ಯರಗಟ್ಟಿ

ಅಯ್ಯಪ್ಪನ ದರ್ಶನದಿಂದ ಜನ್ಮ ಪಾವನ

ಅಯ್ಯಪ್ಪನ ದರ್ಶನದಿಂದ ಜನ್ಮ ಪಾವನ

ಯರಗಟ್ಟಿ: ಸಮೀಪದ ಕೋ.ಶಿವಾಪೂರ ಗ್ರಾಮದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾದಾರಿಗಳಿಂದ  ಮಹಾಪೂಜೆ ಅನ್ನಸಂತರೆ​‍್ಣ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮ ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಯ್ಯಪ್ಪ ಸ್ವಾಮಿ ಪಲ್ಲಕ್ಕಿ ಉತ್ಸವ ಸಕಲ ವಾದ್ಯ ವೃಂದ ಹಾಗೂ ಮಾಲಾಧಾರಿಗಳಿಂದ  ಅಯ್ಯಪ್ಪ ಸ್ವಾಮಿಯ ಮಹಾರುದ್ರಾಭಿಷೇಕ ಅನ್ನಸಂತರೆ​‍್ಣ ಜರುಗಿತು. ಈ ಸಂದರ್ಭದಲ್ಲಿ ಶಂಕರ ಗುರುಸ್ವಾಮಿ ಶಿವಾಪೂರ, ಮಂಜು ಗುರುಸ್ವಾಮಿ ಗೋಕಾಕ, ಸಿದ್ದಪ್ಪ ಗುರುಸ್ವಾಮಿ ಕಡಬಿ, ಈರಣ್ಣಾ ಗುರುಸ್ವಾಮಿ ಯರಗಟ್ಟಿ, ರಾಮಚಂದ್ರ ಗುರುಸ್ವಾಮಿ ಗೊರಗುದ್ದಿ, ಮಹಾದೇವ ಗುರುಸ್ವಾಮಿ ಫಾಲ್ಸ್‌, ರಮೇಶ ಗುರುಸ್ವಾಮಿ ಅಜ್ಜನಕಟ್ಟಿ ಸೇರಿದಂತೆ ಅನೇಕ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಹಾಗೂ ಗ್ರಾಮದ ಸಮಸ್ತ ಸದ್ಭಕ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ