ಸ್ವಮಾನ್ ಫೈನಾನ್ಷಿಯಲ್ ಸವರ್ೀಸಸ್ ಕಂಪನಿ ಆರಂಭಿಸಿದ ಅನುಶ್ರೀ ಜಿಂದಾಲ್ ಗ್ರಾಮೀಣ ಪ್ರದೇಶದ ಮಹಿಳೆಯರ, ಸಣ್ಣ ಉದ್ದಿಮೆಗಳ ಆಥರ್ಿಕ ಸೇರ್ಪಡೆಗೆ ಉತ್ತೇಜನ
ಲೋಕದರ್ಶನ ವರದಿ
ಬಳ್ಳಾರಿ 22:ಅನುಶ್ರೀ ಜಿಂದಾಲ್ ಅವರು ಸ್ವಮಾನ್ ಫೈನಾನ್ಷಿಯಲ್ ಸವರ್ೀಸಸ್ ಎಂಬ ಸಣ್ಣ ಹಣಕಾಸು ಕಂಪನಿಯನ್ನು ಆರಂಭಿಸುವ ಮೂಲಕ ತಮ್ಮ ಮೊದಲ ವ್ಯವಹಾರವನ್ನು ಘೋಷಿಸಿದ್ದಾರೆ. ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಮತ್ತು ಸಣ್ಣ ಉದ್ದಿಮೆಗಳನ್ನು ಆಥರ್ಿಕ ಸೇರ್ಪಡೆಗೆ ಉತ್ತೇಜನ ನೀಡುವ ಉದ್ದೇಶವಿಟ್ಟುಕೊಂಡು ಅನುಶ್ರೀ ಜಿಂದಾಲ್ ಅವರು ಈ ಕಂಪನಿಯನ್ನು ಆರಂಭಿಸಿದ್ದಾರೆ. ಈ ಕಂಪನಿಯು ಬ್ಯಾಂಕಿಂಗ್ ಸೇವೆಗಳು ಇಲ್ಲದಿರುವ ಪ್ರದೇಶಗಳ ಜನರಿಗೆ ಹಣಕಾಸು ನೆರವು ನೀಡಲಿದೆ. ಹಣಕಾಸು ವ್ಯವಹಾರಗಳನ್ನು ಆರಂಭಿಸಲು ಭಾರತೀಯ ರಿಸವರ್್ ಬ್ಯಾಂಕ್ ಇತ್ತೀಚೆಗೆ ಸ್ವಮಾನ್ಗೆ ಅನುಮತಿ ನೀಡಿದ್ದು, ಆರ್ಬಿಐನ ಎನ್ಬಿಎಫ್ಸಿ-ಎಂಎಫ್ಐನಲ್ಲಿ ನೋಂದಣಿ ಮಾಡಿಕೊಳ್ಳಲಾಗಿದೆ. ಆರಂಭಿಕ ಹಂತದಲ್ಲಿ ಸ್ವಮಾನ್ ಕನರ್ಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಮಹಿಳೆಯರು ಮತ್ತು ಸಣ್ಣ ಪ್ರಮಾಣದ ಉದ್ದಿಮೆಗಳಿಗೆ ನೆರವಾಗುವ ಮೂಲಕ ಆಥರ್ಿಕ ಸೇರ್ಪಡೆ ಮಾಡುವ ಉದ್ದೇಶವಿಟ್ಟುಕೊಂಡಿದೆ. ಇದರ ಜತೆಗೆ ಈಶಾನ್ಯ ರಾಜ್ಯಗಳಾದ ಒರಿಸ್ಸಾ ಮತ್ತು ಚತ್ತೀಸ್ಘಡ ರಾಜ್ಯಗಳಲ್ಲಿ 2020 ರ ವೇಳೆಗೆ ಪ್ರವೇಶಿಸುವ ಯೋಜನೆ ರೂಪಿಸಿದೆ. ಇದಲ್ಲದೇ, 2021 ರ ವೇಳೆಗೆ 1,00,000 ಕ್ಕೂ ಅಧಿಕ ಜನರನ್ನು ತಲುಪಿ ಅವರ ಜೀವನದ ಮೇಲೆ ಗುಣಾತ್ಮಕವಾದ ಪರಿಣಾಮಗಳನ್ನು ಹೊಂದುವ ಮಹತ್ವದ ಗುರಿ ಹಾಕಿಕೊಂಡಿದೆ.
ಸ್ವಮಾನ್ ಫೈನಾನ್ಷಿಯಲ್ ಸವರ್ೀಸಸ್ನ ಸಂಸ್ಥಾಪಕಿ ಅನುಶ್ರೀ ಜಿಂದಾಲ್ ಅವರು ತಮ್ಮ ಮೈಕ್ರೋಫೈನಾನ್ಸ್ ವೆಂಚರ್ ಆರಂಭದ ಬಗ್ಗೆ ಮಾತನಾಡಿ, ``ಕಳೆದ ಕೆಲವು ವರ್ಷಗಳಿಂದ ಭಾರತದ ಮೈಕ್ರೋಫೈನಾನ್ಸ್ ಕ್ಷೇತ್ರ ಗಣನೀಯ ಪ್ರಮಾಣದಲ್ಲಿ ಬೆಳವಣಿಗೆ ಕಂಡಿದೆ. ಆದಾಗ್ಯೂ, ಗ್ರಾಹಕರಿಗೆ ವಿಸ್ತಾರವಾದ ಹಣಕಾಸು ಸೌಲಭ್ಯಗಳನ್ನು ಒದಗಿಸುವ ಮೂಲಕ ಆಥರ್ಿಕ ಸೇರ್ಪಡೆ ಮತ್ತು ಸದೃಢತೆಯನ್ನು ತರಲು ಇನ್ನೂ ಸಾಕಷ್ಟು ಅವಕಾಶಗಳಿವೆ. ಸ್ವಮಾನ್ ಮೂಲಕ ನಾವು ಉದ್ದೇಶಿಸಿರುವ ಸ್ಥಳಗಳಲ್ಲಿ ಸಣ್ಣ ಸಾಲ ಯೋಜನೆಗಳ ಸೌಲಭ್ಯಗಳನ್ನು ನೀಡುವ ಮೂಲಕ ನಾವು ಸಮುದಾಯಗಳು ಮತ್ತು ಅತಿ ಸಣ್ಣ ಉದ್ದಿಮೆಗಳಿಗೆ ಉತ್ತಮ ಸೇವೆಗಳನ್ನು ನೀಡುತ್ತೇವೆ ಎಂಬ ವಿಶ್ವಾಸವಿದೆ. ನಮ್ಮ ಕಟ್ಟಕಡೆಯ ಗ್ರಾಹಕರು ಮತ್ತು ಅತಿ ಸಣ್ಣ ಉದ್ದಿಮೆಗಳಿಗೆ ನಮ್ಮ ಈ ಉಪಕ್ರಮವು ಮಹತ್ವದ ಪರಿಣಾಮ ಬೀರುತ್ತದೆ ಎಂಬ ವಿಶ್ವಾಸ ನಮ್ಮದಾಗಿದೆ'' ಎಂದು ತಿಳಿಸಿದರು.
2019 ರ ಮಾಚರ್್ ವೇಳೆಗೆ ಸ್ವಮಾನ್ 100 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಯೋಜನೆಯನ್ನು ಹೊಂದಿದ್ದು, 2020 ರ ವೇಳೆಗೆ ಉದ್ಯೋಗಿಗಳ ಸಂಖ್ಯೆಯನ್ನು 250 ಕ್ಕೆ ಹೆಚ್ಚಿಸುವ ಉದ್ದೇಶವನ್ನೂ ಹೊಂದಿದೆ. ಇದರೊಂದಿಗೆ 2019 ರ ಮಾಚರ್್ ವೇಳೆಗೆ ಕಂಪನಿಯು ಗ್ರಾಮೀಣ ಪ್ರದೇಶದ 1000 ಕ್ಕೂ ಹೆಚ್ಚು ಮಹಿಳೆಯರನ್ನು ಸಬಲಗೊಳಿಸುವ ಗುರಿ ಇಟ್ಟುಕೊಂಡಿದೆ. ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಯನ್ನು ಸುಲಲಿತವಾಗಿ ಸಿಗುವಂತೆ ಮಾಡುವ ದೃಷ್ಟಿಯಿಂದ ಕಂಪನಿಯು ಸ್ವಮಾನ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಇದರ ಮೂಲಕ ಸಾಲ, ಸಾಲ ನಿರ್ವಹಣೆ ಮತ್ತು ಸಂಗ್ರಹ ಸೇರಿದಂತೆ ಮತ್ತಿತರೆ ಸೇವೆಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಡಿಜಿಟಲ್ ಇಂಡಿಯಾ ದೂರದೃಷ್ಟಿಗೆ ಪೂರಕವಾಗಿ ಈ ಸ್ವಮಾನ್ ಆ್ಯಪ್ ಇದ್ದು ಇದರ ಮೂಲಕ ನಗದುರಹಿತ ವಿತರಣೆ ಮತ್ತು ಕಾಗದರಹಿತ ಸಾಲ ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ.
ಆರಂಭದಲ್ಲಿ ಕನರ್ಾಟಕದ ಬಳ್ಳಾರಿ ಹಾಗೂ ಮಹಾರಾಷ್ಟ್ರದ ನಾಂದೇಡ್, ಪಾಲ್ಘಾರ್, ಥಾಣೆ ಮತ್ತು ಲಾತೂರು ಮತ್ತು ಅದಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳು ಸೇರಿದಂತೆ ಎರಡೂ ರಾಜ್ಯಗಳ 16 ಸ್ಥಳಗಳ ಗ್ರಾಮೀಣ ಮಹಿಳೆಯನ್ನು ಆಥರ್ಿಕ ಸಬಲೀಕರಣ ಮಾಡಲಾಗುತ್ತದೆ. ಮುಂದಿನ ಒಂದು ವರ್ಷದಲ್ಲಿ ಮಹಾರಾಷ್ಟ್ರ, ಕನರ್ಾಟಕ ಮತ್ತು ಒರಿಸ್ಸಾ, ಚತ್ತೀಸ್ಘಡದ 50 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಬ್ಯಾಂಕ್ ಸ್ಥಾಪನೆ ಮಾಡುವ ಉದ್ದೇಶವನ್ನು ಸ್ವಮಾನ್ ಹೊಂದಿದೆ,
ಸ್ವಮಾನ್ ಫೈನಾನ್ಷಿಯಲ್ ಸವರ್ೀಸಸ್ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಿರಣ್ಕುಮಾರ್ ಅವರು ಮಾತನಾಡಿ, ``ಭಾರತ ವಿಶ್ವದಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ಪ್ರಗತಿ ಹೊಂದುತ್ತಿರುವುದನ್ನು ಮುಂದುವರಿಸಿದೆ. ಆದರೆ, ಇದೇ ವೇಳೆ, ಸಾಲ ಸೌಲಭ್ಯಗಳ ಪೂರೈಕೆ ಮತ್ತು ಹಣಕಾಸು ಸೇವೆಗಳ ಪೂರೈಕೆಯಲ್ಲಿ ದೇಶಾದ್ಯಂತ ಸಾಕಷ್ಟು ಅಂತರವಿದೆ. ಶೇ.40 ರಷ್ಟು ಜಿಡಿಪಿಯನ್ನು ಹೊಂದಿರುವ ಚೀನಾಗೆ ಹೋಲಿಸಿದರೆ ಶೇ.15 ರಷ್ಟು ಜಿಡಿಪಿಯನ್ನು ಹೊಂದಿರುವ ಭಾರತದಲ್ಲಿ ರೀಟೇಲ್ ಸಾಲ ಪೂರೈಕೆ ಪ್ರಮಾಣ ಕಡಿಮೆ ಇದೆ. ಆಥರ್ಿಕ ಸೇರ್ಪಡೆ ಮಾಡುವ ಮೂಲಕ ನಾವು ಈ ಆಥರ್ಿಕ ಪ್ರಗತಿಯಲ್ಲಿ ನಾವು ಪಾಲುದಾರರಾಗಲಿದ್ದೇವೆ. ಡಿಜಿಟಲ್ ಇಂಡಿಯಾದಲ್ಲಿ ನಾವು ನಮ್ಮ ಗ್ರಾಹಕರಿಗೆ ಅವರ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ'' ಎಂದು ತಿಳಿಸಿದರು.
ಭಾರತದಲ್ಲಿ ಮೈಕ್ರೋಫೈನಾನ್ಸ್ ಉದ್ದಿಮೆಯ ಒಟ್ಟು ಸಾಲ ಬಂಡವಾಳ 1,46,741 ಕೋಟಿ ರೂಪಾಯಿಗಳಾಗಿದೆ. ಇದು 2018-19 ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಶೇ.7 ರಷ್ಟು ಕಂಡಿದ್ದರೆ, 2017-18 ನೇ ಸಾಲಿಗಿಂತ ಶೇ.51 ರಷ್ಟು ಹೆಚ್ಚಳ ಕಂಡಿದೆ. 2018 ರ ಸೆಪ್ಟಂಬರ್ 30 ರ ವೇಳೆಗೆ ಸಕ್ರಿಯ ಮೈಕ್ರೋಫೈನಾನ್ಸ್ 7.77 ಕೋಟಿ ಇದ್ದು, 2017-18 ನೇ ಸಾಲಿನ 2 ನೇ ತ್ರೈಮಾಸಿಕದಲ್ಲಿ ಶೇ.27 ರಷ್ಟು ಪ್ರಗತಿ ಸಾಧಿಸಿದೆ. ಎನ್ಬಿಎಫ್ಸಿ-ಎಂಎಫ್ಐಗಳು ಮೈಕ್ರೋ-ಕ್ರೆಡಿಟ್ನಲ್ಲಿ ಹೆಚ್ಚು ಪಾಲನ್ನು ಹೊಂದಿವೆ. ಅಂದರೆ, 54,018 ಕೋಟಿ ರೂಪಾಯಿಗಳ ಸಾಲ ನೀಡಿವೆ.