18 ಗ್ರಾಮ ಪಂಚಾಯತಿಗಳಿಗೆ ಆಡಳಿತ ಅಧಿಕಾರಿಗಳ ನೇಮಕ
Appointment of administrative officers for 18 Gram Panchayats
ಬ್ಯಾಡಗಿ 27: ತಾಲೂಕಿನ 21 ಗ್ರಾಮ ಪಂಚಾಯತಿಗಳ ಪೈಕಿ 18 ಗ್ರಾಮ ಪಂಚಾಯತಿಗಳಿಗೆ ಆಡಳಿತ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳಾದ ಡಾ: ವಿಜಯಮಾಲತೇಶ ಬಿ ದಾನಮ್ಮನವರ ಅಧಿಸೂಚನೆ ಹೊರಡಿಸಿದ್ದಾರೆ. ಎಂದು ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಕೆ ಎಂ ಪತ್ರಿಕಾ ಪ್ರಕಟಣೆ ತಿಳಿಸಿದರು. ತಾಲೂಕಿನ ಒಟ್ಟು 18 ಗ್ರಾಮ ಪಂಚಾಯತಿಗಳಿಗೆ ಚುನಾಯಿತ ಸದ್ಯಸರ ಅವಧಿಯು ಜನೆವರಿ 2026 ನೇಯ ತಿಂಗಳಿನಲ್ಲಿ ಮುಕ್ತಾಯಗೊಳವುದರಿಂದ 2026-2031 ರ ಅವಧಿಗಳಿಗಾಗಿ ಈ ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆದು ಗ್ರಾಮ ಪಂಚಾಯತಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಯುವ ದಿನಾಂಕದವರೆಗೆ ಸದರಿ ಗ್ರಾಮ ಪಂಚಾಯತಿಗಳಿಗೆ ಕರ್ನಾಟಕ ಗ್ರಾಮ ಸ್ವರಾಜ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 8()ರನ್ವಯ ಜಿಲ್ಲಾಧಿಕಾರಿಗಳು ಆಡಳಿತಾಧಿಕರಿಯನ್ನು ನೇಮಿಸಲು ಅವಕಾಶವಿರುತ್ತದೆ. ನಿಯಾಮಾವಳಿಗಳನ್ವಯ ಸದರ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವುದು ಅವಶ್ಯವಾಗಿರುವುದು ಮನವರಿಕೆಯಾಗಿದೆ. ಆದ್ದರಿಂದ ದಿನಾಂಕ: 27/01/2026 ರಿಂದ ಅನ್ವಯಿಸುವಂತೆ ಆಡಳಿತ ಅಧಿಕಾರಿಗಳನ್ನು ನೇಮಕ ಮಾಡಿ ಈ ಕೆಳಗಿನ ಪಂಚಾಯತಿಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಿರುತ್ತಾರೆ.
ನೇಮಗೊಂಡ ಅಧಿಕಾರಿಗಳನ್ನು ದಿನಾಂಕ 27/01/2026 ರಂದು ಅಪ್ರಹಾನ ಸಂಭಂಧಪಟ್ಟ ಗ್ರಾಮ ಪಂಚಾಯತಿಗಳಿಗೆ ಪದಗ್ರಹಣ ಮಾಡತ್ತಕ್ಕದ್ದು ಹಾಗೂ ಗ್ರಾಮ ಪಂಚಾಯತಿಯ ಎಲ್ಲಾ ಅಧಿಕಾರಿಗಳನ್ನು ಮುಖ್ಯ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು. ಹಾಗೂ ಈ ಆದೇಶದ ಅಧಿಕಾರಿಯ ಅಧಿಕಾರ ಗ್ರಹಣ ಮಾಡಿದ ದಿನಾಂಕದಿಂದ 6 ತಿಂಗಳ ಅಓದಿಗೆ ಅಥವಾ ಅಧ್ಯಕ್ಷರ ಚುನಾವಣೆ ಜರುಗಿ ಗ್ರಾಮ ಪಂಚಾಯತಿಯ ಕ್ರಮ ಬದ್ದವಾಗಿ ರಚನೆಯಾಗುವುವರೆಗೆ ಇದರಲ್ಲಿ ಯಾವುದು ಮೊದಲು ಅಲ್ಲಿಯವರೆಗು ಅಸ್ಥಿತ್ವದಲ್ಲಿ ಇರತಕ್ಕದ್ದು ಎಂದು ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಕೆ ಎಂ ಇವರು ತಿಳಿಸಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 