ಹೂವಿನ ಹಡಗಲಿ

ಮೆಕ್ಕೆಜೋಳ ತೆನೆಯ ರವದಿಯಲ್ಲಿ ಅರಳಿದ ಮೊಗ್ಗು

ಮೆಕ್ಕೆಜೋಳ ತೆನೆಯ ರವದಿಯಲ್ಲಿ ಅರಳಿದ ಮೊಗ್ಗು

  ಹೂವಿನಹಡಗಲಿ 30:  ಪಟ್ಟಣದ ಪೂರ್ವ ದಿಕ್ಕಿಗೆ ಪುಟ್ಟಗ್ರಾಮ ಮುದೇನೂರು ಗ್ರಾಮದ ಈ ಮಹಿಳೆ ಪಾರ್ವತಿ  ತಳವಾರು ಇಂದು ತಾನು ತಯಾರಿಸಿದ. ಕರಕುಶಲ ವಸ್ತುಗಳನ್ನು ರಾಜ್ಯ. ಅಂತ ರಾಷ್ಟ್ರೀಯ ಮಟ್ಟದಲ್ಲಿ ಮಾರ್ಕೆಟಿಂಗ್ ಕೂಡಾ ಮಾಡುತ್ತಿದ್ದಾರೆ . ಅರೆ ! ಹೀಗೂ ಸಾದ್ಯನಾ ಅಂತಾ ಕೇಳೋರಿಗೆ . ಸಾಧ್ಯ ಎಂದು ತೋರಿಸಿ ಕೊಟ್ಟಿದ್ದಾರೆ ಈ ಗೃಹಿಣಿ . ಈಚೆಗೆ ನಡೆದ ಜಿ.20 ಕಾರ್ಯ ಕ್ರಮಕ್ಕೆ ವಿದೇಶದಿಂದ ಬರುವ ಗಣ್ಯರಿಗೆ ಸ್ವಾಗತಕ್ಕೆ ಇವರ ತಯಾರಿಸಿದ ಮೊಗ್ಗು ಮತ್ತು ಹೂವುಗಳು ಮೆಚ್ಚುಗೆ ವ್ಯಕ್ತವಾಗಿದೆ. ಮೆಕ್ಕೆಜೋಳ ತೆನೆಯ ರವದಿಯಲ್ಲಿ ಮೊಗ್ಗು. ಹೂವುಗಳು. ಗೊಂಬೆಗಳ ತಯಾರಿಕೆ. ಮನೆಯ ಬಾಗಿಲು ತೋರಣಗಳು.ಹೂ ಕುಂಡಲ ಜತೆಗೆ ಸಭೆ  ಸಮಾರಂಭಗಳಲ್ಲಿ ಸ್ವಾಗತ ಕೋರಲು ಮೊಗ್ಗು. ಹೂವುಗಳು ಜನರ ಪ್ರಶಂಸೆ ಗಳಿಸಿವೆ.  " ಹೂವಿನಹಡಗಲಿ ಸುತ್ತಮುತ್ತಲಿನ ಸಂಘ.ಸಂಸ್ಥೆಗಳು ಇವರ ಕಲೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ.  ವಿಜಯನಗರ ಜಿಲ್ಲೆಯ ಹೂವಿನಹಡಗಲಿ  ತಾಲ್ಲೂಕಿನ ಮುದೇನೂರು ಗ್ರಾಮದ ಪಾರ್ವತಿ ಶ್ರೀ ಧರ ತಳವಾರು ಇವರು ಸಂಜೀವಿನಿ ಮಹಿಳಾ ಒಕ್ಕೂಟದ ಅದ್ಯಕ್ಷರಾಗಿದ್ದಾಳೆ. ಜತೆಗೆ ತಾಲೂಕಿನ ಮಹಿಳೆಯರಿಗೆ ತರಬೇತಿ ನೀಡಿ ಸ್ವಾವಲಂಬಿ ಜೀವನದ ಕಂಡು ಕೊಳ್ಳಲು ಕರಕುಶಲ ಕಲೆ ತರಬೇತಿ ಬದುಕು ಕಟ್ಟಿ ಕೊಳ್ಳುವ ಲ್ಲಿ ಸಹಕಾರಿಯಾಗಿದೆ. 


ಸುದ್ದಿ ಓದಿ