ಬಳ್ಳಾರಿ: ಕೇಂದ್ರಕ್ಕೆ ಒಬ್ಬ ಅಭ್ಯರ್ಥಿ: ಮಹಾಘಟಬಂದನದಲ್ಲಿ 9 ಅಭ್ಯರ್ಥಿಗಳು
ಬಳ್ಳಾರಿ 13: ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಒಂದು ಸೀಟನ್ನು ಕಳೆದುಕೊಂಡಿದ್ದೇವೆ. ಅದಕ್ಕಾಗಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಬಲಪಡಿಸಿ ನೇರವಾಗಿ ಮತದಾರರ ಕಡೆ ಹೋಗಿ ಮತ ಪಡೆದು ಗೆದ್ದು ಮತ್ತೆ ಈ ಜಿಲ್ಲೆಯನ್ನು ರಾಜ್ಯದಲ್ಲಿ ಮಾದರಿ ಜಿಲ್ಲೆ ಎಂಬುವುದು ಸಾಬೀತು ಪಡೆಸುತ್ತೇವೆ ಎಂದು ತಿಳಿಸಿದರು.
ಈ ಕುರಿತು ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮಾಜಿ ಸಿ.ಎಂ ಜಗದೀಶ್ ಶೆಟ್ಟರ್ ಬಳ್ಳಾರಿ ಲೋಕಸಭಾ ಕ್ಷೇತ್ರ ಶ್ರೀರಾಮುಲು ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಇದ್ದಾರೆ. ಎಂದರು. ಅದೇ ರೀತಿ ರಾಜ್ಯದ ಮೈತ್ರರಿ ಸಕರ್ಾರದಲ್ಲಿ ಅಭ್ಯಾಥರ್ಿಗಳ ಆಯ್ಕೆಯ ಒಂದಾಣಿಕೆ ಕಗ್ಗಂಟು ಬಗೆಹರಿದಿಲ್ಲ. ಅಂತರ್ ಕಲಹ ಮುಂದುವರೆದಿದೆ. ಇನ್ನೊಂದು ಕಡೆ ಉತ್ತರ ಪ್ರದೇಶದಲ್ಲಿ ಮಾಯಾವತಿ ಮತ್ತು ಅಖಿಲೇಶ ಅವರ ಮೈತ್ರಿ ಕಾಂಗ್ರೆಸ್ ಜೊತೆ ಒಂದಾಣಿಕೆ ಇಲ್ಲ ಎನ್ನುತ್ತಿದ್ದಾರೆ. ಮತ್ತೊಂದು ಗಮನಿಸಿದರೆ ಮಮತಾ ಬ್ಯಾನಜರ್ಿ ಅವರು ಇನ್ನೊಂದು ತೀರ ಎಂಬುವುದು ಕಂಡು ಬರುತ್ತಿದೆ. ಒಟ್ಟಾರೆ ಹೇಳುವುದಾದರೇ ಲೋಕಸಭಾ ಚುನಾವಣೆಯ ನಂತರ ಕುಮಾರಸ್ವಾಮಿ ಮೈತ್ರಿ ಮುರಿಯುತ್ತಾರೆಂದು ಹೇಳಿ ಗಮನ ಸೆಳೆದರು. ಈ ಪತ್ರಿಕಾಗೋಷ್ಟಿಯಲ್ಲಿ ಸೋಮಲಿಂಗಪ್ಪ, ಕೂಗ್ಲಿಗೆ ಶಾಸಕ ಎನ್.ವೈ.ಗೋಪಾಲಕೃಷ್ಣ, ಬಳ್ಳಾರಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಸೋಮಶೇಖರರೆಡ್ಡಿ, ಮೃತ್ಯುಂಜಯ ಜಿನಿಗಾ, ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು.