ತಾಳಿಕೋಟಿ

ಶಿಕ್ಷಕರ ಸಮಸ್ಯೆಗಳಿಗೆ ದನಿಯಾಗುವೆ: ಬಿರಾದಾರ

ಶಿಕ್ಷಕರ ಸಮಸ್ಯೆಗಳಿಗೆ ದನಿಯಾಗುವೆ: ಬಿರಾದಾರ

ತಾಳಿಕೋಟೆ28: ಶಿಕ್ಷಕರ ಸಮಸ್ಯೆಗಳಿಗೆ ದನಿಯಾಗುವೆ. ಅವರುಗಳು ನೆಮ್ಮದಿಯಿಂದ ಶಾಲಾ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ನೆರವಾಗುವೆ ಎಂದು ವಿಜಯಪುರ ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಬಿರಾದಾರ ಹೇಳಿದರು.

ತಾಲೂಕಿನ ಹಿರೂರ ಗ್ರಾಮದಲ್ಲಿನ ಕರ್ನಾಟಕ ಗ್ರಾಮೀಣ ವಿದ್ಯಾ ಅಭಿವೃದ್ಧಿ ಸಂಘದ ಅಡಿಯಲ್ಲಿ ನಡೆಯುತ್ತಿರುವ  ಭೋಗೇಶ್ವರ ಪ್ರೌಢ ಶಾಲೆಯಲ್ಲಿ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ(ರಿ) ಬೆಂಗಳೂರು ತಾಲೂಕ ಘಟಕ ತಾಳಿಕೋಟೆಯ ನೂತನ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. 

ಶಿಕ್ಷಕವೃಂದ ತಮ್ಮ ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ ಕಾಲಮಿತಿಯಲ್ಲಿ ಕೆಲಸ ನಿರ್ವಹಿಸಿಕೊಡುವೆ. ಇಲಾಖೆ, ಶಿಕ್ಷಕರು, ಶಾಲೆ ಮಧ್ಯೆ ಕೊಂಡಿಯಾಗಿ ವಿದ್ಯಾಥರ್ಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆವಂತೆ ಅಗತ್ಯದ ಎಲ್ಲ ಪ್ರಯತ್ನಗಳನ್ನೂ ಮಾಡುವೆ. ಎಲ್ಲ ಪದಾಧಿಕಾರಿಗಳು ಸಂಘಟಿತರಾಗಿ ಹಿರಿಯ ಶಿಕ್ಷಕರ ಮಾರ್ಗದರ್ಶನದಲ್ಲಿ ಕೆಲಸ ಮಾಡೋಣ ಎಂದರು.

ಮುಖ್ಯ ಅಥಿತಿಯಾಗಿದ್ದ ಪೀರಾಪುರ ಸರ್ಕಾರಿ ಪ್ರೌಢ ಶಾಲೆಯ ಸಿ.ಎನ್.ರಾವ್ ರಾಷ್ಟ್ರೀಯ ಉತ್ತಮ ವಿಜ್ಞಾನ ಪ್ರಶಸ್ತಿ ಪುರಸ್ಕೃತ ಶಿಕ್ಷಕ  ವಿದ್ಯಾಧರ ಯಾತಗಿರಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮೂಲ ವಿಜ್ಞಾನದಲ್ಲಿ ನೂರಾರು ಅವಕಾಶಗಳಿವೆ ಅದರೆಡೆಗೆ ವಿದ್ಯಾರ್ಥಿಗಳು ಗಮನಹರಿಸಬೇಕು, ವಿಜ್ಞಾನಿಗಳ ಸಂಶೋಧನೆ ಕೊಡುಗೆಗಳ ವಿವರಿಸಿದರು.

 ರಾಜ್ಯ ಉಪಾಧ್ಯಕ್ಷ ಎಂ.ಕೆ.ಬಿರಾದಾರ, ತಾಳಿಕೋಟಿ ತಾಲೂಕ ಘಟಕದ ಅಧ್ಯಕ್ಷ ರಾಜು ರಾಠೋಡ ಮಾತನಾಡಿದರು. ಅಧ್ಯಕ್ಷತೆಯನ್ನು  ಕೆ.ಜಿ.ವ್ಹಿ.ಎ.ಸಂಘದ ಸದಸ್ಯ ಜಿ.ಬಿ.ಪಡೆಕನೂರ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಮಲ್ಲನಗೌಡ ಹಡಲಗೇರಿ, ತಾಲ್ಲೂಕ ಘಟಕದ  ಗೌರವಾಧ್ಯಕ್ಷ ಐ.ಆರ್.ಚಿಮ್ಮಲಗಿ, ಉಪಾಧ್ಯಕ್ಷ ಎಂ.ಎ.ಬಾಗೇವಾಡಿ, ಕಾರ್ಯದರ್ಶಿ ಐ.ಬಿ.ಸಜ್ಜನ, ಖಜಾಂಚಿ ವೈ.ಬಿ.ಬಡಿಗೇರ, ರಾಜ್ಯ ಪರಿಷತ್ ಸದಸ್ಯ ಬಿ.ಎಚ್.ಏವೂರ, ಸಂಘಟನಾ ಕಾರ್ಯದರ್ಶಿ ಆನಂದ ತಳವಾರ, ಸಹ ಕಾರ್ಯದರ್ಶಿ ಬಿ.ಐ.ಹಿರೇಹೊಳಿ ಅವರುಗಳನ್ನು ಗೌರವಿಸಲಾಯಿತು. ಬಿ.ಕೆ.ಪಾಟೀಲ ಸ್ವಾಗತಿಸಿದರು. ಬಿ.ಎಸ್.ವಡಗೇರಿ ನಿರೂಪಿಸಿದರು. ಬಿ.ಎಚ್.ಏವೂರ ವಂದಿಸಿದರು.



ಸುದ್ದಿ ಓದಿ