ಉದ್ದಿಮೆಗಳ ಮಾಲೀಕರಿಗೆ ಜಾಗೃತಿ ಕಾಯರ್ಾಗಾರ ಬಾಲಕಾಮರ್ಿಕತೆ ಮತ್ತು ಬಾಲ್ಯವಿವಾಹ ನಿಮರ್ೂಲನೆಗೆ ಶಿಕ್ಷಣವೇ ಮದ್ದು: ನ್ಯಾ. ಹಂದ್ರಾಳ್

ಉದ್ದಿಮೆಗಳ ಮಾಲೀಕರಿಗೆ ಜಾಗೃತಿ ಕಾಯರ್ಾಗಾರ  ಬಾಲಕಾಮರ್ಿಕತೆ ಮತ್ತು ಬಾಲ್ಯವಿವಾಹ ನಿಮರ್ೂಲನೆಗೆ ಶಿಕ್ಷಣವೇ ಮದ್ದು: ನ್ಯಾ. ಹಂದ್ರಾಳ್

ಬಳ್ಳಾರಿ17: ಬಾಲಕಾಮರ್ಿಕ ಮತ್ತು ಬಾಲ್ಯಾ ವಿವಾಹ ಪದ್ದತಿಗಳು ಸಮಾಜದ ಮೇಲೆ ಭೀಕರ ಪರಿಣಾಮ ಉಂಟುಮಾಡುತ್ತಿದ್ದು, ಇವುಗಳ ನಿಮರ್ೂಲನೆಗೆ ಎಲ್ಲರ ಸಹಕಾರದ ಜತೆಗೆ ಶಿಕ್ಷಣವೇ ಮದ್ದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಮತ್ತು ಹಿರಿಯ ಸಿವಿಲ್ ನ್ಯಾ.ಎಸ್.ಬಿ.ಹಂದ್ರಾಳ್ ಅವರು ಹೇಳಿದರು.

       ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಾನಗರ ಪಾಲಿಕೆ, ಅಬಕಾರಿ ಇಲಾಖೆ, ಚೈಲ್ಡ್ ಲೈನ್ ನೋಡಲ್ ಆರ್ಗನೈಜೇಷನ್ ಕಾಡರ್್ ಸಂಸ್ಥೆ, ಚೈಲ್ಡ್ ಲೈನ್ ಸಹಯೋಗ ಸಂಸ್ಥೆ, ಅಂಗಡಿ ಮತ್ತು ಹೋಟೆಲ್ ಉದ್ದಿಮೆ ಮಾಲೀಕರ ಸಂಘ ಇವರ ಕಾಮರ್ಿಕ ಇಲಾಖೆ ಮತ್ತು ರಾಷ್ಟ್ರೀಯ ಬಾಲಕಾಮರ್ಿಕ ಯೋಜನೆ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ಚೈಲ್ಡ್ ಲೈನ್ ಸೆ ದೋಸ್ತಿ ಕಾರ್ಯಕ್ರಮದ ಅಂಗವಾಗಿ ಬಾಲ್ಯಾವಸ್ಥೆ ಹಾಗೂ ಕಿಶೋರ ಕಾಮರ್ಿಕ ರಕ್ಷಣೆ ಕುರಿತು ನಗರದ ಉದ್ದಿಮೆಗಳ ಮಾಲೀಕರಿಗೆ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಾಗೃತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

              ಬಾಲಕಾಮರ್ಿಕ ಮತ್ತು ಕಿಶೋರ ಕಾಮರ್ಿಕ ಮಕ್ಕಳನ್ನು ಅಂಗಡಿ ಮತ್ತು ಹೋಟೆಲ್ ಉದ್ದಿಮೆಗಳಲ್ಲಿ ನೇಮಕ ಮಾಡಿಕೊಳ್ಳಬಾರದು, ಮಾಡಿಕೊಂಡಿದ್ದು ಕಂಡುಬಂದಲ್ಲಿ ಕಾನೂನಿನ ಅನ್ವಯ ಕ್ರಮಕೈಗೊಳ್ಳಲಾಗುವುದು ಎಂದರು.

ಅಥರ್ಿಕವಾಗಿ ದುರ್ಬಲರಾದವರಿಗೆ ಉಚಿತವಾದ ಕಾನೂನಿನ ಸಹಾಯವನ್ನು ನಮ್ಮ ಕಾನೂನಿನ ಸೇವಾ ಪ್ರಾಧಿಕಾರ ಒದಗಿಸಲಿದೆ ಎಂದು ಹೇಳಿದ ನ್ಯಾ. ಹಂದ್ರಾಳ್ ಸಾರ್ವಜನಿಕರಿಗೆ ಉಚಿತವಾದ ಕಾನೂನು ಅರಿವು ಮತ್ತು ನೆರವು ಪಡೆದುಕೊಳ್ಳುವಂತೆ ಅವರು ತಿಳಿಸಿದರು.

      ರಾಷ್ಟ್ರೀಯ ಬಾಲಕಾಮರ್ಿಕ ಯೋಜನಾ ನಿದರ್ೇಶಕ ಎ.ಮೌನೇಶ ಅವರು ಮಾತನಾಡಿ, ಬಾಲ್ಯಾವಸ್ಥೆ ಮತ್ತು ಬಾಲ್ಯವಿವಾಹ ಯೋಜನೆಗೆ ಸಂಬಂದಿಸಿದ ಕಾರ್ಯವ್ಯಾಪ್ತಿ ಹಾಗೂ ಬಾಲ್ಯಾವಸ್ಥೆ ಹಾಗೂ ಕಿಶೋರಾವ್ಯಸ್ಥೆ  ಕಾಮರ್ಿಕ ಪದ್ದತಿ ನಿಮರ್ೂಲನೆಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿ ಹೆಚ್. ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.

       ಸಂಪನ್ಮೂಲ ವ್ಯಕಿಗಳಾಗಿ ಆಗಮಿಸಿದ್ದ ಕಾಮರ್ಿಕ ನಿರೀಕ್ಷಕ ರವಿದಾಸ್ ಅವರು ಬಾಲ್ಯಾವಸ್ಥೆ ಹಾಗೂ ಕಿಶೋರಾವ್ಯಸ್ಥೆ  ಕಾಮರ್ಿಕ (ನಿಷೆದ ಮತ್ತು ನಿಯಂತ್ರಣ) ಕಾಯ್ದೆ 1986 ರನ್ವಯ ಎಲ್ಲಾ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 6-14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಹಾಗೂ ಸಂಜ್ಞೆಯ (ವಾರೆಂಟ್  ರಹಿತ ಬಂದಿಸಬಹುದಾದ) ಅಪರಾಧವಾಗಿದೆ ಎಂದು ತಿಳಿಸಿದರು. 

 ಇದೇ ಸಂದರ್ಭದಲ್ಲಿ ಅಬಕಾರಿ ಇಲಾಖೆ ಉಪ ಅಧೀಕ್ಷಕಿ ಸ್ವಪ್ನ, ಕಾಡರ್್ ಸಂಸ್ಥೆ ನಿದರ್ೇಶಕ ಬಿ.ಡಿ.ಗೌಡ, ಉದ್ದಿಮೆದಾರರಾದ ಬಸವಲಿಂಗನಗೌಡ, ಗುರುರಾಜ್ ಮತ್ತಿತರರು ಇದ್ದರು.

ಸುದ್ದಿ ಓದಿ