ಕೇಂದ್ರ ಸಕರ್ಾರದ ಕಾಮರ್ಿಕ ವಿರೋಧಿ ನೀತಿಗೆ ಬ್ಯಾಂಕ್ ನೌಕರರಿಂದ ಮುಷ್ಕರ
ಬಳ್ಳಾರಿ 09:ಕೇಂದ್ರ ಸಕರ್ಾರದ ಕಾಮರ್ಿಕ ವಿರೋಧಿ ನೀತಿಗಳ ವಿರುದ್ಧ ಹಮ್ಮಿಕೊಳ್ಳಲಾದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಮಂಗಳವಾರ ಬೆಳಿಗ್ಗೆ ಕೆನರಾ ಬ್ಯಾಂಕಿನ ಪ್ರಧಾನ ಕಛೇರಿಯ ಮುಂದೆ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಮತ್ತು ಬ್ಯಾಂಕ್ ಎಂಪ್ಲಾಯಿಸ್ ಫೆಡರೇಷನ್ ಆಫ್ ಇಂಡಿಯಾ ಸಂಘಗಳು ಜಂಟಿಯಾಗಿ ಈ ಮುಷ್ಕರದಲ್ಲಿ ಪಾಲ್ಗೊಂಡು ಪ್ರತಿಭಟಿಸಿದರು. ಬ್ಯಾಂಕ್ ನೌಕರರ ನೇಮಕಾತಿ ಕೋರಿ, ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳಬಾರದೆಂದು, ಬ್ಯಾಂಕುಗಳ ವಿಲಿನೀಕರಣ, ಕೇಂದ್ರ ಹೊಸ ನಿವೃತ್ತಿ ಪಿಂಚಿಣಿ ನೀತಿಯನ್ನು ವಿರೋಧಿಸಿ, ಅನುತ್ಪಾದಕ ಆಸ್ತಿಗಳ ವಸೂಲಾತಿಗಾಗಿ ಕೋರುತ್ತಾ ಕೇಂದ್ರ ಕಾಮರ್ಿಕ ಸಂಘಟನೆಗಳ ಜಂಟಿ ಸಮಿತಿ ಕರೆ ಕೊಟ್ಟ ಈ ಮುಷ್ಕರವನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಮುಷ್ಕರದಲ್ಲಿ ಬಳ್ಳಾರಿ ಬ್ಯಾಂಕ್ ನೌಕರರಾದ ಜಂಟಿ ಕಾರ್ಯದಶರ್ಿ ಕೆ.ರವಿಕುಮಾರ್, ಶಿವಣ್ಣ, ಶಿವರಾಜ್, ಪ್ರೇಮನಾಥ್, ಮಂಜುಳಾ .ಎಫ್, ಬಿಇಎಫ್ಐನ ಕೆ.ಎಂ.ವೇಣುಗೋಪಾಲಶೆಟ್ಟಿ, ಆರ್.ಘನಮಲ್ಲಿ, ಕೆ.ಈರಣ್ಣ, ರಂಗಣ್ಣ, ನಿವೃತ್ತಿ ನೌಕರರಾದ ಜೆ.ಜಕ್ರಿಯಾ, ಹಂಪಯ್ಯ, ಶಶಿಕಾಂತ್ರಾವ್, ಭಾಷಾಸಾಬ್, ತಿಪ್ಪೇಸ್ವಾಮಿ ಸೇರಿದಂತೆ ಹಲವಾರು ಬ್ಯಾಂಕ್ ಸಿಬ್ಬಂದಿ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಘೋಷಣೆಗಳನ್ನು ಕೂಗಿದರು.