ಗ್ರಾಮರತ್ನ ಪ್ರಶಸ್ತಿ ಪ್ರದಾನ
ಮಾಂಜರಿ 12: "ತಾನು ಅಮೇರಿಕದಲ್ಲಿ ಇದ್ದರೂ ಕೂಡ ತನ್ನೂರಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಏನೆಲ್ಲ ಅನುಕೂಲತೆಗಳು ಬೇಕೋ ಅವೆಲ್ಲವನ್ನು ಮಾಡಲಾಗುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕಾರ್ಯವಾದಲ್ಲಿ, ಗ್ರಾಮದ ಹೆಸರನ್ನು ತರುವಂತಹ ಸಾಧಕರಾಗುತ್ತಾರೆ" ಎಂದು ಅನಿವಾಸಿ ಭಾರತೀಯ ಅಪ್ಪಾಸಾಹೇಬ ಮಡಿವಾಳೆ ಅವರು ಹೇಳಿದರು.
ಚಿಕ್ಕೋಡಿ ತಾಲ್ಲೂಕಿನ ನಣದಿ ಗ್ರಾಮದಲ್ಲಿ ಇಂದು ಸೋನಾಬಾಯಿ ಮಡಿವಾಳೆ ಎಜ್ಯುಕೇಷನ್ ಸೊಸೈಟಿ ನಣದಿ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಗ್ರಾಮರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
" ಯಾವುದೇ ವ್ಯಕ್ತಿ ಎಲ್ಲಿಯೇ ಇರಲಿ. ತನ್ನ ಸ್ವಗ್ರಾಮದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾನೆ. ತನಗೂ ಕೂಡ ಹಾಗೇ ಇದ್ದು. ತಾನು ದೂರದ ಅಮೆರಿಕ (ಯುಎಸ್ಎ) ದೇಶದಲ್ಲಿ ವಾಸವಿದ್ದರೂ ಕೂಡ ಇಲ್ಲಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯತ್ತ ತನ್ನ ಮನಸ್ಸು ತುಡಿಯುತ್ತಿರುತ್ತದೆ. ಹಾಗೇನೇ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮಡಿವಾಳೆ ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದಾರೆ" ಎಂದು ಹೆಮ್ಮೆ ಪಟ್ಟರು.
ಗ್ರಾಮದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದ ಕೆನರಾ ಬ್ಯಾಂಕ್ ಚಿಕ್ಕೋಡಿ ಶಾಖೆಯ ಮ್ಯಾನೇಜರ್ ಸಂತೋಷ ರವಳುಕೇದಾರಿ ಅವರಿಗೆ ಗ್ರಾಮ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಇತ್ತೀಚಿನ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಚಿಕ್ಕೋಡಿ ಶಾಖೆಯ ಕೆನರಾ ಬ್ಯಾಂಕ್ ಮ್ಯಾನೇಜರ್ ಸಂತೋಷ ರವಳುಕೇದಾರಿ ಅವರು ಗ್ರಾಮ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ, " ವಿದ್ಯಾರ್ಥಿಗಳು ನಿರಂತರ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು. ವಿದ್ಯಾಥರ್ಿ ಜೀವನದಲ್ಲಿ ಚೆನ್ನಾಗಿ ಓದಬೇಕು. ಉನ್ನತ ಸ್ಥಾನವನ್ನು ಅಲಂಕರಿಸಿ ಗ್ರಾಮದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು. ಅಂದಿನ ಪಾಠವನ್ನು ಅಂದೇ ಆಸಕ್ತಿಯಿಂದ ಅಧ್ಯಯನ ಮಾಡಿದ್ದೇ ಆದಲ್ಲಿ ಪರೀಕ್ಷೆಯನ್ನು ಯಾವುದೇ ಭಯ ಇಲ್ಲದೇ ಎದುರಿಸಬಹುದಾಗಿದೆ" ಎಂದು ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಸೇವಾ ನಿವೃತ್ತಿ ಹೊಂದಿದ ನಣದಿಯ ಸಕರ್ಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಮೋಹನ ನಿಂಬಾಳ್ಕರ, ಕೇರೂರಿನ ಕನರ್ಾಟಕ ಪಬ್ಲಿಕ್ ಶಾಲೆಯ ಆರ್ ಎಸ್ ಶಿಂಗಡೆ, ನಣದಿಯ ಸಕರ್ಾರಿ ಉದರ್ು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಸ್ ಎಮ್ ಜಮಾದಾರ ಅವರನ್ನು ವಿಶೇಷವಾಗಿ ಸತ್ಕರಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ಬಂಡು ನಾಯಕವಾಡಿ, ಹೌಸಕ್ಕ ಸೂರ್ಯವಂಶಿ, ಸೋನಾಲಿ ಕೋಕಣೆ, ಈಶ್ವರ ರವಳುಕೇದಾರಿ, ಗಂಗಾಧರ ಶಿಂತ್ರೆ, ಮಧುಕರ ಕೋಕಣೆ, ಸುನೀಲ ಚಿನಗೆ, ಬಿ ಬಿ ರಾಮನಕಟ್ಟಿ, ಪ್ರಕಾಶ ಬಡಕೆ ಮುಂತಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಪ್ರಕಾಶ ಪಾಯನ್ನವರ ಅವರು ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಚಂದ್ರ ಮಡಿವಾಳೆ ಸ್ವಾಗತಿಸಿದರು. ಎಂ ಎಂ ಪಾಟೀಲ ನಿರೂಪಿಸಿದರು. ಶಾಲೆಯ ದೈಹಿಕ ಶಿಕ್ಷಕ ಎನ್ ಜಿ ಪಾಟೀಲ ವಂದಿಸಿದರು.