3ನೇ ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್ ಆರು ಸ್ವರ್ಣ ಪದಕ ಹಂಚಿಕೊಂಡ ಹರಿಯಾಣ, ರೈಲ್ವೇಸ್ ಬಾಕ್ಸರ್ಗಳು, ಪಂಜಾಬ್ ತೆಕ್ಕೆಗೆ 2 ಪದಕ

3ನೇ ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್  ಆರು ಸ್ವರ್ಣ ಪದಕ ಹಂಚಿಕೊಂಡ ಹರಿಯಾಣ, ರೈಲ್ವೇಸ್ ಬಾಕ್ಸರ್ಗಳು, ಪಂಜಾಬ್ ತೆಕ್ಕೆಗೆ 2 ಪದಕ

ಬಳ್ಳಾರಿ 07:ಇನ್ಸ್ಪೈರ್ ಇನ್ಸ್ಟಿಟ್ಯೂಟ್ ಆಫ್ ಸ್ಪೋಟ್ಸರ್್ ಅಂಗಳದಲ್ಲಿ ಭಾನುವಾರ ಮುಕ್ತಾಯಗೊಂಡ ಜೆಎಸ್ಡಬ್ಲ್ಯು ಸಹಯೋಗದ 3ನೇ ಎಲೈಟ್ ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಹರಿಯಾಣ ಮತ್ತು ರೈಲ್ವೇಸ್ ಬಾಕ್ಸರ್ಗಳು ಆರು ಸ್ವರ್ಣ ಪದಕಗಳನ್ನು ಹಂಚಿಕೊಂಡರೆ, ಪಂಜಾಬ್ ಬಾಕ್ಸರ್ಗಳು ಎರಡು ಬಂಗಾರ ಪದಕಗಳಿಗೆ ಮಾತ್ರ ಸೀಮಿತಗೊಂಡಿದ್ದಾರೆ.ಈ ಮಧ್ಯೆ, ವಿಶ್ವ ಚಾಂಪಿಯನ್ಷಿಪ್ನಲ್ಲಿ ಕ್ವಾರ್ಟರ್ಫೈನಲ್ ತಲುಪಿದ್ದ ಮನೀಶಾ ಮೌನ್ 54ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಕಳೆದ ನವೆಂಬರ್ನಲ್ಲಿ ನವದೆಹಲಿಯಲ್ಲಿ ನಡೆದ ವಿಶ್ವ ಚಾಂಪಿಯನ್ಷಿಪ್ನಲ್ಲಿ ವಿಶ್ವ ಚಾಂಪಿಯನ್ಷಿಪ್ನ ಕ್ರಿಸ್ಟಿನಾ ಕ್ರುಜ್ ಮತ್ತು ಡಿನಾ ಝೋಲಾಮನ್ ವಿರುದ್ಧ ಉತ್ತಮ ಪ್ರದರ್ಶನ ತೋರಿದ್ದ ಹರಿಯಾಣದ ಮನೀಶಾ ಫೈನಲ್ನಲ್ಲಿ ನಿರೀಕ್ಷಿತ ಪ್ರದರ್ಶನ ಹೊರಹಾಕುವಲ್ಲಿ ವಿಫಲಗೊಂಡರು. ಹೀಗಾಗಾ 54ಕೆಜಿ ವಿಭಾಗದಲ್ಲಿ ಆಲ್ ಇಂಡಿಯಾ ಪೊಲೀಸ್ನ ಮೀನಾ ಕುಮಾರಿ ದೇವಿ ವಿರುದ್ಧ ಪರಾಭವಗೊಂಡು ರಜತ ಪದಕಕ್ಕೆ ಸಮಾಧಾನಪಟ್ಟುಕೊಂಡಿದ್ದಾರೆ.ಇವರಲ್ಲದೆ ಹರಿಯಾದ ಇತರ ಬಾಕ್ಸರ್ಗಳಾದ ಶಶಿ ಚೋಪ್ರಾ(57ಕೆಜಿ) ಮತ್ತು ನೂಪುರ್(75ಕೆಜಿ) ಸಹ ತಮ್ಮ ಎದುರಾಳಿಗಳ ವಿರುದ್ಧ ಸೋಲನುಭವಿಸಿ ಮನೀಶಾ ಹಾದಿಯನ್ನೇ ಹಿಡಿದರು. ಆದರೆ ಪಿಂಕಿ ರಾಣಿ ಜಂಗ್ರ (51ಕೆಜಿ), ನೀರಜ್(60ಕೆಜಿ) ಮತ್ತು ಪೂಜಾ ರಾಣಿ(81ಕೆಜಿ) ಇತರ ಬಾಕ್ಸರ್ಗಳ ದಿಟ್ಟ ಪ್ರತಿರೋಧದ ನಡುವೆಯೂ ಹರಿಯಾಣಕ್ಕೆ ಮೂರು ಚಿನ್ನದ ಪದಕ ತಂದುಕೊಟ್ಟರು.ಇದರೊಂದಿಗೆ ಚಾಂಪಿಯನ್ಷಿಪ್ನ ಅಂತಿಮ ದಿನವಾದ ಭಾನುವಾರ 10 ಚಿನ್ನದ ಪದಕಗಳ ಪೈಕಿ ಹರಿಯಾಣ ಮತ್ತು ರೈಲ್ವೇಸ್ ಬಾಕ್ಸರ್ಗಳು ತಲಾ ಮೂರರಂತೆ ಆರು ಪದಕಗಳನ್ನು ತಮ್ಮದಾಗಿಸಿಕೊಂಡರು. ಸೋನಿಯಾ ಲಾಥರ್(57ಕೆಜಿ), ನೀತು (75ಕೆಜಿ) ಮತ್ತು ಸೀಮಾ ಪೂನಿಯಾ (81+ಕೆಜಿ) ಆರ್ಎಸ್ಪಿಬಿ ಪರ ಪದಕ ಗೆದ್ದ ಸಾಧನೆ ಮಾಡಿದರು. ಮಂಜು ರಾಣಿ (48ಕೆಜಿ) ಮತ್ತು ಸಿಮ್ರಂಜಿತ್ ಕೌರ್ ಪಂಜಾಬ್ ಪರ ಸ್ವರ್ಣ ಪದಕ ಗೆದ್ದರೆ, 69ಕೆಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್ಷಿಪ್ ಪದಕ ವಿಜೇತೆ ಅಸ್ಸಾಂನ ಲೋವ್ಲಿನಾ ಬೋಗರ್ೊಹೈನ್ ಚಿನ್ನಕ್ಕೆ ಮುತ್ತಿಟ್ಟರು..


ಸುದ್ದಿ ಓದಿ