ಬಕ್ರೀದ್, ಗ್ರಾಮದೇವಿಯರ ಜಾತ್ರೆ: ಶಾಂತಿ ಸಭೆ
ಲೋಕದರ್ಶನ ವರದಿ
ಯರಗಟ್ಟಿ: ಬಕ್ರೀದ್ ಹಬ್ಬ ಆಚರಣೆ ಹಾಗೂ ಗ್ರಾಮದೇವಿಯರ ಜಾತ್ರಾ ಹಿನ್ನೆಲೆಯಲ್ಲಿ ಪಟ್ಟಣದ ಠಾಣೆಯಲ್ಲಿ ರವಿವಾರ ಸಂಜೆ ಶಾಂತಿ ಸಭೆ ನಡೆಸಿದರು.
ಶಾಂತಿ ಸಭೆಯಲ್ಲಿ ಮುಖಂಡರಿಂದ ಮಾಹಿತಿ ಪಡೆದ ನಂತರ ಮಾತನಾಡಿದ ಅಧ್ಯಕ್ಷತೆ ವಹಿಸಿದ್ದ ಇನ್ಸ್ ಪೆಕ್ಟರ್ ಮೌನೇಶ್ವರ ಮಾಲಿಪಾಟೀಲ ಅವರು, ಯಾವುದೇ ಸಮುದಾಯವಾಗಿರಲಿ ಹಬ್ಬಗಳ ಆಚರಣೆ ವೇಳೆ ಅನ್ಯ ಧರ್ಮದ ಬಗ್ಗೆ ತಾತ್ಸಾರ ಹಾಗೂ ಗ್ರಾಮದೇವಿಯರ ಜಾತ್ರೆಯಲ್ಲಿ ಯಾವುದೇ ರೀತಿಯ ಶಾಂತಿ ಕದಡುವ ಕೆಲಸ ಮಾಡದೆ. ಶಾಂತಿಯುತವಾಗಿ ಬಕ್ರೀದ್ ಹಾಗೂ ಜಾತ್ರೆ ಆಚರಿಸಿದಾಗ ಮಾತ್ರ ಸಹಭಾಳ್ವೆ ಸಾಧ್ಯ. ಹೀಗಾಗಿ ಶಾಂತಿ ಭಂಗ ತರುವ ಯಾವುದೇ ಹೇಳಿಕೆಗಳು, ಜಾತ್ರೆಯಲ್ಲಿ ಹೆಣ್ಣು ಮಕ್ಕಳಿಗೆ, ಮಹಿಳೆಯರಿಗೆ, ಭಂಡಾರ ಎರಚುವುದು ಮತ್ತು ಯುವಕರು ಬೈಕ್ ಸೌಂಡ್ ಮಾಡೋದು ಮಾಡಿ ಮತ್ತೊಬ್ಬರಿಗೆ ನೋವುಂಟು ಮಾಡುವುದು ಕಾನೂನಿನಲ್ಲಿ ಅಪರಾಧವಾಗಿದ್ದು, ಸಭೆಯಲ್ಲಿನ ಮುಖಂಡರು ಯುವಕರಿಗೆ ತಿಳಿ ಹೇಳಬೇಕೆಂದು ಮನವಿ ಮಾಡಿದರು. ಕಾನೂನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು.
ಇದರಿಂದ ಮುಂದೆ ಯುವಕರು ಉದ್ಯೋಗಕ್ಕೆ ಹೋಗುವ ವೇಳೆ ತೊಂದರೆಯಾಗಲಿದೆ. ಶಾಂತಿ ಭಂಗ ತರುವವರ ವಿರುದ್ದ ಪೊಲೀಸರು ಕಣ್ಗಾವಲಿಟ್ಟಿದ್ದು ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಪಿ. ಎಚ್. ಪಾಟೀಲ, ಎ. ಕೆ. ಜಮಾದಾರ, ಅಶೋಕ ಗಾಣಗಿ, ತಮ್ಮಣ್ಣಾ ಕಾಮಣ್ಣವರ, ಆನಂದ ಬಡಿಗೇರ, ಪೈಗಂಬರ ನದಾಫ, ಶಿವಾನಂದ ಕರಿಗೋಣ್ಣವರ, ಕಾಶೀಮಸಾಬ ಹೊರಟ್ಟಿ, ಕೆ. ಎಫ್. ನದಾಫ, ನಾರಾಯಣ ಪಾಟೀಲ, ಸಲಿಂಬೇಗ ಜಮಾದಾರ, ಗಿರೀಶ ಪಾಟೀಲ, ಸಂಜಯ ಕಲಾಲ, ಬಸವರಡ್ಡಿ ಗಣಿ, ರಫೀಕ ಡಿ ಕೆ, ಹುಸೇನಸಾಬ ಸನದಿ, ಗೋವಿಂದ ದೇವರಡ್ಡಿ, ಮೋಹನ ಹಾದಿಮನಿ, ಸದಾನಂದ ಹಣಬರ, ರಾಜೇಂದ್ರ ವಾಲಿ, ಇಮಾಮಸಾಬ ಹುಸೇನನಾಯ್ಕರ, ಸೋಮು ಮಾಳಗಿ, ಮಂಜುನಾಥ ತಡಸಲೂರ, ನಿಖಿಲ ಪಾಟೀಲ, ಹನುಮಂತ ಹಾರುಗೋಪ್ಪ, ರಾಮನಗೌಡ ಪಾಟೀಲ, ಬಸವರಾಜ ಗಂಗರಡ್ಡಿ, ಹನುಮಂತ ಜರಗು, ಪಿಎಸ್ಐ ಆಯ್ ಎಮ್ ಹಿರೇಗೌಡರ, ಎಎಸ್ಐ ವಾಯ್ ಎಂ ಕಡಕೋಳ, ಸಿಬ್ಬಂದಿಯಾದ ಎಂ. ಬಿ. ಸಣ್ಣನಾಯ್ಕ, ಎಸ್. ಬಿ. ದೊಡವಾಡ, ವಿಠ್ಠಲ ಮುರಗೋಡ, ಬಸವರಾಜ ಮಠದ, ಸಂತೋಷ ರಾಠೋಡ ಸೇರಿದಂತೆ ಅನೇಕ ಉಪಸ್ಥಿತರಿದ್ದರು