ಬಕ್ರೀದ ತ್ಯಾಗ ಸ್ಮರಣೆಯ ಪ್ರತೀಕ
ತಾಳಿಕೋಟೆ 10: ಬಕ್ರೀದ ಹಬ್ಬದ ಪ್ರಯುಕ್ತ ಪಟ್ಟಣದ ಸಾತೋಷಹೀದ ಜಾಮೀಯಾ ಮಸೀದಿಯಲ್ಲಿ ಸಾವಿರಾರು ಮುಸ್ಲೀಂ ಬಾಂಧವರು ಈಜಜಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪ್ರತಿ ಭಾರಿಯೂ ಸಹ ಸಾಮೂಕಿಕ ಪ್ರಾರ್ಥನೆಯನ್ನು ಪಟ್ಟಣದ ಹುಣಸಗಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಲ್ಲಿಸಲಾಗುತ್ತಿತ್ತು. ಆದರೆ ಕಳೆದ ಎರಡು ದಿನಗಳಿಂದ ಜಿ ಟಿಜಿಟಿ ಮೆಳೆ ಇರುವದರಿಂದ ಈದ್ಗಾ ಮೈದಾನದಲ್ಲಿ ಸಲ್ಲಿಸುವ ಸಾಮೂಹಿಕ ಪ್ರಾರ್ಥನೆಯನ್ನು ಮಸೀದಿಯಲ್ಲಿ ಸಲ್ಲಿಸುವಂತೆ ತಿಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ಪಟ್ಟಣದ ಸಾತೋಷಹೀದ ಜಾಮೀಯಾ ಮಸೀದಿ ಸೇರಿದಂತೆ ಹಲವು ಮಸೀದಿಗಳಲ್ಲಿ ಸಾಮೂಹಿಕ ಪ್ರಾಥ್ನೆಯನ್ನು ಸಲ್ಲಿಸಲಾಯಿತು. ಮುಸ್ಲಿಂ ಬಾಂಧವರಿಂದ ಹಬ್ಬದ ಪರಸ್ಪರ ಶುಭಾಶಯಗಳ ವಿನಿಮಯವನ್ನು ಮಾಡಲಾಯಿತು.
ಈದ ಸಾಮೂಹಿಕ ಪ್ರಾರ್ಥನೆಯ ನೇತೃತ್ವವಹಿಸಿ ಪ್ರವಚನ ನೀಡಿದ ಡಾ. ಮಿನ್ಹಾಜುದ್ದೀನ ಖಾಜಿ, ಬಕ್ರೀದ ಹಬ್ಬವು ಪ್ರವಾದಿ ಇಬ್ರಾಹೀಂರು ದೇವಸಂಪ್ರೀತಿಗಾಗಿ ತಮ್ಮ ಪುತ್ರ ಇಸ್ಮಾಯಿಲರನ್ನು ಬಲಿ ಕೊಡಲು ಮುಂದಾದ ಐತಿಹಾಸಿಕ ಘಟನೆಯ ಸ್ಮರಣೆಗಾಗಿ ಆಚರಿಸಲಾಗುತ್ತದೆ. ತ್ಯಾಗ, ಸಹನೆ ಮತ್ತು ಪರಹಿತ ಚಿಂತನೆಯು ಇಸ್ಲಾಂ ಧರ್ಮದ ಉದಾತ್ತ ಮೌಲ್ಯಗಳಾಗಿದ್ದು, ಅವುಗಳನ್ನು ನಾವು ಅಳವಡಿಸಿಕೊಳ್ಳುವ ಅಗತ್ಯ ಇದೆ ಎಂದರು.
ಈ ಸಂದರ್ಭದಲ್ಲಿ ಮುಸ್ಲೀಂ ಧರ್ಮಗುರು ಸೈಯದ್ ಶಕೀಲ್ ಅಹ್ಮದ್ ಖಾಜಿ, ಈದ್ಗಾ ಕಮೀಟಿ ಅಧ್ಯಕ್ಷ ಮಾಸೂಮ್ಸಾಬ ಕೆಂಭಾವಿ, ಮಾಜಿ ಅಧ್ಯಕ್ಷ ಖಾಜಾಹುಸೇನಸಾಬ ಡೋಣಿ, ಉಪಾಧ್ಯಕ್ಷ ಅಬ್ದುಲರಜಾಕ್ ಮನಗೂಳಿ, ಕಾರ್ಯದರ್ಶಿ ಎ.ಡಿ.ಎಕೀನ್, ಪುರಸಭೆ ಉಪಾಧ್ಯಕ್ಷ ಮುಸ್ಥಫಾ ಚೌದ್ರಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಕೆ.ಚೋರಗಸ್ತಿ, ಅಲ್ಲಾಬಕ್ಷ ನಮಾಜಕಟ್ಟಿ, ಗನಿಸಾಬ ಲಾಹೋರಿ, ಯಾಸಿನ ಮಮದಾಪೂರ, ಎ,ಎಸ್,ನಮಾಜಕಟ್ಟಿ, ಡಾ.ಎ.ಎ.ನಾಲಬಂದ, ಫಯಾಜುದ್ದೀನ ಖಾಜಿ, ರೋಶನ ಡೋಣಿ, ಕೆ.ಐ.ಸಗರ, ಎಂ.ಎ.ಮೇತ್ರಿ, ಎ.ಕೆ.ಬಾಗವಾನ, ನಿರಂಜನಶಾ ಮಕಾನದಾರ, ಫಯಾಜ ಉತ್ನಾಳ, ಸತ್ತಾರ ಅವಟಿ, ಮಹಿಬೂಬ ಲಾಹೋರಿ, ರಜಾಕ ಮಮದಾಪೂರ, ಉಸ್ಮಾನಗನಿ ಖಾಜಿ, ಮುಜಾಹೀದ ನಮಾಜಕಟ್ಟಿ ಸೇರಿದಂತೆ ಇತರರು ಇದ್ದರು.