ಯರಗಟ್ಟಿ

ಸಾರ್ವಜನಿಕರ ಕುಂದು ಕೊರತೆಗಳ ಸಭೆ

ಸಾರ್ವಜನಿಕರ ಕುಂದು ಕೊರತೆಗಳ ಸಭೆ

ಯರಗಟ್ಟಿ 22: ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಮತ್ತು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಸಭೆ ದಿ. 21ರಂದು ಜರುಗಿತು.ಸಭೆಯಲ್ಲಿ ಶಾಸಕ ವಿಶ್ವಾಸ ವೈದ್ಯ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ವಿವಿಧ ಕಾರ್ಯಕ್ರಮಗಳ ಮಾಹಿತಿ ಸಂಗ್ರಹಿಸಿದರು.ಈ ವೇಳೆ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರು ಜೆಜೆಎಂ ಕಾಮಗಾರಿಯಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಹಾಗೂ ಪ. ಪಂ. ಪಂಚಾಯತಯಲ್ಲಿ ಹಣ ನೀಡಿದರೆ ಮಾತ್ರ ಉತಾರ ನೀಡುತ್ತಾರೆ. ಹಣ ನೀಡದಿದ್ದರೆ ಅಲೆದಾಡಿಸುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದರು.

ಪಟ್ಟಣದಲ್ಲಿ ಕುಡಿಯುವ ನೀರು 10 ರಿಂದ 15 ದಿನಗಳಿಗೆ ಸರಬರಾಜು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು.ತಹಶೀಲ್ದಾರ ಎಂ. ಎನ್. ಮಠದ, ಪ. ಪಂ. ಮುಖ್ಯಾಧಿಕಾರಿ ಬಿ. ಡಿ. ಕುಮರೇಶಿ, ಕಿರಿಯ ಅಭಿಯಂತರರಾದ ವೆಂಕಟೇಶ ಕಾಮಣ್ಣವರ, ಕಿರಿಯ ಆರೋಗ್ಯ ನಿರೀಕ್ಷಕರಾದ ಪಿ. ಎನ್. ಪಾಟೀಲ ಹಾಗೂ ಸ್ಥಳೀಯರಾದ ಶಿವಾನಂದ ಕರಿಗೋಣ್ಣವರ, ಮಂಜುನಾಥ ತಡಸಲೂರ, ಮೋಹನ ಹಾದಿಮನಿ, ನಿಖಿಲ ಪಾಟೀಲ, ರಾಮನಗೌಡ ಪಾಟೀಲ, ಮಲಿಕಸಾಬ ಬಾಗವಾನ, ಶಂಕರ ಇಟ್ನಾಳ, ಆರ್. ಬಿ. ಗೌಡರ, ಗೌಡಪ್ಪ ಉದಪುಡಿ ಸೇರಿದಂತೆ ಅನೇಕ ಇದ್ದರು.

**

 ಯರಗಟ್ಟಿ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯತ ಆಗಿ ಮೇಲ್ದಜರ್ೆಗೆರಿದೆ. ಆದರಿಂದ ತೊಂದರೆ ಆಗಿದೆ. ಮತ್ತು ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಳ ಇದ್ದ ಕಾರಣ ಕುಡಿಯುವ ನೀರಿನ ಸಮಸ್ಯೆ ಇದೆ ಆದ್ದರಿಂದ ನಗರೋತ್ಥಾನದಲ್ಲಿ ಮೂರು ಬೋರವೆಲ್ ಕೊರಿಸಿ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಮತ್ತು ಪಟ್ಟಣದ ಯುಜಿಡಿ ನಿರ್ಮಾಣದ ಬಗ್ಗೆ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಸಚಿವರಿಗೆ ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

-ಶಾಸಕ ವಿಶ್ವಾಸ ವೈದ 

ಸುದ್ದಿ ಓದಿ