ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ
ಲೋಕದರ್ಶನ ವರದಿ
ಯರಗಟ್ಟಿ 05: 12ನೇ ಶತಮಾನದ ನಿಜ ಶರಣ ಹಡಪದ ಅಪ್ಪಣ್ಣನವರು ಜಗಜ್ಯೋತಿ ಬಸವಣ್ಣನವರ ಅನುಭವ ಮಂಟಪದಲ್ಲಿ ಕಾರ್ಯದರ್ಶಿಯಾಗಿ ಜನಮನ ಗೆದ್ದು, ಸರ್ವರಲ್ಲಿ ತಮ್ಮ ವಚನ ಸಾಹಿತ್ಯದ ಮೂಲಕ ಕಾಯಕದಿಂದ ಕೈಲಾಸ ಕಾಣಲು ನಾವು ನ್ಯಾಯ, ನೀತಿ, ದಾನ, ದಯೆ, ಧರ್ಮ ತೋರಿ ಸರ್ವರೊಂದಿಗೆ ಬದುಕಬೇಕು ಎಂಬ ಸಂದೇಶ ಸಾರಿದವರು ಎಂದು ತಾಪಂ ಅಧ್ಯಕ್ಷ ವಿನಯಕುಮಾರ ದೇಸಾಯಿ ಹೇಳಿದರು.
ಸಮೀಪದ ತಲ್ಲೂರ ಗ್ರಾಮದ ಪಂಚಾಯತ ಸಭಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿರುವ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಾಯಕ ನಂಬಿ ಬದುಕು ಅದರಲ್ಲಿ ದೇವರನ್ನು ಹುಡುಕು. ಮಾಡಿದರು ಪರರಿಗೆ ಕೆಡಕು ಬಯಸದಿರುವುದೇ ಮಾನವನ ಮಾನವೀಯ ನಿಜವಾದ ಬದುಕು ಎಂಬುದನ್ನು ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ಭಾವೈಕ್ಯತೆ ತುಂಬಿದವರಾಗಿದ್ದರು ಎಂದರು. ನಿವೃತ್ತ ಶಿಕ್ಷಕ ಎ.ವಿ.ಇಂಗಳೆ, ಸಚೀನ ಹೋಳಿ, ಬಸವರಾಜ ಕಟ್ಟಿಮನಿ ಮಾತನಾಡಿದರು.
ಸಮಾಜದ ಮುಖಂಡ ಬಸವರಾಜ ದೊಡವಾಡ ಶಿವಶರಣ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ತೊರಗಲ್ಲಮಠದ ದೀಪಕ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು. ಬಸಯ್ಯ ಹಿರೇಮಠ, ಸಮಾಜದ ಮುಖಂಡ ನಿಂಗಪ್ಪ ದೊಡವಾಡ, ಪಿಡಿಒ ಎ.ಬಿ.ಬಂಗಾರಿ, ರಾಜಶೇಖರ ಅಣ್ಣಿಗೇರಿ, ಮಹಾರುದ್ರಪ್ಪ ಉಪ್ಪಿನ, ಶಂಕರಗೌಡ ಪಾಟೀಲ, ಬಾಬುಗೌಡ ಅಣ್ಣಿಗೇರಿ, ಮಲ್ಲಿಕಾರ್ಜುನ ದೊಡವಾಡ, ವಿಠ್ಠಲ ಬಡಿಗೇರ, ಬಸವರಾಜ ಉಗರಗೋಳ, ಮಹೇಶ ಇಟ್ನಾಳ, ಮಂಜು ದೊಡವಾಡ, ರಾಜು ದೊಡವಾಡ, ನವೀನ ದೊಡವಾಡ ಹಾಗೂ ಸಿಬ್ಬಂದಿ ಇದ್ದರು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಆಚರಿಸಲಾಯಿತು. ವೈದ್ಯಾಧಿಕಾರಿ ಡಾ.ಕಾರ್ತಿಕ ವಾಲಿ, ಹನಮಂತ ಪಚ್ಚಿನವರ, ಎಸ್.ಎಸ್.ಉಪ್ಪಿನ, ಶಂಕರ ಲಮಾಣಿ, ಮಹಾವೀರ ಜೋಡಟ್ಟಿ, ಆರತಿ ಹೊಳ್ಳಿಕೇರಿ, ಸವಿತಾ ಚೆನಮೇತ್ರಿ ಹಾಗೂ ಸಿಬ್ಬಂದಿ ಇದ್ದರು