ತಾಳಿಕೋಟಿ

ಎತ್ತಿನ ಅಂತ್ಯಕ್ರಿಯೆಯಲ್ಲಿ ಮಾನವೀಯತೆ ಮೆರೆದ ರೈತ

ಎತ್ತಿನ ಅಂತ್ಯಕ್ರಿಯೆಯಲ್ಲಿ ಮಾನವೀಯತೆ ಮೆರೆದ ರೈತ

ತಾಳಿಕೋಟಿ 08: ಇಂದು ಮನುಷ್ಯ ಸಂಬಧಗಳು ಹಾಳಾಗಿ ಹೋಗಿ ಮಾನವೀಯ ಗುಣಗಳು ನಶಿಸುತ್ತಿವೆ. ಆದರೆ ನಮಗೆ ಅನ್ನಕೊಡುವ ನಮ್ಮ ರೈತನಲ್ಲಿ ಮಾತ್ರ ಇನ್ನೂ ಈ ಗುಣಗಳು ಜೀವಂತವಾಗಿವೆ ಎಂಬುದಕ್ಕೆ ಬಿಳೇಭಾವಿ ಗ್ರಾಮದ ರೈತ ತನ್ನ ಎತ್ತಿನ ಅಂತ್ಯಕ್ರಿಯೆಯಲ್ಲಿ ಮೆರೆದ ಮಾನವೀಯತೆಯೇ ಇದಕ್ಕೆ ಸಾಕ್ಷಿಯಾಗಿದೆ.

ತಾಲೂಕಿನ ಬಿಳೇಭಾವಿ ಗ್ರಾಮದ ರೈತ ಶಾಂತಪ್ಪ ಇಣಚಗಲ್ಲ ಇವರ ತಂದೆಯವರು ಒಂದು ಎತ್ತನ್ನು ಅದು ಸಣ್ಣ ವಯಸ್ಸಿನಲ್ಲಿರುವಾಗಲೆ ಮನೆಗೆ ತಂದು ಹೆತ್ತ ಮಗನಂತೆ ಸಾಕಿ ಸಲುಹಿದರು ಮುಂದೆ ಇದು ದೊಡ್ಡದಾಗಿ ಸುಮಾರು 25 ವರ್ಷಗಳವರೆಗೆ ಇವರ ಕುಟುಂಬಕ್ಕೆ ಆಸರೆಯಾಯಿತು. ಈ ಎತ್ತು ಇಡೀ ಕುಟುಂಬದ ಸದಸ್ಯರ ಪ್ರೀತಿಗೆ ಪಾತ್ರವಾಗಿದ್ದು ಈ ಎತ್ತು ಎರಡು ದಿನಗಳ ಹಿಂದೆ ಅಸುನೀಗಿದಾಗ ಇಡೀ ಕುಟುಂಬ ಒಬ್ಬ ಸದಸ್ಯನನ್ನು ಕಳೆದುಕೊಂಡಂತೆ ದುಃಖಿಸಿತು ಕಾರಣ ಅವರಿಗೆ ಈ ಮೂಕ ಪ್ರಾಣಿಯೊಂದಿಗಿದ್ದ ಅವಿನಾಭಾವ ಸಂಬಧ. 

ರೈತ ಶಾಂತಪ್ಪ ಇಣಚಗಲ್ ಇದರ ಅಂತ್ಯಕ್ರಿಯೆಯನ್ನು ವಿಶೇಷ ರೀತಿಯಲ್ಲಿ ನೇರವೆರಿಸಿದರು. ಈ ಎತ್ತನ್ನು ಸಿಂಗರಿಸಿ ಗ್ರಾಮದ ಜನರನ್ನು ಸೇರಿಸಿ ಗ್ರಾಮದಲ್ಲಿರುವ ಭಾಗಮ್ಮನ ದೇವಸ್ಥಾನದ ಮುಂದೆ ಇರಿಸಿ ವಿಶೇಷ ಪೂಜೆಗೈದು ಮೆರವಣಿಗೆಯನ್ನು ಮಾಡಿ ಅಂತ್ಯದಲ್ಲಿ ಇದರ ಅಂತ್ಯಕ್ರಿಯೆನ್ನು ತಮ್ಮ ತಂದೆಯ ಗೋರಿಯ ಪಕ್ಕದಲ್ಲಿಯೇ ನೆರವೇರಿಸಿ ಮಾನವೀಯತೆಯನ್ನು ಮೆರೆದಿರುವುದು ಇಡೀ ಗ್ರಾಮದ ಜನರ ಪ್ರಶೊಂಸೆಗೆ ಪಾತ್ರವಾಗಿದೆ 

ಸುದ್ದಿ ಓದಿ