ಬಳ್ಳಾರಿ: ಕೇವಲ ಪಠ್ಯ ಓದಿನಿಂದ ಅಭಿವೃದ್ಧಿ ಸಲ್ಲದು: ವಿದ್ಯಾರ್ಥಿಗಳಿಗೆ ಬಸವರಾಜ್ ಹೇಳಿಕೆ
ಲೋಕದರ್ಶನ ವರದಿ
ಬಳ್ಳಾರಿ 15: ವಿದ್ಯಾರ್ಥಿ ಧ್ವನಿ ಹೇಗಿರಬೇಕೆಂದರೆ ಈ ದೇಶದ ಸಂವಿಧಾನಕ್ಕೆ ತಕ್ಕಂತೆ ಇರಬೇಕು ಎಂದು ಕಾಲೇಜಿನ ನಿವೃತ್ತ ಉಪನ್ಯಾಸಕ ಎನ್ ಬಸವರಾಜ್ ಹೇಳಿದರು. ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಪ್ರಥಮ ವರ್ಷದ ಹೆಚ್.ಪಿ.ಇ ವಿದ್ಯಾಥರ್ಿಗಳಿಂದ ಆಯೋಜಿಸಲಾಗಿದ್ದ ವಿದ್ಯಾರ್ಥಿ ಧ್ವನಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ದೇಶದ ಸಂಸ್ಕೃತಿ, ಭಾಷೆ, ನೆಲ, ಎಲ್ಲರು ಸಾಮರಸ್ಯಕ್ಕೆ ತಕ್ಕಂತೆ ಇರಬೇಕು. ವಿದ್ಯಾಥರ್ಿಗಳು ಕೇವಲ ಪಠ್ಯದಿಂದ ಮಾತ್ರ ಜೀವನ ರೂಪಿಸಲು ಸಾಧ್ಯವಿಲ್ಲ ಮನೆಯ ಪೋಷಕರು, ಶಿಕ್ಷಕರು, ಸಮಾಜದಲ್ಲಿನ ವ್ಯಕ್ತಿಗಳೊಂದಿಗೆ ಬೆರೆತಾಗ ಮಾತ್ರ ಉತ್ತಮ ಜೀವನ ರೂಪಿಸಿಕೊಳ್ಳಬಹುದು, ರಾಷ್ಟ್ರದ ಗೌರವ ಘನತೆ ಗಳ ಕುರಿತು ವಿದ್ಯಾಥರ್ಿಗಳಿಗೆ ಉಪಯುಕ್ತವಾದ ಹಿತ ನುಡಿಗಳನ್ನು ತಿಳಿಸಿದರು.
ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯ ಅಭಿವೃದ್ಧಿ ಉಪನ್ಯಾಸಕ ಡಾ. ಹನುಮೇಶ್ ವೈದ್ಯ ಮಾತನಾಡಿ, ವ್ಯಕ್ತಿತ್ವ ವಿಕಸನವು ಹಲವಾರು ರೂಪುರೇಷಗಳನ್ನು ಹೊಂದಿದೆ, ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಅಬ್ದುಲ್ ಮುತಾಲಿಬ್ ಮಾತನಾಡಿ, ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ಜೊತೆಯಾಗಿದ್ದರೆ ಮಾತ್ರ ಏನಾದರೂ ಸಾಧಿಸಬಹುದು. ಮತದಾನದ ಜಾಗೃತಿ ಜನರಲ್ಲಿ ಮೂಡಿಸುವ ಮೂಲಕ ತಮ್ಮ ಉತ್ತಮ ನಾಯಕರನ್ನು ಆಯ್ಕೆ ಮಾಡಿಕೊಳ್ಳಬೇಕು, ವಿದ್ಯಾಥರ್ಿಗಳೆಲ್ಲರು ಸೇರಿ ಏನನ್ನಾದರೂ ಸಾಧಿಸಬೇಕೆಂದರೆ ಮೊದಲು ಒಗ್ಗಟ್ಟಿನಿಂದ ಕೂಡಿರುವುದು ಮೊದಲ ಹೆಜ್ಜೆಯಾಗಿದೆ ಎಂದು ವಿದ್ಯಾಥರ್ಿಗಳ ಮನ ಮುಟ್ಟುವಂತೆ ತಿಳಿಸಿದರು.
ಕಾಲೇಜಿನ ರಾಜ್ಯಶಾಸ್ತ್ರದ ಮುಖ್ಯಸ್ಥ ಡಾ. ಶ್ರೀನಿವಾಸ ಮೂತರ್ಿ ಪ್ರಾಸ್ತಾವಿಕ ಹಿತ ನುಡಿ ತಿಳಿಸಿದರು. ಉದ್ಘಾಟನಾ ಸಮಾರಂಭದಲ್ಲಿ ದೇವಣ್ಣ, ಜನಾರ್ಧನ ರೆಡ್ಡಿ, ಕಾವಲಯ್ಯ ಸಿ, ಕಲ್ಯಾಣ ಬಸವ, , ತಿಪ್ಪೇರುದ್ರ, ಶ್ರೀದೇವಿ, ಕಲಾವತಿ, ಸರೋಜ, ಶಾಂತಲಾ ಹಾಗೂ ವಿದ್ಯಾಥರ್ಿಗಳು ಇದ್ದರು.