ಕಾರವಾರ

ಮರಳಿ ಸಿವಿಲ್ ಆಸ್ಪತ್ರೆಗೆ ಬಂದ ಕುಡ್ತಕಲಕರ್

ಮರಳಿ ಸಿವಿಲ್ ಆಸ್ಪತ್ರೆಗೆ ಬಂದ ಕುಡ್ತಕಲಕರ್

ಕಾರವಾರ 17: ಕಳೆದ ಸೆಪ್ಟಂಬರ್ 3 ರಂದು ಸಾವನ್ನಪ್ಪಿದ ಬಾಣಂತಿ ಗೀತಾ ಪ್ರಕರಣ ಮತ್ತೆ ಬುಗಿಲೆದ್ದಿದೆ. ಈ ಪ್ರಕಣದಲ್ಲಿ ಆರೋಪ ಹೊತ್ತಿದ್ದ ವೈದ್ಯ ಕೆಎಟಿ ಯಿಂದ ಸಕರ್ಾರದ ವಗರ್ಾವಣೆಗೆ ತಡೆಯಾಜ್ಞೆ ತಂದು ಕಾರವಾರ ಕ್ರಿಮ್ಸ ಅಧೀನ ಆಸ್ಪತ್ರೆಗೆ ಮರಳಿ ಕೆಲಸಕ್ಕೆ ಜಾಯಿನ್ ಆದದ್ದನ್ನು ಸಾರ್ವಜನಿಕರು ಗುರುವಾರ ಪ್ರಬಲವಾಗಿ ಪ್ರತಿಭಟಿಸಿ, ನಗರದಲ್ಲಿ ಮೆರವಣಿಗೆ ಮಾಡಿದರು. 

ಅಲ್ಲದೇ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ಮಾಡಿದರಲ್ಲದೇ ಸಕರ್ಾರಕ್ಕೆ ಬಾಣಂತಿ ಆಪರೇಶನ್ ವೇಳೆ ನಿರ್ಲಕ್ಷ್ಯ ವಹಿಸಿ ಆಕೆಯ ಸಾವಿಗೆ ಕಾರಣರಾದ ವೈದ್ಯರನ್ನು ಕಾರವಾರದಲ್ಲಿ ಕರ್ತವ್ಯಕ್ಕೆ ಅವಕಾಶ ನೀಡಬೇಡಿ ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿ ನೇಮಿಸಿದ ಸಮಿತಿಯ ನೇತೃತ್ವವನ್ನು ಐಎಎಸ್ ಅಧಿಕಾರಿ ವಹಿಸಿದ್ದರು. ಅವರು ತಜ್ಞ ವೈದ್ಯರಲ್ಲ. ಸ್ಥಳೀಯರೇ ಸಮಿತಿಯಲ್ಲಿ ಇದ್ದ ಕಾರಣ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ವರದಿ ನೀಡಿದ್ದಾರೆ. ಹಾಗಾಗಿ ಆ ವೈದ್ಯನನ್ನು ರಕ್ಷಿಸುವ ಕೆಲಸ ನಡೆದಿದೆ. ತಕ್ಷಣ ಆರೋಪಿ ವೈದ್ಯನನ್ನು ವಗರ್ಾವಣೆ ಮಾಡದಿದ್ದರೆ ಬೃಹತ್ ಸ್ವರೂಪದ ಹೋರಾಟ ರೂಪಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. 

ಲಿಖಿತ ಮನಿವಿ ಸ್ವೀಕರಿಸಿ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಮಾತನಾಡಿ, ಸಮಿತಿ ನೀಡಿದ ವರದಿಯನ್ನು ನಾವು ಅಂಗೀಕರಿಸಿಲ್ಲ. ವರದಿ ಸರಿಯಾಗಿದೆ ಎಂದು ಎಲ್ಲೂ ಹೇಳಿಲ್ಲ. ಕೆಎಟಿಯಿಂದ ಸಕರ್ಾರಿ ಆದೇಶಕ್ಕೆ ಸಂಬಂಧಿತ ವೈದ್ಯರು ತಡೆಯಾಜ್ಞೆ  ತಂದಿದ್ದಾರೆ. ಸಮಿತಿ ವರದಿಗೂ, ಅವರ ಮರು ಸ್ಥಳ ನಿಯುಕ್ತಿಗೂ ಸಂಬಂಧವಿಲ್ಲ. ಗೀತಾ ಬಾನಾವಳಿ ಸಾವಿರ ಮರಣೋತ್ತರ ವರದಿ ಇನ್ನೂ ಬಂದಿಲ್ಲ ಎಂದರು. ಮರೋತ್ತರ ವರದಿಯಲ್ಲಿ ಏನಿದೆ ಎಂಬುದು ಸಕರ್ಾರ ಮತ್ತು ವೈದ್ಯಕೀಯ ಇಲಾಖೆ ಪರಿಶೀಲಿಸಿ, ಇಲಾಖೆ ತನಿಖೆ ನಡೆಸಬಹುದು ಎಂದರು. 

ಪ್ರತಿಭಟನಾಕಾರರ ಬೇಡಿಕೆಯನ್ನು ಸಕರ್ಾರಕ್ಕೆ ಕಳುಹಿಸಲಾಗುವುದು. ಸಕರ್ಾರದ ನಿಧರ್ಾರದ ಮೇಲೆ ಕ್ರಮ ಆಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಜಿಲ್ಲಾಧಿಕಾರಿ ಬಳಿ ಪ್ರತಿಭಟನಾಕಾರರ ಮುಖಂಡರಾದ ರಾಘು ನಾಯ್ಕ,  ವಿನಾಯಕ ಹರಿಕಂತ್ರ, ನಗರಸಭಾ ಸದಸ್ಯೆ ರೇಶ್ಮಾ ಮಾಳ್ಸೆಕರ್, ಶಿಲ್ಪಾ ನಾಯ್ಕ ವಿವಾದಿತ ವೈದ್ಯನ ಪುನರಾಗಮನವನ್ನು ಕುರಿತು ಚಚರ್ಿಸುವಾಗ ಆಗಮಿಸಿದ ಶಾಸಕಿ ರೂಪಾಲಿ ನಾಯ್ಕ ಪ್ರತಿಭಟಕಾರರಿಗೆ ಬೆಂಬಲ ಘೋಷಿಸಿದರು. ಆರೋಪ ಹೊತ್ತ ವೈದ್ಯ ಮರಳಿ ಬಂದದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಅವರು ಕ್ರಿಮ್ಸ ಚಿನ್ನದ ಮೊಟ್ಟೆ ಇಡುವ ಕೋಳಿ ಎಂದು ವಿವಾದಿತ ವೈದ್ಯನಿಗೆ ಗೊತ್ತಾಗಿದೆ. ಮುಖ್ಯಮಂತ್ರಿ ಈ ವಿವಾದ ಗಮನಿಸಿದ್ದಾರೆ.  

ವಿವಾದಿತ ವೈದ್ಯ ಕಾರವಾರದಲ್ಲಿ ಮುಂದುವರಿದರೆ ಸಕರ್ಾರದ ವಿರುದ್ಧ ಸ್ವತಃ ಪ್ರತಿಭಟನೆಗೆ ಇಳಿಯುವುದಾಗಿ ಎಚ್ಚರಿಸಿದರು. ಸಾರ್ವಜನಿಕರ ಭಾವನೆಗಳನ್ನು ಸಕರ್ಾರಕ್ಕೆ ತಿಳಿಸುವಂತೆ  ಅವರು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಅವರಿಗೆ ಸೂಚಿಸಿದರು.  

ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿಯಲ್ಲಿ  ಸಾರ್ವಜನಿಕರಾದ ಗಣಪತಿ ಬಾನಾವಳಿಕರ್, ಗಣೇಶ್, ಕಿಶೋರ್,ಉಲ್ಲಾಸ್,  ಶಿವನಾಥ ಬಾನಾವಳಿಕರ್ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿದ್ದರು.  ಪೊಲೀಸರು ಬಿಗಿ ಬಂದೋಬಸ್ತ ಏರ್ಪಡಿಸಿದ್ದರು. 

 

ಸುದ್ದಿ ಓದಿ