ಗೋಕಾಕ್

ಅರಭಾಂವಿ ಪಿಕೆಪಿಎಸ್ ಅಧ್ಯಕ್ಷರ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ಅರಭಾಂವಿ ಪಿಕೆಪಿಎಸ್ ಅಧ್ಯಕ್ಷರ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ಘಟಪ್ರಭಾ; ಸಮೀಪದ ಅರಭಾಂವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರ ಹಾಗೂ ಉಪಾದ್ಯಕ್ಷರ ಅವಿರೋಧ ಆಯ್ಕೆ ಅರಭಾಂವಿ ಮತಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಇವರ ಮಾರ್ಗದರ್ಶನದಲ್ಲಿ ಬುಧವಾರ ಜರುಗಿತು.

 ಅಧ್ಯಕ್ಷರಾಗಿ ಮುತ್ತೆಪ್ಪ ಸಣ್ಣಧರೆಪ್ಪ ಝಲ್ಲಿ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಣ ಬಸಪ್ಪ ಜೋನಿ ಅವಿರೋಧವಾಗಿ ಆಯ್ಕೆಯಾದರು. ಆಡಳಿತ ಮಂಡಳಿಯ ಸದಸ್ಯರಾದ ಯಲ್ಲಪ್ಪ ಕೆಂ. ಸತ್ತಿಗೇರಿ, ಲಕ್ಷ್ಮಣ ಸ. ಶಿಂಗೋಟಿ, ಲಗಮಪ್ಪ ಯ. ಪೂಜೇರಿ, ಉದ್ದಪ್ಪ ಗಿ. ದುರದುಂಡಿ, ಕೃಷ್ಣಾ ಯ. ಬಂಡಿವಡ್ಡರ, ಹಣಮಂತ ಬ. ಚಿಪ್ಪಲಕಟ್ಟಿ, ಲಕ್ಷ್ಮಣ ಮ. ಮಾಳ್ಯಾಗೋಳ, ಹಣಮಂತ ಶಂ. ಪೂಜೇರಿ, ಬಾಗೀರಥಿ ದುಂ. ಚಿಗರಿತೋಟ, ಸಾಂವಕ್ಕ ಯ.ಅಂತರಗಟ್ಟಿ, ಮುಖ್ಯ ಕಾರ್ಯನಿರ್ವಹಕರು ದುರದುಂಡೆಪ್ಪ ಲಕ್ಷ್ಮಣ ಸಂಸುದ್ದಿ, ಚುನಾವಣಾಧಿಕಾರಿ ಸುರೇಶ ಬಿ. ಬಿರಾದಾರ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


ಸುದ್ದಿ ಓದಿ