ಬಳ್ಳಾರಿ

ಬಳ್ಳಾರಿ ; ಹಂಡಿ ಜೋಗಿ ಸಮುದಾಯದ ಏಳ್ಗೆಗಾಗಿ ಸಹಕರಿಸಿ

ಬಳ್ಳಾರಿ ; ಹಂಡಿ ಜೋಗಿ ಸಮುದಾಯದ ಏಳ್ಗೆಗಾಗಿ ಸಹಕರಿಸಿ

ಲೋಕದರ್ಶನ ವರದಿ

ಬಳ್ಳಾರಿ  21: ಇಂದಿನ ದಿನಮಾನಗಳಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಹಾಗೂ ಇನ್ನಿತ್ತರ ಕ್ಷೇತ್ರದಲ್ಲಿ ಹಿಂದುಳಿದಿದ್ದು, ಹಂಡಿಜೋಗಿ ಸಮಾಜವನ್ನುಸರ್ಕಾರ ಗುರುತಿಸಿ ಅಭಿವೃದ್ದಿ/ಏಳ್ಗೆಯ ಪಥದತ್ತ ಕೊಂಡ್ಯೊಯಲು ಸಹಕರ ನೀಡಬೇಕು ಎಂದು ನೂಂಕೇ ಮಲೇಲೋಕಿ ಮಠದ 113ನೇ ಪೀಠಾಧ್ಯಕ್ಷ ಮಂಗಲ್ನಾಥ ಗುರುಜೀ ಹೇಳಿದರು.

      ಸಂಡೂರಿನ ವಡ್ಡು ಗ್ರಾಮದಲ್ಲಿ ಸೋಮವಾರದಂದು(ಮೇ 20) ವಡ್ಡು ಪಾಳ್ಯದ ನಾಥ ಪಂಥ ಗುರುಜೀ ಹಾಗೂ ಜಿಲ್ಲಾ ಹಂಡಿಜೋಗಿ ಸಮಾಜ ಸುಧಾರಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಯಿಕ ದೀಕ್ಷೆ ಹಾಗೂ ಉಪನಯನ(ಕಾಂಚೇರ್) ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

      ಈ ಸಂಘವು ರಾಜ್ಯದಲ್ಲಿರುವ ಹಂಡಿಜೋಗಿ ಸಮುದಾಯವನ್ನು ಸಂಘಟಿಸಿ ಮುಖ್ಯ ವೇದಿಕೆಗೆ ತರುವಲ್ಲಿ ಸಹಕರಿಸಬೇಕು ಎಂದರು. ವಡ್ಡು ಪಾಳ್ಯ ಮತ್ತು ಮಸ್ಕಿ ಪಾಳ್ಯವು ಸಮಾಜದ ಹಿರಿ-ಕಿರಿಯರು ಬಾಳಿ ಬದುಕುವಲ್ಲಿ ಮುಖ್ಯ ಸ್ಥಳಗಳು ಎಂದು ಗುರುತಿಸಿಕೊಂಡಿರುವುದು ವಾಡಿಕೆ. ಇಂದಿಗೂ ಈ ಸ್ಥಳಗಳು ನಮಗೆ ಪವಿತ್ರ ಸ್ಥಳಗಳಾಗಿ ವಿಶೇಷವಾಗಿ ಗುರುತಿಸಿಕೊಂಡಿವೆ. ಪ್ರತಿ ಐದು ವರ್ಷಕೊಮ್ಮೆ ಸಮುದಾಯದ ಗುರುಗಳ ಆಶರ್ೀವಾದದೊಂದಿಗೆ ಸಮಾಜದಲ್ಲಿನ ಕಡು-ಬಡವರಿಗಾಗಿ ಉಚಿತ ಕಾಂಚೇರ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ ಎಂದು ಸಮಾಜದ ಮುಖಂಡ ಜೆ.ರಾಣಪ್ಪ ಪ್ರಭುಳ್ಕರ್ ತಿಳಿಸಿದರು. 

     ಬೆಳಗ್ಗೆ 6ಕ್ಕೆ ಗಂಗೆಪೂಜೆ ನಂತರ ನೂತನ ಸಂಘದ ಜಿಲ್ಲಾ ಘಟಕವನ್ನು ಉದ್ಘಾಟಿಸಿ, ರಾಜ್ಯದ ವಿವಿಧ ಜಿಲ್ಲಾ-ರಾಜ್ಯಗಳಿಂದ ಆಗಮಿಸಿದ್ದ 60 ಭಕ್ತರಿಗೆ(ಜನರು) ಸಾಮೂಹಿಕ ಉಪನಯನವನ್ನು ನೀಡಿದರು.

   ಈ ಸಂದರ್ಭದಲ್ಲಿ ಕನ್ನಡ ವಿ.ವಿ. ಹಂಪಿ, ಬುಡಕಟ್ಟು ಅಧ್ಯಾಯನ ವಿಭಾಗದ ಪ್ರೋ.ಕೆ.ಎಂ.ಮೈತ್ರಿ, ಸಂಘದ ಜಿಲ್ಲಾಧ್ಯಕ್ಷ ರಮೇಶ್, ಉಪಾಧ್ಯಕ್ಷ ಕಾತರ್ಿಕ್, ಕಾರ್ಯದಶರ್ಿ ಅಯ್ಯಪ್ಪ ಸ್ವಾಮಿ, ಮುಖಂಡರುಗಳಾದ ಎರ್ರಿಸ್ವಾಮಿ, ಮೈಲಾರಿ, ರಾಮಾಂಜೀನಿ, ಜೆ.ರವಿ, ಈಶ್ವರ್, ಹಂಡಿ ಜೋಗಿ ದುರುಗಪ್ಪ ವಡ್ಡು ಪ್ರಭುಳ್ಕರ್ ಪಾಟೀಲ್ ಹಾಗೂ ಇತರರು ಇದ್ದರು.


ಸುದ್ದಿ ಓದಿ