ಸೋಮಲಾಪುರದ ಬಳಿ ಬೋನಿಗೆ ಬಿದ್ದ ಮತ್ತೊಂದು ಚಿರತೆ
ಲೋಕದರ್ಶನ ವರದಿ
ಬಳ್ಳಾರಿ 28:ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಮತ್ತೊಂದು ಚಿರತೆ ಬಂದು ಬೆಳಗಿನ ಜಾವ ಬೋನಿಗೆ ಬಿದ್ದಿದೆ. ಅತೀ ಎತ್ತರದ ಗಂಡು ಚಿರತೆ ಅರಣ್ಯ ಇಲಾಖೆ ಅಳವಡಿಸಿದ್ದ ಕಬ್ಬಿಣದ ಬೋನಿಗೆ ಈ ಬಾರಿ ಬಲೆಗೆ ಬಿದ್ದಿದೆ. ಬಲೆಗೆ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಸ್ಥಳಿಯರು, ಸುತ್ತ-ಮುತ್ತಲಿನ ಗ್ರಾಮಸ್ಥರು ಅಪಾರ ಪ್ರಮಾಣದಲ್ಲಿ ಆಗಮಿಸಿ ಚಿರತೆಯನ್ನು ನೋಡುತ್ತಿದ್ದರು. ಎದರಿದ ಚಿರತೆ ಕಬ್ಬಿಣದ ಬೋನಿನಲ್ಲಿ ಸಾಕಷ್ಟು ಗಾಯ ಮಾಡಿಕೊಂಡಿದೆ. ಡಿ.11 ರಂದು ಸೋಮಲಾಪುರ ಗ್ರಾಮದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ವೆಂಕಟಸಾಯಿ ಬಾಲಕನು ಒತ್ತೊಯ್ದು ರಕ್ತ ಹೀರಿತ್ತು. ಇದೇ ನರಬಕ್ಷ ಚಿರತೆ ಶುಕ್ರವಾರ ಬೋನಿಗೆ ಬಿದ್ದಿದೆ. ಕೂಡಲೇ ಈ ಗುಡ್ಡದಲ್ಲಿರುವ ಇನ್ನಷ್ಟು ಚಿರತೆಗಳನೆಲ್ಲಾ ಬೇರೆಕಡೆ ಸ್ಥಳಾಂತರಿಸಿ ಅಲ್ಲಿಯವರೆಗೆ ನಮಗೆ ಭಯ ತಪ್ಪಿದ್ದಲ್ಲಾ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಎರಡು ವಾರದಲ್ಲಿ ಎರಡು ಕಂದಮ್ಮಗಳ ಬಲಿ ಪಡೆದ ಚಿರತೆಗಾಗಿ ಒಟ್ಟು 11 ಕಡೆ ಬೋನ್ ಗಳನ್ನು ಅಳವಡಿಸಿದ ಚಿರತೆ ಇಡಿಯುವ ಅರಣ್ಯ ಇಲಾಖೆ ಸಿಬ್ಬಂದಿ ಕೊಂಬಿಂಗ್ ಸಹ ಮಾಡುತ್ತಿದ್ದಾರೆ. ಇಂದು ಸೋಮಲಾಪುರದ ಬಳಿ ದೊರೆತ ಚಿರತೆ ಈ ಹಿಂದೆ ಮೊದಲ ಮಗು ಬಲಿ ಪಡೆದಿದೆ. ಇನ್ನೂ ಕೆಲ ಚಿರತೆಗಳನ್ನು ಆದಷ್ಟು ಬೇಗ ಇಡಿಯುತ್ತವೆ ಎಂದು ಬಳ್ಳಾರಿ ಡಿ.ಎಫ್ ಓ ರಮೇಶಕುಮಾರ ಪ್ರತಿಕ್ರೀಯೆ ನೀಡಿದ್ದಾರೆ.