ನಟ ಅಕ್ಷಯ್ ಕುಮಾರ್ ಗೂ ಅಮರಿಕೊಂಡ ಕೊರೋನ ಸೋಂಕು
ನವದೆಹಲಿ , ಏ 4 :ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೂ ಕರೋನ ಸೊಂಕು ತಗುಲಿರುವುದು ವೈದ್ಯಕೀಯ ವರದಿಯಿಂದ ದೃಡಪಟ್ಟಿದೆ. ಈ ಬಗ್ಗೆ ಅವರು ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದು, ನನಗೆ ಕರೋನ ಸೊಂಕು ಇರೋದು ದೃಡಪಟ್ಟಿದ್ದು, ಸದ್ಯ ನಾನು ಹೋಮ್ ಐಸೋಲೇಶನ್ ನಲ್ಲಿದ್ದೇನೆ ಜೊತೆಗೆ ವೈದ್ಯಕೀಯ ಆರೈಕೆಯಲ್ಲಿದ್ದು ನನ್ನೊಂದಿಗೆ ಸಂಪರ್ಕದಲ್ಲಿರುವ ಎಲ್ಲರೂ ಕೂಡ ನಿಗಾ ವಹಿಸುವಂತೆ ಅವರು ಮನವಿ ಮಾಡಿದ್ದಾರೆ. ಶೀಘ್ರದಲ್ಲೇ ಗುಣಮುಖರಾಗುವುದಾಗಿ ಅವರು ಹೇಳಿಕೊಂಡಿದ್ದಾರೆ. ಅಕ್ಷಯ್ ಕುಮಾರ್ 'ರಾಮ ಸೇತು' ಚಿತ್ರದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದು , ಜ್ಯಾಕ್ವೆಲಿನ್ ಫರ್ನಾಂಡಿಸ್ ಮತ್ತು ನುಶ್ರತ್ ಜೊತೆಗೆ ಅಕ್ಷಯ್ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.