84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಾಡೋಜ ಡಾ. ಕಂಬಾರ ಅಭಿನಂದನಾ ಸಮಾರಂಭ

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ   ನಾಡೋಜ ಡಾ. ಕಂಬಾರ ಅಭಿನಂದನಾ ಸಮಾರಂಭ

ಲೋಕದರ್ಶನ ವರದಿ 

ಬಳ್ಳಾರಿ 23:ನಾಡೋಜ ಡಾ.ಚಂದ್ರಶೇಖರ ಕಂಬಾರ ಅವರ ಅಭಿನಂದನಾ ಸಮಾರಂಭ ಮತ್ತು ಸಾಹಿತ್ಯ ಸಂವಾದದ 2ನೇ ದಿನದ ಕಾರ್ಯಕ್ರಮವನ್ನು ಮಂಟಪ ಸಭಾಂಗಣದಲ್ಲಿ ಏರ್ಪಡಿಸಲಾದ 3ನೇ ಗೋಷ್ಠಿಯಲ್ಲಿ ಸಂವಾದದಲ್ಲಿ ಹಿರಿಯ ವಿಮರ್ಶಕರಾದ ಡಾ. ಎಚ್.ಎಸ್.ರಾಘವೇಂದ್ರರಾವ್ ಅವರು ಸಂವಾದದ ಸ್ವರೂಪವನ್ನು ವಿವರಿಸುತ್ತ ಬಯಲಿನಲ್ಲಿ ಕನ್ನಡ ವಿಶ್ವವಿದ್ಯಾಲಯದಂತಹ ಆಲಯ ಕಟ್ಟಿದ ನಾಡಿನ ಬಹುದೊಡ್ಡ ಕವಿಯಾದ ಕಂಬಾರರ ಕನ್ನಡ ವಿಶ್ವವಿದ್ಯಾಲಯದ ಕನಸು ನನಸು ಮಾಡಿದ ದಿಕ್ಕನ್ನು ಬದಲಾವಣೆ ಮಾಡಲು ಎಂದೆಂದಿಗೂ ಆಗುವುದಿಲ್ಲ. ಆ ಕನಸಿನ ದೊಡ್ಡತನಕ್ಕೆ ಮತ್ತು ಸ್ವಂತಿಕೆಗೆ ಕನ್ನಡ ವಿಶ್ವವಿದ್ಯಾಲಯ ಸಾಕ್ಷಿಯಾಗಿದೆ. 

ಕಂಬಾರರ ಏಕಾಂತ ಮತ್ತು ಲೋಕಾಂತ ಎರಡನ್ನು ಉಳಿಸಿಕೊಳ್ಳುವ ಶಕ್ತಿ ನಮಗೆ ಇಂದಿನ ಸವಾಲಾಗಿದೆ. ಹಾಗೂ ಮಾದರಿಯಾಗಿದೆ. 60 ವರ್ಷದ ಅವರ ಬರವಣಿಗೆಯ ಬದುಕಿನ ಜೊತೆ ಸಂವಾದ ನಡೆಸಲು ಈ ವೇದಿಕೆ ಒಂದು ನೆಪವಾಗಿದೆ. ಸಂವಾದದ ಉದ್ದೇಶ ಬೆಳಕನ್ನು ಹುಟ್ಟಿಸುವುದಾಗಿದೆ. ಕಂಬಾರರನ್ನು ನಿರಾಕರಿಸಲು ಒಪ್ಪಲು ಆವೇಶ ಬೇಕಾಗಿಲ್ಲ. ಅವರು ವಿಮಶರ್ೆ ಮೀರಿದ ಕವಿಯಾಗಿ ಬದುಕಬಲ್ಲರು. ಕಂಬಾರರು ತಮ್ಮ ಬರಹದಲ್ಲಿ 40 ವರ್ಷಗಳಿಂದ ಬಹುಸಂಖ್ಯಾತರನ್ನು ಪ್ರತಿನಿಧಿಸಿದ ಅಲ್ಪಸಂಖ್ಯಾತರು. ಅವರ ಕಾವ್ಯದಲ್ಲೇ ಸಂವಾದಗಳಿವೆ. ವೈದಿಕತೆಯ ಜೊತೆಗೆ ಪಾಶ್ಚಾತ್ಯದ ಜೊತೆಗೆ ಲಿಖಿತ ಪರಂಪರೆಯ ಜೊತೆಗೆ ಕಂಬಾರರ ಗುದ್ದಾಟವಿತ್ತು. ಅವರ ಕೃತಿಗಳು ಗತಕಾಲ ಇತಿಹಾಸ ವರ್ತಮಾನ ಪಾಶ್ಚಾತ್ಯ ಅನ್ಯ ಗಳೆಲ್ಲವನ್ನು ನೋಡುತ್ತವೆ. ಸಮಕಾಲೀನ ಒತ್ತಡಗಳನ್ನು ಮೀರುವುದನ್ನು ಕಂಬಾರರ ಎಲ್ಲ ಕೃತಿಗಳಲ್ಲಿ ಕಾಣಬಹುದು. ಕಂಬಾರರು ಸದಾ ಹೇಳುತ್ತಿದ್ದಾರೆ ಆದರೆ ನಾವು ಕೇಳುತ್ತಿಲ್ಲ ಎಂದು ನುಡಿದರು. 

ನಂತರ ಸಂವಾದಕರಾಗಿ ಡಾ. ಸಿ.ಕೆ. ನಾವಲಗಿ, ವಿ. ಕೃಷ್ಣಮೂತರ್ಿರಾವ್, ಡಾ. ರಾಘವೇಂದ್ರ ಪಾಟೀಲ, ಡಾ. ಹೇಮ ಪಟ್ಟಣಶೆಟ್ಟಿ, ಡಾ.ಬಾಳಾಸಾಹೇಬ ಲೋಕಾಪುರ ಇವರು ಕಂಬಾರರ ಶಿವಾಪುರ, ಪರಂಪರೆ ಮತ್ತು ಆಧುನಿಕತೆ ಏಕಿಭವಿಸಿದ ರೀತಿ, ಹೆಣ್ಣಿನ ಭಾವಲೋಕ, ಭಾವುಕತೆ, ಬೌದ್ಧಿಕತೆ ಕುರಿತು ಕಂಬಾರರಿಗೆ ಪ್ರಶ್ನಿಸಿದರು. 

ಉತ್ತರ ನೀಡುತ್ತ ಡಾ. ಕಂಬಾರರು ಮೆಕಾಲೆ ನಮಗೆ ಇತಿಹಾಸದ ಕಲ್ಪನೆ ಕೊಡುವುದಕ್ಕೂ ಮೊದಲೆ ನಮ್ಮಲ್ಲಿ ಕಾಲದ ಕಲ್ಪನೆ ಅಖಂಡವಾಗಿತ್ತು. ರಾಮ ಅಯೋಧ್ಯೆಯಲ್ಲಿದ್ದಾನೆ ಎಂದರೆ ಅದು ಇತಿಹಾಸವಾಗುತ್ತದೆ. ಹೃದಯದಲ್ಲಿದ್ದಾನೆ ಎಂದರೆ ಅದು ಪುರಾಣವಾಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮದು ಅಖಂಡ ಕಾಲದ ಕಲ್ಪನೆ. ಆದರೆ ಮೆಕಾಲೆಯು ಪ್ರವೇಶಿಸಿ ನಮ್ಮನ್ನು ಭೂತಕಾಲದಿಂದ ಕಿತ್ತು ದೂರ ಸರಿಸಿದನು. ಪಂಪನ ಕಾಲಕ್ಕೆ ಒಡ್ಡೋಲಗದಲ್ಲಿದ್ದ ಪಂಡಿತರನ್ನು(ಅಡ್ರೆಸ್ ಮಾಡಿ) ಸಂಭೋದಿಸಿ ಕಾವ್ಯ ಬರೆದರೆ, ವಚನ ಕಾಲದಲ್ಲಿ ನೇರವಾಗಿ ದೇವರನ್ನು ಸಂಭೋದಿಸಿ ಕಾವ್ಯ ರಚನೆಯಾಯಿತು. ಹರಿಹರ ರಾಘವಾಂಕರು ಜನರನ್ನು ಸಂಭೋದಿಸಿ ಬರೆದರೆ, ನವ್ಯಕಾಲದಲ್ಲಿ ವೈಯಕ್ತಿಕತೆಯನ್ನು ಸಂಭೋದಿಸಿ ಕಾವ್ಯ ರಚಿಸಲಾಯಿತು. ಆದರೆ ನಾನು ಜನಪದರಿಗೆ ಸಮುದಾಯದವರಿಗೆ ಸಂಬಂಧಿಸಿದವನು. ಆದ್ದರಿಂದ ಇವರನ್ನೇ ಸಂಭೋದಿಸಿ ಕಾವ್ಯ ಬರೆದೆ ಎಂದು ತಿಳಿಸಿದರು.

ತಾಯಿಯನ್ನು ಕುರಿತು ಮಾತನಾಡುತ್ತ ನನ್ನ ತಾಯಿಯೇ ನನಗೆ ಸರಸ್ವತಿ. ತಾಯಿ ಮಿಥ್ ಕಲಿಸಿದರೆ ತಂದೆ ಇತಿಹಾಸ ಕಲಿಸುತ್ತಾನೆ. ತಾಯಿಯು ಕಾಪಾಡುವ ಗುಣ ಕಲಿಸಿದರೆ ತಂದೆ ಸ್ಪಧರ್ೆಯನ್ನು ಕಲಿಸುತ್ತಾನೆ. 14 ಲೋಕಗಳ ಕಲ್ಪನೆ ಬಂದಿದ್ದೆ ತಾಯಿಯಿಂದ. ಬದುಕಿನ ಆನಂದ ಬದುಕಿನ ಗುರಿ ಕೊಡುವುದು ಹೆಣ್ಣು ಎಂದು ತಾಯಿ ಸಂಸ್ಕೃತಿಯನ್ನು ಪ್ರತಿನಿಧಿಸಿದರು. 

ಜೆ.ಎಚ್. ಪಟೇಲರು, ಗೋಪಾಲಗೌಡರು, ಕಾಗೋಡು ತಿಮ್ಮಪ್ಪನವರು ಹೇಳತೇನಾ ಕೇಳಾ ಕವಿತೆಯನ್ನು ಕೇಳಲು ಇಷ್ಟಪಡುತ್ತಿದ್ದರು. ರಾಮಮನೋಹರ ಲೋಹಿಯಾ ಅವರು ಬಂದಾಗ ನನ್ನ ಕವಿತೆಯನ್ನು ಕೇಳಿಸಿಕೊಂಡು ವಸಾಹತುಶಾಹಿ ವಿರುದ್ಧ ಎಷ್ಟು ದೈರ್ಯವಾಗಿ ಕವಿತೆ ಬರೆದಿದ್ದಾನೆ ಎಂದು ಮೆಚ್ಚಿದಾಗ ನನಗೆ ಧೈರ್ಯ ಬಂತು. ಡಾ.ಡಿ.ಆರ್.ನಾಗರಾಜ ಅವರು ಮೊಟ್ಟ ಮೊದಲು ಈ ಕವಿತೆಯ ಒಳಹನ್ನು ಗುರುತಿಸಿದ್ದರು. ಕೃಷ್ಣಮೂತರ್ಿ ಪುರಾಣಿಕರಿಗೆ, ಬಸವರಾಜ ಕಟ್ಟಿಮನಿ ಅವರಿಗೆ, ನನ್ನ ಕವಿತೆಯ ನನ್ನ ಮೇಲೆ ಪ್ರೀತಿಯಿತ್ತು. ಪಿಯುಸಿ ಓದುತ್ತಿರುವಾಗ ಪ್ರೊಫೆಸರ್ಗಳಾದ ಬಸವರಾಜ ಕಟ್ಟಿಮನಿ, ಮಿಜರ್ಿ ಅಣ್ಣಾರಾಯರು ಬಹಳ ಪ್ರೀತಿಯಿಂದ ಕೊಠಡಿಗೆ ಬರುತ್ತಿದ್ದರು. ಇದು ಸಾಮಾನ್ಯ ಮಾತಲ್ಲ ಎಂದು ವಿದ್ಯಾಥರ್ಿಗಳಿಗೆ ತಿಳಿಸುತ್ತ ಇಡೀ ಪ್ರಪಂಚಕ್ಕೆ ಕಥೆ ಹೇಳುವುದನ್ನು ಕಲಿಸಿದವರೆ ನಾವು ಎಂದು ಹೆಮ್ಮೆಯಿಂದ ಹೇಳಿ ತಾವೇ ಬರೆದ ಪದ್ಯವನ್ನು ಹಾಡಿ ಎಲ್ಲರಿಗೂ ಔತಣ ಉಣಿಸಿದರು.

ಡಾ. ಅಮರೇಶ ನುಗಡೋಣಿ ಅವರು ನಿರೂಪಿಸಿ ವಂದಿಸಿದರು. ಮಾನ್ಯ ಕುಲಪತಿಯವರು, ಕುಲಸಚಿವರು, ಶ್ರೀಮತಿ ಸತ್ಯಭಾಮ ಕಂಬಾರ ಹಾಗೂ ಮಕ್ಕಳು, ಶ್ರೀ ಸಿದ್ಧನಗೌಡ, ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು, ಅಧ್ಯಾಪಕರು, ವಿದ್ಯಾಥರ್ಿಗಳು, ಸಿಬ್ಬಂದಿಗಳು ಸಂವಾದವನ್ನು ಆಲಿಸಿದರು. ಸಂವಾದ ಕಾರ್ಯಕ್ರಮಕ್ಕೂ ಮೊದಲು ಗಜಾಪುರದ ಗೊಂದಲಿಗರ ಹನುಮಂತಪ್ಪ ಮತ್ತು ಸಂಗಡಿಗರು ಗೊಂದಲಿಗರ ಪದಗಳನ್ನು ಹಾಡಿದರು

ಸುದ್ದಿ ಓದಿ