಾಲುವೆಗೆ ನೀರು ಹರಿಸಬೇಕು. ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಪತ್ರದಲ್ಲಿ ಒತ್ತಾಯಿಸಿದ್ದಾರೆ. ಎಲ್.ಎಲ್.ಸಿ ವ್ಯಾಪ್ತಿಯ ಬತ್ತ ಬೆಳೆದ ರೈತರ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಕೂಡಲೇ ತುಂಗಭದ್ರ ಜಲಾಶಯ ಹಾಗೂ ತುಂಗಭದ್ರ ಅಧಿಕಾರಿಗಳ ಸಭೆ ಕರೆದು ಏ.10ರವರೆಗೆ ಕಾಲುವೆಗೆ ನೀರು ಹರಿಸಲು ಸೂಚಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತುಂಗಭದ್ರ ರೈತಸಂಘದ ಜಿಲ್ಲಾಧ್ಯಕ್ಷ ಪುರುಷೋತ್ತಮಗೌಡ ದರೂರು, ಪ್ರಧಾನ ಕಾರ್ಯದಶರ್ಿ ಗಂಗಾವತಿ ವೀರೇಶ್, ಉಪಾಧ್ಯಕ್ಷ ಎಂ.ಬಸವನಗೌಡ, ಕರೂರು ರಾಮನಗೌಡ, ಮುಷ್ಟಿಗಟ್ಟಿ ಭೀಮನಗೌಡ, ಕೊಂಚಗೇರಿ ಮಲ್ಲಪ್ಪ, ಜಾಳಿಹಾಳ ಶ್ರೀದರ್ ಗೌಡ, ಎಸ್.ಶರಣಪ್ಪ, ಹರಿಪ್ರಸಾದ, ಎಂ ಶಂಕರಗೌಡ, ಕೃಷ್ಣಂ ರಾಜು, ಹೊನ್ನುರುಸ್ವಾಮಿ, ಮಂಜುನಾಥ, ಪಂಪಾಪತಿ, ಗೋವಿಂದಪ್ಪ, ತಿಮ್ಮಪ್ಪ, ಸತ್ಯನಾರಾಯಣ, ಕಂಪ್ಲಿಯ ಚಂದ್ರಕಾಂತರೆಡ್ಡಿ ಸೇರಿದಂತೆ ನೂರಾರು ರೂತರು ಉಪಸ್ಥಿತರಿದ್ದರು.