ಅಯ್ಯಪ್ಪ ಸ್ವಾಮಿ ಮಹಾಪೂಜೆ ಅನ್ನಸಂತರ್ಪಣೆ
ಯರಗಟ್ಟಿ: ನಮ್ಮ ದೇಶ ಭಕ್ತಿ ಮತ್ತು ಶಕ್ತಿ ತಮ್ಮದೆಯಾದ ಇತಿಹಾದ ಹೊಂದಿದೆ. ಆ ದೇವರಲ್ಲಿ ಭಕ್ತರು ಅಪೇಕ್ಷ ಪಡದೇ ಆತನ ಭಕ್ತಿಯಲ್ಲಿ ಬಿದ್ದರೆ, ಆ ದೇವರು ಭಕ್ತ ಯಾವುನೇ ಇರಲಿ ಆತನಿಗೆ ತನ್ನದೆಯಾದ ಶಕ್ತಿಯನ್ನು ನೀಡುತ್ತಾನೆ. ಅಂತಹ ಭಕ್ತರ ಭಕ್ತಿ, ಶವರಿಮಲೈ ಅಯ್ಯಪ್ಪ ಸ್ವಾಮಿಯ ಶಕ್ತಿ ಸಾಕ್ಷಾತ್ ಕಂಡಬಂದಿದ್ದು, ಯರಗಟ್ಟಿ ಪಟ್ಟಣದಲ್ಲಿ ಎಲ್ಲಿ ನೋಡಿದ್ರೂ ಅಯ್ಯಪ್ಪ ಮಾಲಾಧಾರಿಗಳು, ಇದರ ನೇತೃತ್ವ ವಹಿಸಿದ್ದು ಮಹಾಂತ ದುರದುಂಡೀಶ್ವರ ಶ್ರೀಮಠದಲ್ಲಿ ಅಯ್ಯಪ್ಪ ಸ್ವಾಮಿಯ ಮಹಾ ಪಡಿಪೂಜೆ ಕಾರ್ಯಕ್ರಮಕ್ಕೆ ಭಕ್ತಗಣವೇ ಸಾಕ್ಷಿಯಾಯಿತು.ಶಬರಿಮಲೆಯ ಅಯ್ಯಪ್ಪ ಸ್ವಾಮಿಗೆ ದೇಶದ ಮೂಲೆಯಿಂದ ಭಕ್ತರು ಹೋಗಿ ಸಂಕ್ರಾಂತಿ ದಿನದಂದು ದಿವ್ಯಜ್ಯೋತಿಯ ದರ್ಶನ ಪಡೆಯುತ್ತಾರೆ. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಮಾಜ ಸೇವಕ ಯುವ ಧುರೀಣ ಸಂಜೀವಕುಮಾರ ನವಲಗುಂದ ಗುರುಸ್ವಾಮಿಗಳ ನೇತೃತ್ವದಲ್ಲಿ ಸುಮಾರು 48 ದಿನಗಳ ಕಾಲ ಕಠಿಣ ವೃತ ಕೈಗೊಳ್ಳಲಾಗುತ್ತಾರೆ. ಇಂತಹ ವೃತ ಚಳಿ, ಗಾಳಿ, ಮೇಳೆ ಲೇಕ್ಕಿಸದೆ ಅಯ್ಯಪ್ಪ ಸ್ವಾಮಿ ಮಾಲಾದಾರಿಗಳು ವೃತ ಪಾಲಿಸುತ್ತಾ ಎಂದು ಹೇಳಿದರು.
ಜೊತೆಗೆ ಸುಮಾರು 25 ಜನ ಗುರುಸ್ವಾಮಿಗಳು ವೇದಿಕೆಯಲ್ಲಿ ಆಸೀನರಾಗಿದ್ದರು. ಈ ಐತಿಹಾಸಿಕ ಕಾರ್ಯಕ್ರಮವೂ ಬಹಳ ವಿಶಿಷ್ಟ ಮತ್ತು ವೈಭವ ನಡೆದಿದ್ದು, ಜಿಲ್ಲೆಯ, ಹಾಗೂ ತಾಲೂಕಿನ ಗುರುಸ್ವಾಮಿಗಳ ಹಾಗೂ ಮಾಲಾದಾರಿಗಳು ಆಗಮಿಸಿದ್ದರು. ಅಯ್ಯಪ್ಪ ಸ್ವಾಮಿಯ ಪ್ರೀಯವಾದ 18 ಮೆಟ್ಟಿಲುಗಳನ್ನ ಸ್ಥಾಪಿಸಲಾಗಿತ್ತು. ಆ 18 ಮೆಟ್ಟಿಲುಗಳಿಗೆ ಹೂವಿನಿಂದ ವಿಶೇಷ ಅಲಂಕಾರ ಹಾಗೂ ಮೆಟ್ಟಿಲುಗಳ ಮೇಲೆ ದೀಪಗಳನ್ನು ಪ್ರಜ್ವಲಿಸುವಂತೆ ಮಾಡಲಾಗಿತ್ತು. ಈ ಗುರುಸ್ವಾಮಿಗಳಾದ ಸಾಲಹಳ್ಳಿ ರುದ್ರಗೌಡ ಗುರುಸ್ವಾಮಿ, ಕಟಕೋಳ ಈರಣ್ಣಾ ಗುರುಸ್ವಾಮಿ, ಸತ್ತಿಗೇರಿ ಈರಣ್ಣಾ ಗುರುಸ್ವಾಮಿ, ಚಂದರಗಿ ಬಸವರಾಜ ಗುರುಸ್ವಾಮಿ ಪೂಜೆ-ಕೈಂಕರ್ಯಗಳನ್ನು ಕೈಗೊಂಡರು. ಈ ಸಂದರ್ಭದಲ್ಲಿ ಅಶೋಕ ಗುರುಸ್ವಾಮಿ, ಅಪ್ಪೇಶ ಗುರುಸ್ವಾಮಿ, ಕಾಂತೇಶ ಗುರುಸ್ವಾಮಿ, ವಿಜಯ ಗುರುಸ್ವಾಮಿ, ಮಂಜು ಗುರುಸ್ವಾಮಿ, ರಮೇಶ ಗುರುಸ್ವಾಮಿ ಸೇರಿದಂತೆ ಆಲದಕಟ್ಟಿ, ಜೀವಾಪೂರ, ಗೊಡಚಿ, ಚಿಲಮೂರ, ಸೋಪ್ಪಡ್ಲ, ಯರಝವರ್ಿ, ಕೋಡ್ಲಿವಾಡ ಸೇರಿದಂತೆ ಅನೇಕ ಗ್ರಾಮಗ ಅಯ್ಯಪ್ಪ ಸ್ವಾಮಿ ಮಾಲಾದಾರಿಗಳು ಹಾಗೂ ಯರಗಟ್ಟಿ ಪಟ್ಟಣದ ಸಮಸ್ತ ಗುರು ಹಿರಿಯರು ಭಕ್ತರು ಉಪಸ್ಥಿತರಿದ್ದರು